AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಯಸ್ಸಿಗೂ ಮೀರಿದ ಪ್ರತಿಭೆ; ಪುಟ್ಟ ಬಾಲಕಿಯ ಜಿಮ್ನಾಸ್ಟಿಕ್ ವಿಡಿಯೋ ವೈರಲ್

Viral Video: ಜಿಮ್ನಾಸ್ಟಿಕ್ ಚಲನೆಗಳು ಸುಲಭವಲ್ಲ. ಅದಕ್ಕೆ ನಿರ್ದಿಷ್ಟ ತರಬೇತಿ, ಶ್ರದ್ಧೆ , ಆಸಕ್ತಿ ಜತೆಗೆ ಏಕಾಗ್ರತೆ ಬೇಕೇಬೇಕು. ಪುಟ್ಟ ಬಾಲಕಿಯು ವಯಸ್ಸಿಗೂ ಮೀರಿದ ಪ್ರತಿಭೆಯನ್ನು ಹೊಂದಿದ್ದಾಳೆ.

ವಯಸ್ಸಿಗೂ ಮೀರಿದ ಪ್ರತಿಭೆ; ಪುಟ್ಟ ಬಾಲಕಿಯ ಜಿಮ್ನಾಸ್ಟಿಕ್ ವಿಡಿಯೋ ವೈರಲ್
ವಯಸ್ಸಿಗೂ ಮೀರಿದ ಪುಟ್ಟ ಬಾಲಕಿಯ ಜಿಮ್ನಾಸ್ಟಿಕ್ ಚಲನೆಗಳು
TV9 Web
| Edited By: |

Updated on:Aug 19, 2021 | 12:13 PM

Share

ಈಗಿನ ಮಕ್ಕಳೆಲ್ಲಾ ತುಂಬಾ ಬುದ್ಧಿವಂತರು ಹಾಗೂ ಪ್ರತಿಭಾವಂತರು. ಬಹುಬೇಗ ಎಲ್ಲಾ ವಿದ್ಯೆಯನ್ನು ಕಲಿಯುತ್ತಾರೆ. ಇಲ್ಲೋರ್ವ ಬಾಲಕಿಯ ಜಿಮ್ನಾಸ್ಟಿಕ್ ಚಲನೆಗಳು ನಿಜವಾಗಿಯೂ ಅಚ್ಚರಿ ಮೂಡಿಸುತ್ತಿದೆ. ಬಾಲಕಿಯ ಪ್ರತಿಭೆಗೆ ನೆಟ್ಟಿಗರಿಂದ ಶ್ಲಾಘನೆಗಳು ವ್ಯಕ್ತವಾಗಿದೆ. ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ಇಷ್ಟಪಟ್ಟಿದ್ದಾರೆ.

ಜಿಮ್ನಾಸ್ಟಿಕ್ ಚಲನೆಗಳು ಸುಲಭವಲ್ಲ. ಅದಕ್ಕೆ ನಿರ್ದಿಷ್ಟ ತರಬೇತಿ, ಶ್ರದ್ಧೆ , ಆಸಕ್ತಿ ಜತೆಗೆ ಏಕಾಗ್ರತೆ ಬೇಕೇಬೇಕು. ಪುಟ್ಟ ಬಾಲಕಿಯು ವಯಸ್ಸಿಗೂ ಮೀರಿದ ಪ್ರತಿಭೆಯನ್ನು ಹೊಂದಿದ್ದಾಳೆ. ಇವಳ ಜಿಮ್ನಾಸ್ಟಿಕ್ ಚಲನೆಗಳು ನಿಜವಾಗಿಯೂ ನೆಟ್ಟಿಗರನ್ನು ಆಶ್ಚರ್ಯವನ್ನುಂಟು ಮಾಡುತ್ತದೆ. ಬಾಲಕಿಯ ಪ್ರತಿಭೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಬಾಲಕಿ ಕೆಂಪು ಬಣ್ಣದ ಶರ್ಟ್ ಹಾಗೂ ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದಾಳೆ. ತರಬೇತಿದಾರರು ಬಾಲಕಿಯ ಚಲನೆಗಳನ್ನು ಪರಿಶೀಲಿಸುತ್ತಿದ್ದಾರೆ. ಒಂದು ನಿಮಿಷ 11 ಸೆಕೆಂಡುಗಳ ಈ ವಿಡಿಯೋ ಅಚ್ಚರಿ ಮೂಡಿಸುವಂತಿದೆ. ಟ್ವಿಟರ್​ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು 4.9 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. 96,000ಕ್ಕೂ ಹೆಚ್ಚು ಲೈಕ್ಸ್​ಗಳನ್ನು ಪಡೆದುಕೊಂಡಿದೆ.

ಒಲಿಂಪಿಕ್​ನಲ್ಲಿ ಐದು ಬಾರಿ ಚಿನ್ನದ ಪದಕ ಗೆದ್ದ ನಾಡಿಯಾ ಕೊಮನೆಸಿ ಅವರ ಗಮನ ಸೆಳೆದ ಪುಟ್ಟ ಬಾಲಕಿಯ ವಿಡಿಯೋ ವೈರಲ್ ಆಗಿದೆ. ಅವರು ಕೂಡಾ ರೀಟ್ವೀಟ್ ಮಾಡಿದ್ದಾರೆ. ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಸಕತ್ ವೈರಲ್ ಆಗಿದ್ದು ಅದ್ಭುತ ಪ್ರತಿಭೆ ಎಂಬ ಶ್ಲಾಘನೆ ವ್ಯಕ್ತವಾಗಿದೆ.

ಇದನ್ನೂ ಓದಿ:

Tokyo Olympics: ಜಿಮ್ನಾಸ್ಟಿಕ್​ನಲ್ಲೂ ಭಾರತಕ್ಕೆ ಕೈತಪ್ಪಿದ ಪದಕ: ಫೈನಲ್ ಪ್ರವೇಶಿಸಲು ಪ್ರಣತಿ ವಿಫಲ

Tokyo Olympics 2020: ಪಿವಿ ಸಿಂಧೂ ಭರ್ಜರಿ ಆರಂಭ: ಇಸ್ರೇಲ್ ವಿರುದ್ಧ ಭಾರೀ ಅಂತರದ ಗೆಲುವು

(Girls Gymnastics Moves Incredible flexibility video goes viral)

Published On - 1:04 pm, Wed, 18 August 21

Follow Us
Web contact
Web contact

TV9 Kannada

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!