Jio Fiber: ಜಿಯೋ ಫೈಬರ್ ಬಳಕೆದಾರರಿಗೆ ಖುಷಿ ವಿಚಾರ; ಇನ್ಮುಂದೆ ಸ್ಮಾರ್ಟ್ ಟಿವಿಯಲ್ಲೂ ಸಿಗಲಿದೆ ವಿಡಿಯೋ ಕಾಲ್ ಸೌಲಭ್ಯ
Smart TV Video Calling: ಇತ್ತೀಚೆಗೆ ಹೊಸದಾಗಿ ಬರುತ್ತಿರುವ ಒನ್ ಪ್ಲಸ್ ಮತ್ತು ಶಿಯೋಮಿ ಸ್ಮಾರ್ಟ್ ಟಿವಿಗಳಲ್ಲಿ ಅಂತರ್ಗತ ವೆಬ್ ಕ್ಯಾಮರಾ (In-Built Web Camera)ಗಳು ಇರುತ್ತವೆ. ಆದರೆ ಈಗ ಜಿಯೋ ಪರಿಚಯಿಸಿರುವ ಹೊಸ ಫೀಚರ್ ಅಂಥ In-Built ವೆಬ್ ಕ್ಯಾಮರಾ ಇಲ್ಲದ ಟಿವಿಗಳಲ್ಲೂ ಕೆಲಸ ಮಾಡುತ್ತದೆ.
ಸದಾ ಒಂದಿಲ್ಲೊಂದು ಹೊಸ ಫೀಚರ್ಗಳನ್ನು ಪರಿಚಯಿಸುವ ರಿಲಯನ್ಸ್ ಜಿಯೋ (Reliance Jio) ಇದೀಗ ಮತ್ತೊಂದು ಹೊಸ ಸೌಲಭ್ಯವನ್ನು ತನ್ನ ಗ್ರಾಹಕರಿಗೆ ನೀಡಲು ಮುಂದಾಗಿದೆ. ಜಿಯೋ ಫೈಬರ್ (Jio Fiber) ಬಳಕೆದಾರರು ಇನ್ನುಮುಂದೆ ತಮ್ಮ ಸ್ಮಾರ್ಟ್ ಟಿವಿಯಲ್ಲೇ ವಿಡಿಯೋ ಕಾಲ್ ಮಾಡಬಹುದಾಗಿದೆ. ಇದಕ್ಕೆ ಕ್ಯಾಮರಾ ಆನ್ ಕೇಬಲ್ (Camera on Cable) ಎಂದು ಟೆಲಿಕಾಂ ದಿಗ್ಗಜ ಜಿಯೋ ಹೆಸರಿಟ್ಟಿದೆ.
ಅರೆ ಅದು ಹೇಗೆ? ಟಿವಿಯಲ್ಲಿ ಕ್ಯಾಮರಾ ಇಲ್ಲದೆಯೇ ವಿಡಿಯೋ ಕರೆನಾ? ಎಂಬ ಪ್ರಶ್ನೆ ಎದ್ದಿರಬಹುದು..ನಿಜಕ್ಕೂ ಸತ್ಯ. ಜಿಯೋ ಇದೀಗ ಪರಿಚಯಿಸಿರುವ ಕ್ಯಾಮರಾ ಆನ್ ಕ್ಯಾಬಲ್ (Camera On Cable ಸೌಲಭ್ಯದಲ್ಲಿ ಟಿವಿ (Smart TV)ಯಲ್ಲಿ ಕ್ಯಾಮರಾ ಇರಬೇಕು ಅಂತೇನೂ ಇಲ್ಲ. ನಿಮ್ಮ ಬಳಿ ಇರುವ ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್, ಐಫೋನ್ಗಳ ಮೂಲಕವೇ ಟಿವಿಯಲ್ಲಿ ವಿಡಿಯೋ ಕಾಲ್ ಮಾಡಬಹುದು.
