HBD Ashika Ranganath: ನೀವಂದುಕೊಂಡಂತೆ ಇಲ್ಲ ಆಶಿಕಾ ರಂಗನಾಥ್​; ಬರ್ತ್​ಡೇ ದಿನವೇ ಬಯಲಾಯ್ತು ಇನ್ನೊಂದು ಮುಖ

Ashika Ranganath Birthday: ಮದಗಜ ತಂಡ ಈ ಹಿಂದೆ ಬಿಡುಗಡೆ ಮಾಡಿದ್ದ ಪೋಸ್ಟರ್​ನಲ್ಲಿ ಆಶಿಕಾ ರಂಗನಾಥ್​ ಹಳ್ಳಿ ಹುಡುಗಿಯ ಗೆಟ್​ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈಗ ಬಿಂದಾಸ್​ ಆಗಿ ಸಿಗರೇಟು ಸೇದುತ್ತಿರುವ ಈ ಫೋಸ್ಟರ್​ ನೋಡಿ ಸ್ವತಃ ಅವರ ಅಭಿಮಾನಿಗಳು ಅಚ್ಚರಿ ಪಡುವಂತಾಗಿದೆ.

HBD Ashika Ranganath: ನೀವಂದುಕೊಂಡಂತೆ ಇಲ್ಲ ಆಶಿಕಾ ರಂಗನಾಥ್​; ಬರ್ತ್​ಡೇ ದಿನವೇ ಬಯಲಾಯ್ತು ಇನ್ನೊಂದು ಮುಖ
ಆಶಿಕಾ ರಂಗನಾಥ್
Follow us
TV9 Web
| Updated By: Digi Tech Desk

Updated on:Aug 05, 2021 | 9:00 AM

ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿಯರಲ್ಲಿ ಆಶಿಕಾ ರಂಗನಾಥ್​ ಹೆಸರು ಕೂಡ ಮುಂಚೂಣಿಯಲ್ಲಿ ಕೇಳಿಬರುತ್ತದೆ. ಈಗಾಗಲೇ ಹಲವು ಸಿನಿಮಾಗಳ ಮೂಲಕ ಗಮನ ಸೆಳೆದಿರುವ ಅವರ ಕೈಯಲ್ಲಿ ಸದ್ಯ ಅನೇಕ ಆಫರ್​ಗಳಿವೆ. ಚಂದನವನದ ಸ್ಟಾರ್​ ಹೀರೋಗಳಿಗೆ ನಾಯಕಿಯಾಗಿ ಅವರು ಮುಂದುವರಿಯುತ್ತಿದ್ದಾರೆ. ಇಂದು (ಆ.5) ಅವರಿಗೆ ಜನ್ಮದಿನದ ಸಂಭ್ರಮ. ಆ ಪ್ರಯುಕ್ತ ಅಭಿಮಾನಿಗಳು, ಸ್ನೇಹಿತರು, ಸೆಲೆಬ್ರಿಟಿಗಳು ಶುಭಕೋರುತ್ತಿದ್ದಾರೆ. ಆಶಿಕಾ ನಟಿಸುತ್ತಿರುವ ‘ಮದಗಜ’ ಸಿನಿಮಾದಿಂದ ಅವರ ಒಂದು ಹೊಸ ಪೋಸ್ಟರ್​ ರಿಲೀಸ್​ ಆಗಿದ್ದು ಅಚ್ಚರಿ ಮೂಡಿಸುವಂತಿದೆ. ಅದರಲ್ಲಿ ಆಶಿಕಾ ರಂಗನಾಥ್​ ಸಿಗರೇಟ್​ ಸೇದುತ್ತ ಶಾಕ್​ ನೀಡಿದ್ದಾರೆ!

