AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೆನ್ನೈನಲ್ಲಿ ಅರ್ಜುನ್​ ಸರ್ಜಾ ನಿರ್ಮಿಸಿದ ಆಂಜನೇಯ ಸ್ವಾಮಿ ದೇವಾಲಯದ ದರ್ಶನ ಪಡೆದ ಜ್ಯೂ. ಚಿರು

ಚಿರಂಜೀವಿ ಸರ್ಜಾ ಮೃತಪಡುವಾಗ ಮೇಘನಾ ರಾಜ್​ ಗರ್ಭಿಣಿ. ನಂತರ ಜನಿಸಿದ ಜ್ಯೂ. ಚಿರು ಮೇಲೆ ಎಲ್ಲರಿಗೂ ಎಲ್ಲಿದ ಪ್ರೀತಿ. ಇಡೀ ಸರ್ಜಾ ಕುಟುಂಬ ಜ್ಯೂ. ಚಿರು ಮೇಲೆ ಅಪಾರ ಪ್ರೀತಿ ತೊರುತ್ತಿದೆ.

ಚೆನ್ನೈನಲ್ಲಿ ಅರ್ಜುನ್​ ಸರ್ಜಾ ನಿರ್ಮಿಸಿದ ಆಂಜನೇಯ ಸ್ವಾಮಿ ದೇವಾಲಯದ ದರ್ಶನ ಪಡೆದ ಜ್ಯೂ. ಚಿರು
ಮೇಘನಾ ರಾಜ್​ - ಜ್ಯೂ. ಚಿರು
TV9 Web
| Edited By: |

Updated on: Jul 08, 2021 | 3:38 PM

Share

ಬಹುಭಾಷಾ ನಟ ಅರ್ಜುನ್​ ಸರ್ಜಾ ಅವರ ಇಡೀ ಕುಟುಂಬವೇ ಆಂಜನೇಯ ಸ್ವಾಮಿಯ ಭಕ್ತರು. ಈ ಕಾರಣಕ್ಕೆ ಅರ್ಜುನ್​ ಸರ್ಜಾ ಚೆನ್ನೈನಲ್ಲಿ ಅದ್ಭುತವಾದ ದೇವಸ್ಥಾನ ನಿರ್ಮಿಸಿದ್ದಾರೆ. ಇತ್ತೀಚೆಗೆ ಈ ದೇವಸ್ಥಾನ ಕುಂಭಾಭಿಷೇಕ ನೆರವೇರಿದೆ. ಈಗ, ಜ್ಯೂ. ಚಿರು ಕೂಡ ದೇವಸ್ಥಾನ ವೀಕ್ಷಣೆ ಮಾಡಿದ್ದಾರೆ. ಇದನ್ನು ಅರ್ಜುನ್​ ಸರ್ಜಾ ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಚಿರಂಜೀವಿ ಸರ್ಜಾ ಮೃತಪಡುವಾಗ ಮೇಘನಾ ರಾಜ್​ ಗರ್ಭಿಣಿ. ನಂತರ ಜನಿಸಿದ ಜ್ಯೂ. ಚಿರು ಮೇಲೆ ಎಲ್ಲರಿಗೂ ಎಲ್ಲಿದ ಪ್ರೀತಿ. ಇಡೀ ಸರ್ಜಾ ಕುಟುಂಬ ಜ್ಯೂ. ಚಿರು ಮೇಲೆ ಅಪಾರ ಪ್ರೀತಿ ತೊರುತ್ತಿದೆ. ಈಗ ಹೊಸದಾಗಿ ಲೋಕಾರ್ಪಣೆಗೊಂಡ ದೇವಾಲಯವನ್ನು ಅರ್ಜುನ್​ ಸರ್ಜಾ  ಅವರು ಚಿರು-ಮೇಘನಾ ಪುತ್ರಗೆ ತೋರಿಸಿದ್ದಾರೆ.

