108mp ಕ್ಯಾಮೆರಾ ಜೊತೆ ಸೂಪರ್ ಆಫರ್: ಅತೀ ಕಡಿಮೆ ಬೆಲೆಗೆ 5G ಸ್ಮಾರ್ಟ್​ಫೋನ್

Mi 10i Price in India: ಈ ಫೋನ್​ನಲ್ಲಿ ಒಟ್ಟು 5 ಕ್ಯಾಮೆರಾ ನೀಡಲಾಗಿದೆ. ಹಿಂಬದಿಯ 108 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ (ಸ್ಯಾಮ್‌ಸಂಗ್ ಎಚ್‌ಎಂ 2), 8 ಮೆಗಾಪಿಕ್ಸೆಲ್ (ಅಲ್ಟ್ರಾ-ವೈಡ್-ಆಂಗಲ್ ಅಪರ್ಚರ್ ಎಫ್ / 2.2), 2 ಮೆಗಾಪಿಕ್ಸೆಲ್ ಮ್ಯಾಕ್ರೋ ಮತ್ತು 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಕ್ಯಾಮೆರಾಗಳನ್ನು ನೀಡಲಾಗಿದೆ.

108mp ಕ್ಯಾಮೆರಾ ಜೊತೆ ಸೂಪರ್ ಆಫರ್: ಅತೀ ಕಡಿಮೆ ಬೆಲೆಗೆ 5G ಸ್ಮಾರ್ಟ್​ಫೋನ್
Mi 10i
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 03, 2021 | 5:39 PM

ಶಿಯೋಮಿ (Xiaomi) ತನ್ನ ಅಧಿಕೃತ ವೆಬ್‌ಸೈಟ್‌ Mi.com ನಲ್ಲಿ ಎಕ್ಸ್‌ಚೇಂಜ್ ಆಫರ್ ನೀಡುತ್ತಿದೆ. ಎಕ್ಸ್​ಚೇಂಜ್ ಡೇಸ್​ ಹೆಸರಿನಲ್ಲಿ ನೀಡಲಾಗುತ್ತಿರುವ ಈ ಕೊಡುಗೆಗಳ ಮೂಲಕ ಗ್ರಾಹಕರು ತಮ್ಮ ಹಳೆಯ ಫೋನ್‌ಗಳನ್ನು ಬದಲಾಯಿಸಿ ದೊಡ್ಡ ರಿಯಾಯಿತಿಗಳನ್ನು ಪಡೆಯಬಹುದು. ಈ ಆಫರ್ ಅಡಿಯಲ್ಲಿ Xiaomi ಕಂಪೆನಿ ತನ್ನ ಮಿ 10i- 5G (Mi 10i 5G) ಸ್ಮಾರ್ಟ್​ಫೋನ್ ಮೇಲೆ ಭರ್ಜರಿ ಆಫರ್​ನ್ನು ನೀಡಿರುವುದು ವಿಶೇಷ.

Mi.com ಮಾಹಿತಿಯ ಪ್ರಕಾರ, Mi 10 ಅನ್ನು ಕೇವಲ 20,499 ರೂಗಳ ಆರಂಭಿಕ ಬೆಲೆಯಲ್ಲಿ ತಮ್ಮದಾಗಿಸಿಕೊಳ್ಳಬಹುದು. ಇದಲ್ಲದೇ, ಇದರ ಮೇಲೆ 3,000 ರೂಗಳ ಹೆಚ್ಚುವರಿ ರಿಯಾಯಿತಿಯನ್ನು ಸಹ ನೀಡಲಾಗುತ್ತಿದೆ. ಎಸ್‌ಬಿಐ ಕಾರ್ಡ್ ಮೂಲಕ ಈ ಫೋನ್ ಖರೀದಿಸಿದರೆ 1,500 ರೂ.ಗಳ ತ್ವರಿತ ರಿಯಾಯಿತಿ ನೀಡಲಾಗುತ್ತಿದೆ. ಇದಲ್ಲದೇ, ಗ್ರಾಹಕರು ