ನಾನು ಸುಮ್ಮನಿದ್ದದ್ದರೆ ಕ್ಯಾಬಿ ನನ್ನ ಮೇಲೆ ಕಾರು ಹತ್ತಿಸಿಕೊಂಡು ಹೋಗುತ್ತಿದ್ದ ಎಂದಳಂತೆ ಸುಳ್ಳುಗಾತಿ ಲಖನೌ ಯುವತಿ!
ಕ್ಯಾಬಿ ದೂರು ದಾಖಲಿಸಿದ ನಂತರ ಪೊಲೀಸರ ವಿಚಾರಣೆಗೆ ಹಾಜರಾದ ಇವಳು ಅವತ್ತಿನ ಘಟನೆಯ ಬಗ್ಗೆ ಬರೀ ಸುಳ್ಳುಗಳನ್ನು ಮಾತ್ರ ಹೇಳಿದ್ದಾಳೆ. ಈಕೆಯ ಅತಿ ದೊಡ್ಟ ಸುಳ್ಳೆಂದರೆ, ಕ್ಯಾಬಿ ವಾಹನವನ್ನು ತನ್ನ ಮೇಲೆ ಹತ್ತಿಸಿಕೊಂಡು ಹೋಗುವವನಿದ್ದ ಅನ್ನೋದು.
ಸುಳ್ಳು ಸಾಮಾನ್ಯವಾಗಿ ಎಲ್ಲರೂ ಹೇಳುತ್ತಾರೆ, ಕೆಲವು ಸಲ ಸುಳ್ಳು ಹೇಳುವಂಥ ಅನಿವಾರ್ಯತೆ ಎದುರಾಗಿ ಬಿಡುತ್ತದೆ. ಆದರೆ, ಈ ಪಾಟಿ ಸುಳ್ಳು ಸಹ ಹೇಳಬಾರದು ಮಾರಾಯ್ರೇ. ಹೌದು, ನಾವು ಅದೇ ಲಖನೌ ಯುವತಿಯ ಬಗ್ಗೆ ಮಾತಾಡುತ್ತಿದ್ದೇವೆ. ಸತ್ಯದ ನೆತ್ತಿಯ ಮೇಲೆ ಹೊಡೆಯುವಂಥ ಸುಳ್ಳು ಅಂತ ಹೇಳ್ತಾರಲ್ಲ, ಈ ದರ್ಪದ ಹುಡುಗಿ ಅದೇ ರೀತಿಯಲ್ಲಿ ಸುಳ್ಳು ಮತ್ತು ಕಟ್ಟು ಕತೆಗಳನ್ನು ಲಖನೌ ಪೊಲೀಸರಿಗೆ ಹೇಳಿದ್ದಾಳೆ. ಅಂದಹಾಗೆ ಇವಳ ಹೆಸರು ಪ್ರಿಯದರ್ಶಿನಿ ಯಾದವ್ ಅಂತ. ನಿಜ ಹೆಸರು ಹೇಳಿದ್ದಾಳೋ ಇಲ್ಲವೋ ಅಂತ ಪೊಲೀಸರೇ ಖಚಿತಪಡಿಸಬೇಕು. ಲಖನೌ ನಗರದ ಕೇಸರಿ ಖೇಡಾ ಸಿಗ್ನಲ್ ಬಳಿ ಆಗಸ್ಟ್ 2 ರಂದು ಈಕೆ ಕ್ಯಾಬಿಯನ್ನು ವಿನಾಕಾರಣ ಮನಬಂದಂತೆ ಥಳಿಸಿರುವುವುದು ಇಡೀ ದೇಶದ ಜನರನ್ನೇ ಆಘಾತಕ್ಕೊಳಪಡಿಸಿದೆ.
ಕ್ಯಾಬಿ ದೂರು ದಾಖಲಿಸಿದ ನಂತರ ಪೊಲೀಸರ ವಿಚಾರಣೆಗೆ ಹಾಜರಾದ ಇವಳು ಅವತ್ತಿನ ಘಟನೆಯ ಬಗ್ಗೆ ಬರೀ ಸುಳ್ಳುಗಳನ್ನು ಮಾತ್ರ ಹೇಳಿದ್ದಾಳೆ. ಈಕೆಯ ಅತಿ ದೊಡ್ಟ ಸುಳ್ಳೆಂದರೆ, ಕ್ಯಾಬಿ ವಾಹನವನ್ನು ತನ್ನ ಮೇಲೆ ಹತ್ತಿಸಿಕೊಂಡು ಹೋಗುವವನಿದ್ದ ಅನ್ನೋದು. ಸಿಸಿಟಿವಿ ಫುಟೇಜ್ನಲ್ಲಿ ಡ್ರೈವರ್ ಕಾರನ್ನು ನಿಲ್ಲಿಸುವುದು ಸ್ಪಷ್ಟವಾಗಿ ಕಾಣುತ್ತದೆ.
ಮುಂದುವರಿದು ಹೇಳಿರುವ ಇವಳು ತನಗೆ ಕಿಡ್ನಿ, ಹೃದಯ ಮತ್ತು ಮೆದುಳಿನ ಸಮಸ್ಯೆಗಳಿವೆ ಎಂದಿದ್ದಾಳೆ. ಇಷ್ಟೆಲ್ಲ ರೋಗಗಳಿಂದ ಬಳಲುತ್ತಿರುವವಳು ಹಾಗೆ ರಂಪಾಟ ಮಾಡುವುದು ಸಾಧ್ಯವೇ?
ಅಲ್ಲಿದ್ದ ಜನರೆಲ್ಲ ತನ್ನ ಮೇಲೆ ಗುಂಪಾಗಿ ಮುಗಿಬಿದ್ದರು ಅಂತಲೂ ಪೊಲೀಸರಿಗೆ ಇವಳು ಹೇಳಿದ್ದಾಳೆ. ಸುಳ್ಳಿನ ಒಲಂಪಿಕ್ಸ್ ನಡೆಸಿದರೆ, ಚಿನ್ನ, ಬೆಳ್ಳಿ ಮತ್ತು ಕಂಚು ಎಲ್ಲ ಪದಕಗಳು ಇವಳಿಗೆ ಸಿಗುತ್ತವೆ!
ಗಮನಿಸಬೇಕಾದ ಮತ್ತೊಂದು ಸಂಗತಿಯೆಂದರೆ, ದೂರು ನೀಡಲು ಹೋದ ಸಾದತ ಅಲಿ (ಕ್ಯಾಬಿಯ ಹೆಸರು) ಸ್ಟೇಶನ್ನಲ್ಲಿ ಕೂಡಿ ಹಾಕಿದ್ದರಂತೆ. ಅವನ ಸಹೋದರ ಅವನನ್ನು ಕರೆದುಕೊಂಡು ಹೋಗಿದ್ದಾನೆ.
ಅಂದಹಾಗೆ ಪ್ರಿಯದರ್ಶಿನಿ ವಿರುದ್ಧ ದರೋಡೆ ಯತ್ನ, ಅಮಾಯಕನನ್ನು ಗಾಯಗೊಳ್ಳುವಂತೆ ಹೊಡೆದಿದ್ದು, ಟ್ರಾಫಿಕ್ ಸಂಚಾರ ಅಸ್ತವ್ಯಸ್ತಗೊಳಿಸಿದ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಪವನ್ ಕಲ್ಯಾಣ್ ಪುತ್ರ ಅಕಿರ ನಂದನ್ ಮಾರ್ಷಲ್ ಆರ್ಟ್ಸ್ ವಿಡಿಯೋ ವೈರಲ್