ಕೊರೊನಾ ವೈರಸ್​ ಇನ್ನೂ ಕಡಿಮೆ ಆಗಿಲ್ಲ. ಅದರಲ್ಲೂ ಮಕ್ಕಳನ್ನು ಕರೆದುಕೊಂಡು ಪ್ರವಾಸ ಮಾಡೋಕೆ ಇದು ಸೂಕ್ತ ಸಮಯ ಅಲ್ಲ. ಈ ಕಾರಣಕ್ಕೆ ಮೇಘನಾ ರಾಜ್​ ಕುಟುಂಬ ದೇವಸ್ಥಾನದ ಕುಂಬಾಭಿಷೇಕ ಕಾರ್ಯಕ್ರಮಕ್ಕೆ ತೆರಳಿಲ್ಲ. ಆದರೆ, ಅರ್ಜುನ್​ ಸರ್ಜಾ ವಿಡಿಯೋ ಕಾಲ್​ ಮಾಡುವ ಮೂಲಕ ಜ್ಯೂ. ಚಿರುಗೆ ದೇವಸ್ಥಾನ ದರ್ಶನ ಮಾಡಿಸಿದ್ದಾರೆ.

ಸಿನಿಮಾಗಳಲ್ಲಿ ಮಾತ್ರವಲ್ಲದೆ ರಿಯಲ್​ ಲೈಫ್​ನಲ್ಲಿಯೂ ಪವನಪುತ್ರ ಹನುಮಂತನ ಬಗ್ಗೆ ಅಪಾರವಾದ ಭಕ್ತಿ ಹೊಂದಿದ್ದಾರೆ ಅರ್ಜುನ್ ಸರ್ಜಾ. ಹಾಗಾಗಿ ಆಂಜನೇಯನಿಗೆ ಅದ್ಭುತವಾದ ಒಂದು ದೇವಸ್ಥಾನ ನಿರ್ಮಿಸಬೇಕು ಎಂಬುದು ಅವರ ಅನೇಕ ವರ್ಷಗಳ ಕನಸು. ಬಹಳ ಹಿಂದೆಯೇ ಆ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಇತ್ತೀಚೆಗೆ ದೇವಾಲಯದ ಕೆಲಸ ಪೂರ್ಣಗೊಂಡಿತ್ತು. ಅರ್ಜುನ್​ ಸರ್ಜಾ ಇತ್ತೀಚೆಗೆ ಲೈವ್​ ಮೂಲಕ ದೇವಸ್ಥಾನ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದ್ದರು.

‘ನನ್ನ ಬಹುದಿನಗಳ ಆಸೆಯಂತೆ, ನಮ್ಮ ಕುಟುಂಬದಿಂದ ನಿರ್ಮಾಣ ಆಗುತ್ತಿರುವ ಆಂಜನೇಯ ಸ್ವಾಮಿ ದೇವಸ್ಥಾನದ ಕಾರ್ಯ ಈಗ ಸಂಪೂರ್ಣ ಆಗಿದೆ. ಈ ದೇವಸ್ಥಾನದ ಕುಂಭಾಭಿಷೇಕ ಸಮಾರಂಭವನ್ನು ಜು.1 ಮತ್ತು ಜು.2ರಂದು ಚೆನ್ನೈನಲ್ಲಿ ಇಟ್ಟುಕೊಂಡಿದ್ದೇವೆ. ಸ್ನೇಹಿತರು, ಬಂಧುಗಳು ಹಾಗೂ ಭಕ್ತಾಧಿಗಳನ್ನು ಕರೆದು ತುಂಬ ಅದ್ದೂರಿಯಾಗಿ ಈ ಸಮಾರಂಭ ಮಾಡಬೇಕು ಎಂದುಕೊಂಡಿದ್ದೆ. ಆದರೆ, ಈಗಿರುವ ಕೊರೊನಾ ಪರಿಸ್ಥಿತಿಯಲ್ಲಿ, ಜನರ ಹಿತವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಯಾರನ್ನೂ ಆಹ್ವಾನಿಸೋಕೆ ಸಾಧ್ಯವಾಗುತ್ತಿಲ್ಲ’ ಎಂದು ಅರ್ಜುನ್​ ಸರ್ಜಾ ಹೇಳಿದ್ದರು.

ಇದನ್ನೂ ಓದಿ: Chiranjeevi Sarja: ಮೇಘನಾ ರಾಜ್​ ಜೊತೆ ಚಿರಂಜೀವಿ ಸರ್ಜಾ ಸಮಾಧಿಗೆ ಪೂಜೆ ಸಲ್ಲಿಸಿದ ಜ್ಯೂ. ಚಿರು

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್