WhatsApp Update: ವಾಟ್ಸ್ಆ್ಯಪ್ನಲ್ಲಿ ಬಂತು ಹೊಸ ಫೀಚರ್: ಈಗ ಫೋಟೋ ಸೆಂಡ್ ಮಾಡೋವಾಗ ತೋರಿಸುತ್ತೆ ಈ ಆಯ್ಕೆ
ಈ ಮೂಲಕ ವಾಟ್ಸ್ಆ್ಯಪ್ ತನ್ನ ಪ್ರೈವಸಿಯನ್ನು ಇನ್ನೂ ಒಂದು ಹೆಜ್ಜೆ ಮುಂದು ಇಟ್ಟಿದೆ. ಈ ಹೊಸ ಆಯ್ಕೆ ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಗೆ ನೀಡಲಾಗಿದೆ.
ವಿಶ್ವದಲ್ಲಿ ಕೋಟ್ಯಾಂತರ ಮಂದಿ ಬಳಕೆದಾರರನ್ನು ಹೊಂದಿರುವ ಫೇಸ್ಬುಕ್ (Facebook) ಒಡೆತನದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ (WhatsApp) ಹೊಸ ಹೊಸ ಅಪ್ಡೇಟ್ ಅನ್ನು ನೀಡುತ್ತಲೇ ಇದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ನಾನಾ ಪ್ರಯೋಗ ನಡೆಸಿ ಹೊಸ ಆಯ್ಕೆಯನ್ನು ನೀಡುವ ವಾಟ್ಸ್ಆ್ಯಪ್ ಸದ್ಯ ತನ್ನ ಹೊಸ ಅಪ್ಡೇಟ್ ಪರಿಚಯಿಸಿದ್ದು ಬಳಕೆದಾರರಿಗೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಈ ಹೊಸ ಅಪ್ಡೇಟ್ನಲ್ಲಿ ಬಳಕೆದಾರರು ತಮ್ಮ ಸ್ನೇಹಿತರಿಗೆ ಮತ್ತು ಕುಟುಂಬದವರಿಗೆ ಫೊಟೋ ಅಥವಾ ವಿಡಿಯೋವನ್ನು ಕಳುಹಿಸಿದಾಗ ಒಮ್ಮೆ ಮಾತ್ರ ಕಾಣಿಸುವಂತೆ ಆಯ್ಕೆ ಮಾಡಬಹುದಾಗಿದೆ.
ವಾಟ್ಸ್ಆ್ಯಪ್ ಪರಿಚಯಿಸಿರುವ ಈ ಹೊಸ ಸಿಂಗಲ್ ವೀವಿಂಗ್ ಆಯ್ಕೆ ಅನೇಕರು ಮೆಚ್ಚಿಕೊಂಡಿದ್ದಾರೆ. ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದರೆ, ಉದಾಹರಣೆಗೆ ನೀವು ನಿಮ್ಮ ಸ್ನೇಹಿತರ ಚಾಟ್ ಬಾಕ್ಸ್ ಓಪನ್ ಮಾಡಿ ಫೋಟೋ ಅಥವಾ ವಿಡಿಯೋ ಕಳುಹಿಸುವ ಬೇಕೆಂದಿದ್ದರೆ, ಐಕಾನ್ ಮೇಲೆ ಕ್ಲಿಕ್ ಮಾಡುತ್ತೀರಿ. ಆಗ ಫೋಟೊ ಅಥವಾ ವಿಡಿಯೋ ಸೆಲಕ್ಟ್ ಮಾಡಿ ಸೆಂಡ್ ಬಟನ್ ಪ್ರೆಸ್ ಮಾಡುವ ಪಕ್ಕದಲ್ಲೇ ವೀವ್ ಒನ್ಸ್ ಮೋಡ್ ಆಯ್ಕೆ ಇರುತ್ತದೆ. ಅದನ್ನು ಪ್ರೆಸ್ ಮಾಡಿ ಕಳುಹಿಸಿದರೆ, ನೀವು ಸೆಂಡ್ ಮಾಡಿದ ಫೈಲ್ ಅನ್ನು ಅವರಿಗೆ ಒಮ್ಮೆಗೆ ಮಾತ್ರ ಓಪನ್ ಮಾಡಲು ಸಾಧ್ಯವಾಗುತ್ತಿದೆ.
