ಕಿಚ್ಚ ಸುದೀಪ್ ಹೆಸರು ಹೇಳಿಕೊಂಡು ಹಣ ಲೂಟಿ; ಸಿಕ್ಕಿ ಬಿದ್ದ ಇಬ್ಬರು ಖದೀಮರು
‘ಸುದೀಪ್ ಹೆಸರು ಹೇಳಿಕೊಂಡು ನಿಮ್ಮ ಬಳಿ ಯಾರಾದರೂ ಹಣ ಕೇಳಿದರೆ ಅಭಿಮಾನಿ ಸಂಘದ ಅಧ್ಯಕ್ಷರಿಗೆ ಕೂಡಲೇ ಮಾಹಿತಿ ನೀಡಿ. ಮೋಸ ಮಾಡುವವರಿಂದ ದೂರವಿರಿ’ ಎಂದು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಅಧ್ಯಕ್ಷ ರಮೇಶ್ ಕಿಟ್ಟಿ ಹೇಳಿದ್ದಾರೆ.
ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ (Kiccha Sudeep Charitable Society) ವತಿಯಿಂದ ಅನೇಕ ಜನಪರ ಕಾರ್ಯಗಳನ್ನು ಮಾಡಲಾಗುತ್ತಿದೆ. ಎಷ್ಟೋ ಜನರಿಗೆ ಚಿಕಿತ್ಸೆ ಕೊಡಿಸಲಾಗಿದೆ. ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಮಕ್ಕಳ ಶಿಕ್ಷಣಕ್ಕೆ ನೆರವು ನೀಡಲಾಗುತ್ತಿದೆ. ಇಷ್ಟೆಲ್ಲ ಒಳ್ಳೆಯ ಕಾರ್ಯ ಮಾಡುತ್ತಿರುವ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಬಗ್ಗೆ ಜನರಿಗೆ ಗೌರವ ಭಾವನೆ ಇದೆ. ಅದನ್ನೇ ದುರುಪಯೋಗ ಪಡಿಸಿಕೊಳ್ಳಲು ಕೆಲವರು ಸಂಚು ರೂಪಿಸಿದ್ದಾರೆ. ಸುದೀಪ್ (Kiccha Sudeep) ಹೆಸರು ಹೇಳಿಕೊಂಡು ಕೆಲವು ಖದೀಮರು ಜನರಿಂದ ದುಡ್ಡು ಲೂಟಿ ಮಾಡುತ್ತಿರುವುದು ಈಗ ಗಮನಕ್ಕೆ ಬಂದಿದೆ. ಆ ಬಗ್ಗೆ ಟ್ರಸ್ಟ್ನ ಅಧ್ಯಕ್ಷ ರಮೇಶ್ ಕಿಟ್ಟಿ ಎಚ್ಚರಿಕೆ ನೀಡಿದ್ದಾರೆ.
‘ಈ ಸೊಸೈಟಿ ಅದರದ್ದೇ ಆದ ನಿಯಮಗಳ ಅಡಿಯಲ್ಲಿ ಕೆಲಸ ಮಾಡುತ್ತಿದೆ. ಈವರೆಗೂ ಯಾರಿಂದಲೂ ಹಣವನ್ನು ಪಡೆದುಕೊಂಡಿಲ್ಲ. ಮುಂದೆಯೂ ತೆಗೆದುಕೊಳ್ಳುವುದಿಲ್ಲ. ಆದರೆ ಸುದೀಪ್ ಅಭಿಮಾನಿ ಎಂದು ಹೇಳಿಕೊಂಡು ಕೆಲವರು ಮೋಸ ಮಾಡಿದ ಎರಡು ಘಟನೆಗಳು ಬೆಳಕಿಗೆ ಬಂದಿವೆ. ಚನ್ನರಾಯಪಟ್ಟಣದ ಒಬ್ಬ ವ್ಯಕ್ತಿಯು ಚಾಮರಾಜನಗರದ ವ್ಯಕ್ತಿಗೆ ಮೋಸ ಮಾಡಿರುವುದು ದಾಖಲೆಗಳ ಸಮೇತ ಸಿಕ್ಕಿದೆ. ಪೊಲೀಸರಿಗೆ ದೂರು ನೀಡಿದ್ದೇವೆ’ ಎಂದು ರಮೇಶ್ ಕಿಟ್ಟಿ ಹೇಳಿದ್ದಾರೆ.
ಇದನ್ನೂ ಓದಿ:
Kichcha Sudeep: ಬಿಗ್ ಬಾಸ್ ಸ್ಪರ್ಧಿ ಸೋನು ಪಾಟೀಲ್ ತಾಯಿಯ ಚಿಕಿತ್ಸೆಗೆ ಲಕ್ಷಾಂತರ ರೂ. ನೀಡಿದ ಕಿಚ್ಚ ಸುದೀಪ್
ಕನ್ನಡ ಶಾಲೆಗಾಗಿ ಮತ್ತೊಂದು ಮಹತ್ವದ ಕಾರ್ಯ ಕೈಗೊಂಡ ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್