ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿ ಸೇಲ್: ಈ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ದಿಢೀರ್ ಏರಿಕೆ
Redmi Note 10: ಈ ಹಿಂದೆ ಕೂಡ ಶವೋಮಿ ರೆಡ್ಮಿ ನೋಟ್ 10 ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಎರಡು ಬಾರಿ ಹೆಚ್ಚಳ ಮಾಡಿತ್ತು. ಸದ್ಯ ಹೊಸದಾಗಿ ಮತ್ತೆ 500 ರೂ. ಗಳ ಏರಿಕೆ ಮಾಡಲಾಗಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್ಫೋನ್ಗಳಿಗೆ (Smartphone) ಎಲ್ಲಿಲದ ಬೇಡಿಕೆ ಇದೆ. ಇದಕ್ಕಾಗಿಯೆ ಮೊಬೈಲ್ ಬ್ರ್ಯಾಂಡ್ಗಳು ಭಾರತದಲ್ಲಿ ಅತಿ ಹೆಚ್ಚು ಫೋನನ್ನು ಬಿಡುಗಡೆ ಮಾಡುತ್ತವೆ. ಅದರಲ್ಲೂ ಚೀನಾ ಮೂಲದ ಶವೋಮಿ (Xiaomi) ಕಂಪೆನಿ ಭಾರತದ ನೆಚ್ಚಿನ ಬ್ರ್ಯಾಂಡ್ ಆಗಿದೆ. ಕಳೆದ ಎರಡು ವರ್ಷಗಳಿಂದ ನಂಬರ್ ಒನ್ ಪಟ್ಟದಲ್ಲೇ ಭದ್ರವಾಗಿದೆ. ಸದ್ಯ ಶವೋಮಿ ಕಂಪೆನಿ ತನ್ನ ರೆಡ್ಮಿ ಅಡಿಯಲ್ಲಿ ಈ ವರ್ಷ ಬಿಡುಗಡೆ ಮಾಡಿದ್ದ ರೆಡ್ಮಿ ನೋಟ್ 10 (Redmi Note 10) ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಏರಿಕೆ ಮಾಡಿದೆ. ಭಾರತದಲ್ಲಿ ಈ ಫೋನ್ ಭರ್ಜರಿ ಸೇಲ್ ಕಾಣುತ್ತಿರುವ ಕಾರಣ ಬೆಲೆ ಹೆಚ್ಚಿಸಿದೆ ಎನ್ನಲಾಗಿದೆ.
ಈ ಹಿಂದೆ ಕೂಡ ಶವೋಮಿ ರೆಡ್ಮಿ ನೋಟ್ 10 ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಎರಡು ಬಾರಿ ಹೆಚ್ಚಳ ಮಾಡಿತ್ತು. ಸದ್ಯ ಹೊಸದಾಗಿ ಮತ್ತೆ 500 ರೂ. ಗಳ ಏರಿಕೆ ಮಾಡಲಾಗಿದೆ. ಈ ಫೋನ್ 4GB RAM ಮತ್ತು 64GB ಸ್ಟೋರೆಜ್ ಸಾಮರ್ಥ್ಯದ ಬೆಲೆ ಈಗ 13,499 ರೂ. ಆಗಿದೆ. ಅದೇ ರೀತಿ 6GB RAM ಮತ್ತು 128GB ವೇರಿಯಂಟ್ ಬೆಲೆಯು ಈಗ 16,449 ರೂ. ಆಗಿದೆ.
ರೆಡ್‌ಮಿ ನೋಟ್ 10 ಸ್ಮಾರ್ಟ್‌ಫೋನ್ 1080×2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.43-ಇಂಚಿನ ಫುಲ್ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 678 SoC ಪ್ರೊಸೆಸರ್ನಿಂಧ ಆವೃತವಾಗಿದ್ದು, ಆಂಡ್ರಾಯ್ಡ್ 11 ನಲ್ಲಿ MIUI 12 ರೊಂದಿಗೆ ಕಾರ್ಯನಿರ್ವಹಿಸುತ್ತದೆ.
ಇನ್ನೂ ಈ ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೋನಿ ಐಎಂಎಕ್ಸ್ 582 ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಶೂಟರ್, ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಶೂಟರ್ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 13 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.
5000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿಯನ್ನು ಹೊಂದಿದ್ದು, ಇದು 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G VOLTE, ವೈ-ಫೈ, ಬ್ಲೂಟೂತ್ v5.0, ಇನ್ಫ್ರಾರೆಡ್ (ಐಆರ್), ಯುಎಸ್‌ಬಿ ಟೈಪ್-ಸಿ ಯಿಂದ ಕೂಡಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ನಲ್ಲಿ ರೆಡ್ಮಿ ನೋಟ್ 10 ಸ್ಮಾರ್ಟ್‌ಫೋನ್ ಖರೀದಿಗೆ ಸಿಗುತ್ತಿದೆ.
WhatsApp Update: ವಾಟ್ಸ್ಆ್ಯಪ್ನಲ್ಲಿ ಬಂತು ಹೊಸ ಫೀಚರ್: ಈಗ ಫೋಟೋ ಸೆಂಡ್ ಮಾಡೋವಾಗ ತೋರಿಸುತ್ತೆ ಈ ಆಯ್ಕೆ
Gmail Features: ನೀವು ತಿಳಿಯಬೇಕಾದ 5 ಜಿಮೇಲ್ ಫೀಚರ್ಗಳು: ಕೆಲಸ ಸುಲಭ ಆಗುತ್ತೆ ನೋಡಿ
(Redmi Note 10 Price Hike Xiaomi increases Latest Redmi Note 10 price for the third time)