ಹೌದು, ಇಷ್ಟು ದಿನ ಆಶಿಕಾ ರಂಗನಾಥ್​ ಅವರು ಈ ರೀತಿ ಕಾಣಿಸಿಕೊಂಡಿರಲಿಲ್ಲ. ಗ್ಲಾಮರಸ್​ ಆಗಿದ್ದರೂ ಕೂಡ ಮುಗ್ಧ ಹುಡುಗಿಯ ಲುಕ್​ನಲ್ಲಿ ಮನಸೆಳೆಯುತ್ತಿದ್ದ ಅವರು ಈಗ ಏಕಾಏಕಿ ಬೋಲ್ಡ್​ ಆಗಿದ್ದಾರೆ. ಈ ಮೊದಲು ಮದಗಜ ತಂಡ ಬಿಡುಗಡೆ ಮಾಡಿದ್ದ ಪೋಸ್ಟರ್​ನಲ್ಲಿ ಅವರು ಹಳ್ಳಿ ಹುಡುಗಿಯ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈಗ ಪಕ್ಕಾ ಮಾಡರ್ನ್​ ಹುಡುಗಿ ವೇಷ ತಾಳಿದ್ದಾರೆ. ಅಲ್ಲದೇ, ಬಿಂದಾಸ್​ ಆಗಿ ಸಿಗರೇಟು ಸೇದುತ್ತಿರುವ ಈ ಫೋಸ್ಟರ್​ ನೋಡಿ ಸ್ವತಃ ಅವರ ಅಭಿಮಾನಿಗಳು ಅಚ್ಚರಿ ಪಡುವಂತಾಗಿದೆ.

‘ಮದಗಜ’ ಚಿತ್ರಕ್ಕೆ ‘ಅಯೋಗ್ಯ’ ಖ್ಯಾತಿಯ ಮಹೇಶ್​ ಕುಮಾರ್​ ನಿರ್ದೇಶನ ಮಾಡುತ್ತಿದ್ದಾರೆ. ‘ರೋರಿಂಗ್​ ಸ್ಟಾರ್’ ಶ್ರೀಮುರಳಿ ನಟನೆಯ ಈ ಸಿನಿಮಾ ಮೇಲೆ ಸಿನಿಪ್ರಿಯರು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗಾಗಲೇ ಟೀಸರ್​ಗಳ ಮೂಲಕ ಈ ಚಿತ್ರ ಹೈಪ್​ ಸೃಷ್ಟಿ ಮಾಡಿದೆ. ಅದನ್ನು ಇನ್ನಷ್ಟು ಹೆಚ್ಚಿಸುವ ರೀತಿಯಲ್ಲಿ ಆಶಿಕಾ ಅವರ ಈ ಹೊಸ ಪೋಸ್ಟರ್​ ಅನಾವರಣಗೊಂಡಿದೆ.

ಕೊರೊನಾ ಹಾವಳಿ ಇರುವ ಕಾರಣ ಇಂದು ಆಶಿಕಾ ರಂಗನಾಥ್​ ಅವರು ಅಭಿಮಾನಿಗಳನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಆ ಬಗ್ಗೆ ಅವರು ಸೋಶಿಯಲ್​ ಮೀಡಿಯಾ ಮೂಲಕ ತಿಳಿಸಿದ್ದಾರೆ. ‘ಪ್ರಸ್ತುತ ಪರಿಸ್ಥಿತಿ ಮತ್ತು ನನ್ನ ಚಿತ್ರೀಕರಣ ವೇಳಾಪಟ್ಟಿಯಿಂದಾಗಿ ನಿಮ್ಮನ್ನು ಭೇಟಿಯಾಗಲು ಸಾಧ್ಯವಿಲ್ಲ. ನಿಮ್ಮ ಭೇಟಿಯಾಗದೇ ಇರುವುದು ಮತ್ತು ಈ ವಿಶೇಷ ದಿನವನ್ನು ನಿಮ್ಮೆಲ್ಲರೊಂದಿಗೆ ಆಚರಿಸದೇ ಇರುವುದು ನನಗೆ ತುಂಬಾ ದುಃಖ ತಂದಿದೆ. ಆದರೆ ಅದು ಎಲ್ಲರ ಆರೋಗ್ಯ ಮತ್ತು ಸುರಕ್ಷತೆಗಾಗಿ’ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಕಾಣೆಯಾದವರ ಬಗ್ಗೆ ಚಿತ್ರದಲ್ಲಿ ತುಂಬ ಹಾಟ್​ ಆಗಿ ಕಾಣಿಸಿಕೊಂಡ ನಟಿ ಆಶಿಕಾ ರಂಗನಾಥ್

ಇದನ್ನೂ ಓದಿ: ತೆಲುಗು ಚಿತ್ರರಂಗದಲ್ಲಿ ಸುದೀಪ್​ ನೆಚ್ಚಿನ ಹೀರೋ ಯಾರು? ವೈರಲ್​ ಆಗುತ್ತಿದೆ ಒಂದು ವಿಡಿಯೋ

Published On - 8:55 am, Thu, 5 August 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