ಸೌಲಭ್ಯ ಪಡೆಯುವುದು ಹೇಗೆ? ಜಿಯೋ ಫೈಬರ್ ಬಳಕೆದಾರರು ಜಿಯೋಜಾಯಿನ್ ಆ್ಯಪ್ (JioJoin App) ಡೌನ್ಲೋಡ್ ಮಾಡಿಕೊಳ್ಳಬೇಕು. ಈ ಆ್ಯಪ್ ಗೂಗಲ್ ಪ್ಲೇಸ್ಟೋರ್ ಮತ್ತು ಆ್ಯಪಲ್ ಪ್ಲೇ ಸ್ಟೋರ್ ಎರಡರಲ್ಲೂ ಲಭ್ಯ ಇದೆ. ಜಿಯೋಜಾಯಿನ್ ಆ್ಯಪ್ ಡೌನ್ಲೋಡ್ ಮಾಡಿಕೊಂಡಾದ ಬಳಿಕ, ಅದರೊಂದಿಗೆ ನಿಮ್ಮ ಜಿಯೋ ಫೈಬರ್ (ಲ್ಯಾಂಡ್ಲೈನ್ ನಂಬರ್)ನ 10 ಅಂಕಿಯ ನಂಬರ್ನ್ನು ಕನ್ಫಿಗರ್ (ವಿನ್ಯಾಸ) ಮಾಡಬೇಕು. ಜಿಯೋ ಫೈಬರ್ ಬಳಕೆದಾರರು ಈ ಲ್ಯಾಂಡ್ಲೈನ್ ನಂಬರ್ನ್ನು ಸ್ಮಾರ್ಟ್ಫೋನ್, ಜಿಯೋ ಸೆಟ್ ಟಾಪ್ ಬಾಕ್ಸ್ ಸೇರಿ ಆರು ಡಿವೈಸ್ಗಳಿಗೆ ಕನ್ಫಿಗರ್ ಮಾಡಿಕೊಳ್ಳಬಹುದಾಗಿದೆ. ಬಳಕೆದಾರರು ತಮ್ಮ ಜಿಯೋ ಮೊಬೈಲ್ ನಂಬರ್ಗೂ ಕಾಲ್ ರಿಂಗಿಂಗ್ ಕನ್ಫಿಗರ್ ಮಾಡಿಕೊಳ್ಳುವುದರಿಂದ, ಅವರು ಮನೆಯಲ್ಲಿ ಇಲ್ಲದಾಗಲೂ ಟಿವಿಗೆ ಬರುವ ಕಾಲ್ನ್ನು ಸ್ವೀಕರಿಸಬಹುದಾಗಿದೆ. ಒಟ್ಟಾರೆ ಜಿಯೋ ಇದೀಗ ಪರಿಚಯಿಸುತ್ತಿರುವ ಈ ಹೊಸ ವೈಶಿಷ್ಟ್ಯದಿಂದ ಬಳಕೆದಾರರು ತಮ್ಮ ಮೊಬೈಲ್ ಫೋನ್ನ್ನು ವೆಬ್ಕ್ಯಾಮ್ ರೀತಿಯಲ್ಲಿ ಉಪಯೋಗಿಸಿಕೊಳ್ಳಬಹುದು. ಸೆಟ್ಟಾಪ್ ಬಾಕ್ಸ್ಗೆ ಕನ್ಫಿಗರ್ ಮಾಡಿಕೊಳ್ಳುವುದರಿಂದ ಟಿವಿ ಮೂಲಕ ವಿಡಿಯೋ ಕಾಲ್ ಮಾಡಬಹುದಾಗಿದೆ. ಜಿಯೋ ಫೈಬರ್ ಜತೆ ಬರುವ ಜಿಯೋ ವೈಸ್ ಮೂಲಕ ಈ ವಿಡಿಯೋ ಕಾಲ್ನ್ನು ಸಾಧ್ಯಗೊಳಿಸಲಾಗಿದೆ.
ಇತ್ತೀಚೆಗೆ ಹೊಸದಾಗಿ ಬರುತ್ತಿರುವ ಒನ್ ಪ್ಲಸ್ ಮತ್ತು ಶಿಯೋಮಿ ಸ್ಮಾರ್ಟ್ ಟಿವಿಗಳಲ್ಲಿ ಅಂತರ್ಗತ ವೆಬ್ ಕ್ಯಾಮರಾ (In-Built Web Camera)ಗಳು ಇರುತ್ತವೆ. ಆದರೆ ಈಗ ಜಿಯೋ ಪರಿಚಯಿಸಿರುವ ಹೊಸ ಫೀಚರ್ ಅಂಥ In-Built ವೆಬ್ ಕ್ಯಾಮರಾ ಇಲ್ಲದ ಟಿವಿಗಳಲ್ಲೂ ಕೆಲಸ ಮಾಡುತ್ತದೆ. ಗ್ರಾಹಕರಿಗೆ ಅನುಕೂಲಕರವಾಗಿದೆ. ನಿಮ್ಮ ಮನೆಯ ಸ್ಮಾರ್ಟ್ ಟಿವಿಯಲ್ಲಿ ವೆಬ್ ಕ್ಯಾಮರಾ ಇಲ್ಲವೆಂದು ಹೊಸದನ್ನು ಖರೀದಿಸುವ ಅಗತ್ಯವಿಲ್ಲ. ಜಿಯೋ ಜಾಯಿನ್ ಆ್ಯಪ್ ಮೂಲಕ ಹೊಸ ವೆಬ್ ಕ್ಯಾಮ್ ಬಳಸಿ, ವಿಡಿಯೋ ಕಾಲ್ ಮಾಡಿ.
ಇದನ್ನೂ ಓದಿ: ಅತ್ಯಾಚಾರ ಸಂತ್ರಸ್ತೆಯ ಪೋಷಕರ ಫೋಟೊ ಶೇರ್ ಮಾಡಿದ ರಾಹುಲ್ ವಿರುದ್ಧ ಕ್ರಮಕ್ಕೆ ಎನ್ಸಿಪಿಸಿಆರ್ ಒತ್ತಾಯ
Viral Video: ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲೇ ಯೋಗಾಸನ ಮಾಡಿದ ಯುವತಿ; ಶಾಕಿಂಗ್ ವಿಡಿಯೋ ಇಲ್ಲಿದೆ
Telecom gaint Jio announces new video calls feature for smart TV
Published On - 9:01 pm, Wed, 4 August 21