ಮನೆಯಲ್ಲೇ ಕಪ್ ಕೇಕ್ ಮಾಡಿ ಸಂಭ್ರಮಿಸಿದ ಐಶ್ವರ್ಯಾ ಅರ್ಜುನ್​; ಇಲ್ಲಿದೆ ವಿಡಿಯೋ

ಇತ್ತೀಚೆಗೆ ಅರ್ಜುನ್​ ಸರ್ಜಾ ಕುಟುಂಬ ಚೆನ್ನೈನಲ್ಲಿ ಆಜಂನೇಯ ದೇವಾಲಯವನ್ನು ಲೋಕಾರ್ಪಣೆ ಮಾಡಿತ್ತು. ಈ ವಿಶೇಷ ಕಾರ್ಯಕ್ರಮದಲ್ಲಿ ಐಶ್ವರ್ಯಾ ಕೂಡ ಪಾಲ್ಗೊಂಡಿದ್ದರು.

TV9kannada Web Team

| Edited By: Rajesh Duggumane

Aug 04, 2021 | 5:30 PM

ಸೆಲೆಬ್ರಿಟಿಗಳು ಏನೇ ಮಾಡಿದರೂ ಅದನ್ನು ಅಭಿಮಾನಿಗಳು ಇಷ್ಟಪಟ್ಟು ನೋಡುತ್ತಾರೆ. ಈ ಕಾರಣಕ್ಕೆ ಬಹುತೇಕ ಸೆಲೆಬ್ರಿಟಿಗಳು ತಮ್ಮ ದಿನಚರಿಯನ್ನು ಅಭಿಮಾನಿಗಳ ಜತೆ ಹಂಚಿಕೊಳ್ಳುತ್ತಾರೆ. ಈಗ ಖ್ಯಾತ ನಟ ಅರ್ಜುನ್​ ಸರ್ಜಾ ಅವರ ಮಗಳು ಐಶ್ವರ್ಯಾ ಸರ್ಜಾ ಅವರು ಮನೆಯಲ್ಲಿ ಕಪ್​ ಕೇಕ್​ ಮಾಡಿದ್ದಾರೆ. ಇದನ್ನು ಅವರು ಸೋಶೀಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಅರ್ಜುನ್​ ಸರ್ಜಾ ಕುಟುಂಬ ಚೆನ್ನೈನಲ್ಲಿ ಆಜಂನೇಯ ದೇವಾಲಯವನ್ನು ಲೋಕಾರ್ಪಣೆ ಮಾಡಿತ್ತು. ಈ ವಿಶೇಷ ಕಾರ್ಯಕ್ರಮದಲ್ಲಿ ಐಶ್ವರ್ಯಾ ಕೂಡ ಪಾಲ್ಗೊಂಡಿದ್ದರು. ಈ ಫೋಟೋಗಳನ್ನು ಅರ್ಜುನ್​ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕನ್ನಡದ ‘ಪ್ರೇಮ ಬರಹ’ ಸಿನಿಮಾದಲ್ಲಿ ಐಶ್ವರ್ಯಾ ನಟಿಸಿದ್ದರು. ಅವರು ಸದ್ಯ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಹೀಗಾಗಿ, ಮನೆಯಲ್ಲೇ ಅವರು ಸಮಯ ಕಳೆಯುತ್ತಿದ್ದಾರೆ.

ಇದನ್ನೂ ಓದಿ: ಚೆನ್ನೈನಲ್ಲಿ ಅರ್ಜುನ್​ ಸರ್ಜಾ ನಿರ್ಮಿಸಿದ ಆಂಜನೇಯ ಸ್ವಾಮಿ ದೇವಾಲಯದ ದರ್ಶನ ಪಡೆದ ಜ್ಯೂ. ಚಿರು

Follow us on

Click on your DTH Provider to Add TV9 Kannada