AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Prabhudeva: ಅರ್ಧ ತುಂಡಾದ ಕಾಲು ಇಟ್ಟುಕೊಂಡು ಅಚ್ಚರಿ ಮೂಡಿಸಿದ ನಟ ಪ್ರಭುದೇವ; ಬೆರಗಾದ ಅಭಿಮಾನಿಗಳು

Poikkal Kuthirai First Look: ಮೊಣಕಾಲಿನವರೆಗೆ ಕಾಲು ಕಳೆದುಕೊಂಡು, ಮರದ ಕಾಲು ಅಳವಡಿಸಿಕೊಂಡಿರುವ ವ್ಯಕ್ತಿಯ ಗೆಟಪ್​ನಲ್ಲಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ. ಈ ಲುಕ್​ ನೋಡಿದ ಅಭಿಮಾನಿಗಳಿಗೆ ಅಚ್ಚರಿ ಆಗಿದೆ.

Prabhudeva: ಅರ್ಧ ತುಂಡಾದ ಕಾಲು ಇಟ್ಟುಕೊಂಡು ಅಚ್ಚರಿ ಮೂಡಿಸಿದ ನಟ ಪ್ರಭುದೇವ; ಬೆರಗಾದ ಅಭಿಮಾನಿಗಳು
ಅರ್ಧ ತುಂಡಾದ ಕಾಲು ಇಟ್ಟುಕೊಂಡು ಅಚ್ಚರಿ ಮೂಡಿಸಿದ ನಟ ಪ್ರಭುದೇವ; ಬೆರಗಾದ ಅಭಿಮಾನಿಗಳು
TV9 Web
| Updated By: ಮದನ್​ ಕುಮಾರ್​|

Updated on: Aug 05, 2021 | 11:36 AM

Share

ಪ್ರಭುದೇವ (Prabhudheva) ಎಂದರೆ ಮೊದಲು ನೆನಪಾಗುವುದು ಡ್ಯಾನ್ಸ್​. ಮೈಯಲ್ಲಿ ಮೂಳೆಯೇ ಇಲ್ಲವೇನೋ ಎಂಬಂತೆ ಅವರು ಡ್ಯಾನ್ಸ್​ ಮಾಡುತ್ತಾರೆ. ಪ್ರಭುದೇವ (Prabhudeva) ನಟಿಸುವ ಪ್ರತಿ ಸಿನಿಮಾದಲ್ಲಿಯೂ ಅಭಿಮಾನಿಗಳು ಇಂಥ ಡ್ಯಾನ್ಸ್​ ಬಯಸುವುದು ಸಹಜ. ಆದರೆ ಅವರ ಮುಂದಿನ ಸಿನಿಮಾದಲ್ಲಿ ಅದ್ಭುತ ನೃತ್ಯವನ್ನು ನಿರೀಕ್ಷಿಸುವುದು ಸ್ವಲ್ಪ ಕಷ್ಟ ಎನಿಸುತ್ತಿದೆ. ಅವರ ಹೊಸ ಸಿನಿಮಾ ‘ಪೊಯ್​ಕ್ಕಾಲ್​ ಕುದುರೈ’ (Poikkal Kuthirai) ಚಿತ್ರದ ಫಸ್ಟ್​ ಲುಕ್​ ನೋಡಿದ ಬಳಿಕ ಇಂಥ ಅಭಿಪ್ರಾಯ ಮೂಡುತ್ತಿದೆ. ಯಾಕೆಂದರೆ, ಈ ಸಿನಿಮಾದಲ್ಲಿ ಅವರು ಒಂದು ಕಾಲು ಇಲ್ಲದ ವ್ಯಕ್ತಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ!

