AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಜಿಲಾಕರ್ ಬಂದಿದೆ, ವಾಹನದ ಡಾಕ್ಯುಮೆಂಟ್​ಗಳನ್ನು ಇನ್ನು ಮುಂದೆ ಜೊತೆಯಲ್ಲಿ ಕ್ಯಾರಿ ಮಾಡುವ ಅವಶ್ಯಕತೆಯಿಲ್ಲ

ಡಿಜಿಲಾಕರ್ ಬಂದಿದೆ, ವಾಹನದ ಡಾಕ್ಯುಮೆಂಟ್​ಗಳನ್ನು ಇನ್ನು ಮುಂದೆ ಜೊತೆಯಲ್ಲಿ ಕ್ಯಾರಿ ಮಾಡುವ ಅವಶ್ಯಕತೆಯಿಲ್ಲ

TV9 Web
| Edited By: |

Updated on: Aug 04, 2021 | 7:27 PM

Share

ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಆಯುಕ್ತ ರವಿಕಾಂತೇ ಗೌಡ ಅವರು, ನಗರದಲ್ಲಿ ವಾಹನಗಳನ್ನು ಓಡಿಸುವರು ಇನ್ನು ಮುಂದೆ ಡಾಕ್ಯುಮೆಂಟ್ಗಳನ್ನು ಡಿಜಿಲಾಕರ್ ಮತ್ತು ಎಮ್ ಪರಿವಾಹನ್ ಌಪ್ಗಳಲ್ಲಿ ತೋರಿಸಲು ಹಸಿರು ನಿಶಾನೆ ತೋರಿದ್ದಾರೆ

ಆಫೀಸುಗಳಿಗೆ ಹೋಗುವಾಗ ಅಥವಾ ಪತ್ನಿ ಇಲ್ಲವೇ ಮನದನ್ನೆಯನ್ನು ಬೈಕ್ನಲ್ಲಿ, ಕಾರಲ್ಲಿ ಕೂರಿಸಿಕೊಂಡು ಜಾಲಿಯಾಗಿ ರಸ್ತೆಯಲ್ಲಿ ಹೋಗುತ್ತಿರಬೇಕಾದರೆ, ಟ್ರಾಫಿಕ್ ಪೊಲೀಸರು ಅಡ್ಡಹಾಕಿ ಡಿಎಲ್ ತೋರಿಸಿ, ಡಾಕ್ಯುಮೆಂಟ್ ಎಲ್ಲಿ ಅಂತ ಕೇಳುವುದು ನಿಮ್ಮ ಅನುಭವಕ್ಕೂ ಬಂದಿರಬಹದು. ನಿಮ್ಮಲ್ಲಿ ಅವೆಲ್ಲ ಇರಲ್ಲ ಅಂತಲ್ಲ, ಆದರೆ ಅವಗಳನ್ನು ಡಿಕ್ಕಿಯಿಂದ, ಡ್ಯಾಶ್ ಬೋರ್ಡ್ನಿಂದ ಹೊರತೆಗೆದು ಅವರಿಗೆ ತೋರಿಸುವುದು, ಅವರು ಪರಿಶೀಲಿಸುವವರೆಗೆ ತಾಳ್ಮೆಯಿಂದ ಕಾಯುವುದು ಕರಕರೆ ಉಂಟು ಮಾಡುವ ವಿಷಯ ಮಾರಾಯ್ರೇ.. ವಾಹನಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಭೌತಿಕವಾಗಿ ಕ್ಯಾರಿ ಮಾಡುವುದು ಕಷ್ಟದ ಕೆಲಸವೇ. ಆದರಲ್ಲೂ ಮಳೆಗಾಲದಲ್ಲಿ ಅವು ನೆನೆದು ಹೋಗುವ ಆತಂಕವೂ ಇರುತ್ತದೆ.

ಆದರೆ, ಇನ್ನು ಮುಂದೆ ನಿಮಗೆ ಈ ಕಿರಿಕಿರಿ ತಪ್ಪಲಿದೆ. ಕೇಂದ್ರ ಸರ್ಕಾರ ಡಿಜಿಲಾಕರ್ ಮತ್ತು ಎಮ್ ಪರಿವಾಹನ್ ಌಪ್ಗಳನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಡಾಕ್ಯುಮೆಂಟ್ಗಳನ್ನು ಅಪ್ಲೋಡ್ ಮಾಡಿ ಸಂದರ್ಭ ಬಂದಾಗ ಅದನ್ನು ತೋರಿಸಿದರೆ ಸಾಕು, ಕಾಗದ ಪತ್ರಗಳನ್ನು ಭೌತಿಕವಾಗಿ ಕ್ಯಾರಿ ಮಾಡುವ ಅಗತ್ಯವಿಲ್ಲ ಎಂದು ಬಹಳ ದಿನಗಳ ಹಿಂದೆಯೇ ಪ್ರಕಟಿಸಿದೆ.

ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಆಯುಕ್ತ ರವಿಕಾಂತೇ ಗೌಡ ಅವರು, ನಗರದಲ್ಲಿ ವಾಹನಗಳನ್ನು ಓಡಿಸುವರು ಇನ್ನು ಮುಂದೆ ಡಾಕ್ಯುಮೆಂಟ್ಗಳನ್ನು ಡಿಜಿಲಾಕರ್ ಮತ್ತು ಎಮ್ ಪರಿವಾಹನ್ ಌಪ್ಗಳಲ್ಲಿ ತೋರಿಸಲು ಹಸಿರು ನಿಶಾನೆ ತೋರಿರುವುದರಿಂದ ಅವುಗಳನ್ನು ಕ್ಯಾರಿ ಮಾಡುವ ತೊಂದರೆಯಿಂದ ಜನ ಮುಕ್ತರಾಗಲಿದ್ದಾರೆ.

ಇದನ್ನೂ ಓದಿ: Viral Video: ಕೆಂಪು ಬಣ್ಣದ ಲೆಹೆಂಗಾ ತೊಟ್ಟು ಪುಶ್ ಅಪ್ಸ್ ಮಾಡಿದ ವಧು! ವಿಡಿಯೋ ವೈರಲ್