ಶನಿ ಗ್ರಹದಂತೆ ಕಂಡ ಚಂದ್ರ! ಅಚ್ಚರಿಯ ವಿದ್ಯಮಾನದ ಈ ಚಿತ್ರವನ್ನು ನೋಡಿ
ಸೂರ್ಯ ಗ್ರಹಣದ ಎರಡು ದಿನದ ಮೊದಲು ಈ ಅದ್ಭುತ ಚಿತ್ರ ಗೋಚರವಾಗಿದೆ. ಚಂದ್ರ ಸ್ಪಟಿಕದಂತೆ ಹೊಳೆಯುತ್ತಿದ್ದಂತೆ ಭಾಸವಾಗುತ್ತಿದೆ. ಶನಿ ಗ್ರಹದಂತೆ ಚಂದ್ರ ಗೋಚರಿಸುತ್ತಿದ್ದ.
ಗೋಚರಿಸುವ ಸೂರ್ಯ- ಚಂದ್ರ ಎಲ್ಲವೂ ಕೂತೂಹಲ ಕೆರಳಿಸುವ ವಿಷಯಗಳೇ. ಅದರಲ್ಲಿಯೂ ಕತ್ತಲಿನಲ್ಲಿ ವಿಶಾಲವಾದ ಆಕಾಶದಲ್ಲಿ ಗೋಚರಿಸುವ ಕೆಲವು ವಿದ್ಯಮಾನಗಳು ಅಚ್ಚರಿಯನ್ನು ಮೂಡಿಸುತ್ತವೆ. ವಿಶೇಷವಾಗಿ ಗೋಚರಿಸುವ ಕೆಲವು ದೃಶ್ಯಗಳು ನಂಬಲು ಅಸಾಧ್ಯವೆನಿಸಿದರೂ ಅವುಗಳೆಲ್ಲ ಪ್ರಕೃತಿಯ ಸಹಜತೆ. ಶನಿ ಗ್ರಹದಂತೆ ಗೋಚರವಾಗುತ್ತಿರುವ ಚಂದ್ರನ ಸುಂದರ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ದೃಶ್ಯ ನೋಡಿದ ಕೆಲವರು ಅಚ್ಚರಿಗೊಂಡಿದ್ದರೆ ಇನ್ನು ಕೆಲವರು ಸುಂದರವಾಗಿದೆ ಎಂಬ ಅಭಿಪ್ರಾಯಗಳನ್ನು ಹೇಳಿದ್ದಾರೆ.
ಗ್ವಾಟೆಮಾಲಾದ ಫ್ರಾನ್ಸಿಸ್ಕೋ ಸೊಜುಯೆಲ್ ಎನ್ನುವವರು ಎರಡು ವರ್ಷಗಳ ಹಿಂದೆ ಕ್ರಿಸ್ಮಸ್ ಮುನ್ನಾದಿನದಂದು ಚಿತ್ರವನ್ನು ಸೆರೆಹಿಡಿದಿದ್ದಾರೆ. ಈ ಚಿತ್ರ ಎಲ್ಲರನ್ನೂ ಬೆರಗುಗೊಳಿಸುವಂತಿದೆ. ಚಿತ್ರದಲ್ಲಿ ಗಮನಿಸುವಂತೆ ಚಂದ್ರನ ಪ್ರಕಾಶಮಾನವಾಗಿ ಹೊಳೆಯುತ್ತಿದ್ದಾನೆ. ನೋಟದಲ್ಲಿ ಚಂದ್ರನು ಶನಿಯಂತೆ ಕಾಣುತ್ತಿದ್ದಾನೆ.
View this post on Instagram
ಸೂರ್ಯ ಗ್ರಹಣದ ಎರಡು ದಿನದ ಮೊದಲು ಈ ಅದ್ಭುತ ಚಿತ್ರ ಗೋಚರವಾಗಿದೆ. ಚಂದ್ರ ಸ್ಪಟಿಕದಂತೆ ಹೊಳೆಯುತ್ತಿದ್ದಂತೆ ಭಾಸವಾಗುತ್ತಿದೆ. ಶನಿ ಗ್ರಹದಂತೆ ಚಂದ್ರ ಗೋಚರಿಸುತ್ತಿದ್ದ. ಅದು ಚಂದ್ರನ ಕ್ಷುದ್ರಗ್ರಹದ ಉಂಗುರವೇ? ಫೋಟೋ ನೋಡಿದ ನೀವು ಆಶ್ಚರ್ಯ ಪಡಬಹುದು ಎಂದು ಸೊಜುಯೆಲ್ ಹೇಳಿದ್ದಾರೆ. ಹೊಳೆಯುತ್ತ ಪ್ರಕಾಶಮಾನವಾಗಿ ಕಾಣಿಸುತ್ತಿರುವ ಚಂದ್ರ, ಸುತ್ತಲೂ ನಕ್ಷತ್ರಗಳು ಇರುವ ದೃಶ್ಯ ಆಕಾಶದ ಸೌಂದರ್ವನ್ನು ಹೆಚ್ಚಿಸಿವೆ.
ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ಆದ ಫೋಟೋ 37,400 ಕ್ಕೂ ಹೆಚ್ಚು ಲೈಕ್ಸ್ಗಳನ್ನು ಹಾಗೂ ನೂರಾರು ಕಾಮೆಂಟ್ಸ್ಗಳನ್ನು ಪಡೆದಿದೆ. ದೃಶ್ಯ ಅದ್ಭುತವಾಗಿದ್ದು ನೆಟ್ಟಿಗರನ್ನು ಮಂತ್ರಮುಗ್ಧರನ್ನಾಗಿ ಮಾಡಿದೆ.
ಈ ಫೋಟೋ ತುಂಬಾ ಇಷ್ಟವಾಯಿತು ಎಂದು ಓರ್ವರು ಅಭಿಪ್ರಾಯ ತಿಳಿಸಿದ್ದಾರೆ, ಫೆಂಟಾಸ್ಟಿಕ್ ಎಂದು ಮತ್ತೋರ್ವರು ಚಿತ್ರ ನೋಡಿ ಹೇಳಿದ್ದಾರೆ. ಸುಂದರವಾದ ದೃಶ್ಯ ಎಂಬ ಅಭಿಪ್ರಾಯಗಳು ಕೇಳಿಬಂದಿವೆ.
ಇದನ್ನೂ ಓದಿ:
Strawberry Supermoon: ಜೂನ್ 24ರಂದು ಸ್ಟ್ರಾಬೆರಿ ಸೂಪರ್ಮೂನ್ ವಿಸ್ಮಯ! ಈ ಹೆಸರಿನ ಹಿಂದಿರುವ ಗುಟ್ಟೇನು?
Prabhudeva: ಅರ್ಧ ತುಂಡಾದ ಕಾಲು ಇಟ್ಟುಕೊಂಡು ಅಚ್ಚರಿ ಮೂಡಿಸಿದ ನಟ ಪ್ರಭುದೇವ; ಬೆರಗಾದ ಅಭಿಮಾನಿಗಳು
(Stunning Picture Of moon Looking Like Saturn Beautiful Photo Goes Viral)