‘ಪೊಯ್​ಕ್ಕಾಲ್​ ಕುದುರೈ’ ಚಿತ್ರದ ಫಸ್ಟ್​ಲುಕ್​ ಬಿಡುಗಡೆ ಆಗಿದೆ. ಅದನ್ನು ಕಂಡು ಪ್ರಭುದೇವ ಅಭಿಮಾನಿಗಳು ನಿಜಕ್ಕೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮೊಣಕಾಲಿನವರೆಗೆ ಕಾಲು ಕಳೆದುಕೊಂಡು, ಮರದ ಕಾಲು ಅಳವಡಿಸಿಕೊಂಡಿರುವ ವ್ಯಕ್ತಿಯ ಗೆಟಪ್​ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಒಂದು ಕೈಯಲ್ಲಿ ಮಗು ಎತ್ತಿಕೊಂಡು, ಇನ್ನೊಂದು ಕೈಯಲ್ಲಿ ದೊಡ್ಡ ಸ್ಪ್ಯಾನರ್​ ಹಿಡಿದು ಫೈಟ್​ ಮಾಡಲು ಸಿದ್ಧವಾಗಿರುವ ಭಂಗಿಯಲ್ಲಿ ಅವರ ಫಸ್ಟ್​​ಲುಕ್​ ಮೂಡಿಬಂದಿದೆ.

ಈ ಚಿತ್ರಕ್ಕೆ ಸಂತೋಷ್​ ಪಿ. ಜಯಕುಮಾರ್​ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಶೇ.40ರಷ್ಟು ಶೂಟಿಂಗ್​ ಮುಕ್ತಾಯ ಆಗಿದೆ. ಆದಷ್ಟು ಬೇಗ ಚಿತ್ರೀಕರಣ ಮುಗಿಸಿಕೊಂಡು ಈ ವರ್ಷ ಡಿಸೆಂಬರ್​ ವೇಳೆಗೆ ಚಿತ್ರವನ್ನು ತೆರೆಕಾಣಿಸುವ ಗುರಿ ಇಟ್ಟುಕೊಳ್ಳಲಾಗಿದೆ. ವರಲಕ್ಷ್ಮೀ ಶರತ್​ಕುಮಾರ್​ ಮತ್ತು ರೈಸಾ ವಿಲ್ಸನ್​ ಅವರು ನಾಯಕಿಯರಾಗಿ ನಟಿಸುತ್ತಿದ್ದಾರೆ. ಆದರೆ ಇಬ್ಬರೂ ಕೂಡ ಪ್ರಭುದೇವಗೆ ಜೋಡಿ ಅಲ್ಲ ಎನ್ನಲಾಗುತ್ತಿದೆ. ಪ್ರಕಾಶ್​ ರೈ, ಸಮುದ್ರಖಣಿ ಮುಂತಾದವರು ಕೂಡ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.

‘ಒಂದು ಕಾಲು ಇಲ್ಲದ ವ್ಯಕ್ತಿ ತನ್ನ ಮಗಳನ್ನು ಹೇಗೆ ಕಾಪಾಡುತ್ತಾನೆ ಎಂಬುದು ಚಿತ್ರದ ಕಥೆ. ಪ್ರಭುದೇವ ಅವರು ಶೂಟಿಂಗ್​ ವೇಳೆ ಒಂದು ಕಾಲು ಮಡಚಿಕೊಂಡೇ ಇರಬೇಕಿತ್ತು. ದೇಹವನ್ನು ಬ್ಯಾಲೆನ್ಸ್​ ಮಾಡುತ್ತ ನಟಿಸುವುದು ಸುಲಭ ಅಲ್ಲ. ಅದಕ್ಕಾಗಿ ಅವರು ತುಂಬ ಪ್ರಾಕ್ಟೀಸ್​ ಮಾಡಬೇಕಾಯಿತು’ ಎಂದು ನಿರ್ದೇಶಕ ಸಂತೋಷ್​ ಜಯಕುಮಾರ್​ ಹೇಳಿದ್ದಾರೆ.

ಇದನ್ನೂ ಓದಿ:

ಡ್ರಗ್ಸ್ ಸಾಗಾಟ: ಡ್ಯಾನ್ಸರ್ ಪ್ರಭುದೇವ ಶಿಷ್ಯ ಕಿಶೋರ್ ಶೆಟ್ಟಿ ಅರೆಸ್ಟ್

ನೀವಂದುಕೊಂಡಂತೆ ಇಲ್ಲ ಆಶಿಕಾ ರಂಗನಾಥ್​; ಬರ್ತ್​ಡೇ ದಿನವೇ ಬಯಲಾಯ್ತು ಇನ್ನೊಂದು ಮುಖ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!