ಅನೇಕ ಹೆಂಗಸರೊಂದಿಗೆ ದೈಹಿಕ ಸಂಪರ್ಕವಿಟ್ಟುಕೊಂಡಿರುವ ಯೋ ಯೋ ಹನಿಸಿಂಗ್ ಒಬ್ಬ ವ್ಯಭಿಚಾರಿ: ಪತ್ನಿ ಶಾಲಿನಿ

38 ವರ್ಷ ವಯಸ್ಸಿನ ತಲ್ವಾರ್ ಅವರು ಹನಿಸಿಂಗ್ ತನ್ನನ್ನು ಕ್ರೂರವಾಗಿ ಪಶುವಿನಂತೆ ನಡೆಸಿಕೊಂಡಿದ್ದಾರೆ ಎಂದು ಕೋರ್ಟಿಗೆ ಸಲ್ಲಿಸಿರುವ ತಮ್ಮ 120-ಪುಟಗಳ ಮನವಿಯಲ್ಲಿ ದೂರಿದ್ದಾರೆ. ಪತಿಯಿಂದ ಹಲವಾರು ಬಾರಿ ದೈಹಿಕವಾಗಿ ಹಲ್ಲೆಗೊಳಗಾಗಿರುವುದಾಗಿ ಅವರು ಹೇಳಿದ್ದಾರೆ.

ಗಾಯಕ, ಱಪರ್ ಮತ್ತು ಸಂಗೀತ ಸಂಯೋಜಕ ಯೋ ಯೋ ಹನಿಸಿಂಗ್ ಅವರ ಬದುಕು ಕಂಡು ಅಯ್ಯಯ್ಯೋ ಅನ್ನುವ ಹಾಗಾಗಿದೆ. ಹನಿಸಿಂಗ್ ಅವರ ಹತ್ತು ವರ್ಷಗಳ ಪತ್ನಿ ಶಾಲಿನಿ ತಲ್ವಾರ್ ಅವರು ಪತಿಯ ವಿರುದ್ಧ, ಲೈಂಗಿಕ ದೌರ್ಜನ್ಯ, ಭಾವನಾತ್ಮಕ, ಮಾನಸಿಕ ಮತ್ತು ಕೌಟುಂಬಿಕ ಹಿಂಸೆ ಮತ್ತು ವ್ಯಭಿಚಾರದ ಆರೋಪಗಳನ್ನು ಮಾಡಿ ಅವರಿಂದ ವಿಚ್ಛೇದನ ಕೋರುತ್ತಾ ರೂ. 10 ಕೋಟಿಗಳ ಪರಿಹಾರ ಕೇಳಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. 

38 ವರ್ಷ ವಯಸ್ಸಿನ ತಲ್ವಾರ್ ಅವರು ಹನಿಸಿಂಗ್ ತನ್ನನ್ನು ಕ್ರೂರವಾಗಿ ಪಶುವಿನಂತೆ ನಡೆಸಿಕೊಂಡಿದ್ದಾರೆ ಎಂದು ಕೋರ್ಟಿಗೆ ಸಲ್ಲಿಸಿರುವ ತಮ್ಮ 120-ಪುಟಗಳ ಮನವಿಯಲ್ಲಿ ದೂರಿದ್ದಾರೆ. ಪತಿಯಿಂದ ಹಲವಾರು ಬಾರಿ ದೈಹಿಕವಾಗಿ ಹಲ್ಲೆಗೊಳಗಾಗಿರುವುದಾಗಿ ಅವರು ಹೇಳಿದ್ದಾರೆ.

ಹನಿಸಿಂಗ್ ಹಲವಾರು ಹೆಂಗಸರ ಜೊತೆ ಲೈಂಗಿಕ ಸಂಪರ್ಕವಿಟ್ಟುಕೊಂಡಿದ್ದಾರೆ ಮತ್ತು ತಮ್ಮಿಬ್ಬರ ಮದುವೆ ವಿಷಯವನ್ನು ಗೌಪ್ಯವಾಗಿಟ್ಟಿದ್ದಾರೆಂದು ಶಾಲಿನಿ ಆರೋಪಿದ್ದಾರೆ. ಅವರ ಕುಟಂಬದ ಇತರ ಸದಸ್ಯರು ಸಹ ತನಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಾರೆ ಮತ್ತು ಪಂಜಾಬಿ ಹಾಡುಗಾರನನ್ನು ಮದುವೆಯಾದಾಗಿನಿಂದ ಭೀತಿ ಮತ್ತು ಆತಂಕದಲ್ಲಿ ಜೀವಿಸುತ್ತಿರುವುದಾಗಿ ಆಕೆ ಹೇಳಿದ್ದಾರೆ.

ಸತತವಾಗಿ ಅನುಭವಿಸುತ್ತಿರುವ ಹಿಂಸೆ ಮತ್ತು ಮಾನಸಿಕ ವೇದನೆಯಿಂದಾಗಿ ತನ್ನನ್ನು ಖಿನ್ನತೆ ಆವರಿಸಿಕೊಂಡಿದೆ ಎಂದು ಜನೆವರಿ 23, 2011 ರಂದು ಹನಿಸಿಂಗ್ ಅವರನ್ನು ಮದುವೆಯಾದ ಶಾಲಿನಿ ತನ್ನ ಮನವಿಯಲ್ಲಿ ಹೇಳಿದ್ದಾರೆ.

ಯೋ ಯೋ ಹನಿಸಿಂಗ್ ಅವರ ಅಸಲಿ ಹೆಸರು ಹರ್ದೇಶ್ ಸಿಂಗ್ ಆಗಿದೆ.

ಇದನ್ನೂ ಓದಿ: Jio Fiber: ಜಿಯೋ ಫೈಬರ್​ ಬಳಕೆದಾರರಿಗೆ ಖುಷಿ ವಿಚಾರ; ಇನ್ಮುಂದೆ ಸ್ಮಾರ್ಟ್ ಟಿವಿಯಲ್ಲೂ ಸಿಗಲಿದೆ ವಿಡಿಯೋ ಕಾಲ್​ ಸೌಲಭ್ಯ

Click on your DTH Provider to Add TV9 Kannada