ಈ ಹೊಸ ಅಪ್ಡೇಟ್ ಬಗ್ಗೆ ಮಾಹಿತಿ ಹಂಚಿಕೊಂಡಿರುವ ವಾಟ್ಸ್ಆ್ಯಪ್, ಈ ಆಯ್ಕೆಯನ್ನು ನಾವು ನೀಡಿರುವುದು ನ್ಯೂಡ್ ಫೋಟೋ ಕಳುಹಿಸಲು ಅಲ್ಲ, ಅಥವಾ ವೈಫೈ ಪಾಸ್ವರ್ಡ್ ಯಾರಿಗೂ ತಿಳಿಯದಂತೆ ಹಂಚಿಕೊಳ್ಳಲು ಅಲ್ಲ. ಬದಲಾಗಿ ಒಳ್ಳೆಯ ಕಾರ್ಯಕ್ಕಾಗಿ, ಫೋಟೋ ಅಥವಾ ವಿಡಿಯೋವನ್ನು ಸ್ಕ್ರೀನ್ಶಾಟ್ ತೆಗೆಯ ಬಾರದು ಎಂಬ ಕಾರಣಕ್ಕಾಗಿ ಎಂದು ಹೇಳಿದೆ.
ಈ ಮೂಲಕ ವಾಟ್ಸ್ಆ್ಯಪ್ ತನ್ನ ಪ್ರೈವಸಿಯನ್ನು ಇನ್ನೂ ಒಂದು ಹೆಜ್ಜೆ ಮುಂದು ಇಟ್ಟಿದೆ. ಈ ಹೊಸ ಆಯ್ಕೆ ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಗೆ ನೀಡಲಾಗಿದೆ.
ಇನ್ನೂ ಇತ್ತೀಚೆಗಷ್ಟೆ ವಾಟ್ಸ್ಆ್ಯಪ್ ಮೂಲಕ ಕರೆ ಮಾಡುವವರಿಗೆ ಹೊಸ ಫೀಚರ್ನಿಂದ ಹೆಚ್ಚಿನ ಅನುಕೂಲವಾಗಲಿದೆ. ಬಳಕೆದಾರರು ಗ್ರೂಪ್ ಕರೆ ಮಾಡುವಾಗ ಇಲ್ಲದೆ, ವೈಯಕ್ತಿಕ ಕರೆ ಮಾಡುವಾಗ ಮತ್ತೊಬ್ಬರನ್ನು ಸೇರಿಸಿಕೊಳ್ಳುವ ಆಯ್ಕೆಯನ್ನು ವಾಟ್ಸ್ಆ್ಯಪ್ ಮೊದಲೇ ಪರಿಚಯಿಸಿತ್ತು. ಆದರೆ, ಈಗ ಹೆಚ್ಚುವರಿಯಾಗಿ, ಕರೆ ಮಾಡುವ ಸಂದರ್ಭ, ಅವರು ಸ್ವೀಕರಿಸದೇ ಇದ್ದರೂ, ಮತ್ತೆ ಕರೆ ಚಾಲೂ ಇದ್ದರೆ ಅಲ್ಲಿ ಸೇರಿಕೊಳ್ಳಬಹುದು. ಅವರಿಗೆ ಮತ್ತೆ ಪ್ರತ್ಯೇಕವಾಗಿ ಕರೆ ಮಾಡಿ ಸೇರಿಸಿಕೊಳ್ಳುವ ಅಗತ್ಯವಿಲ್ಲ. ಅಲ್ಲಿಯೇ ಇರುವ ಆಯ್ಕೆಯನ್ನು ಬಳಸಿಕೊಂಡು ಕರೆಯಲ್ಲಿ ಸೇರಿಕೊಳ್ಳುವ ಆಯ್ಕೆ ನೀಡಲಾಗಿದೆ.
Gmail Features: ನೀವು ತಿಳಿಯಬೇಕಾದ 5 ಜಿಮೇಲ್ ಫೀಚರ್ಗಳು: ಕೆಲಸ ಸುಲಭ ಆಗುತ್ತೆ ನೋಡಿ
108mp ಕ್ಯಾಮೆರಾ ಜೊತೆ ಸೂಪರ್ ಆಫರ್: ಅತೀ ಕಡಿಮೆ ಬೆಲೆಗೆ 5G ಸ್ಮಾರ್ಟ್ಫೋನ್
(WhatsApp New Update WhatsApp photos and videos can now disappear after a single viewing)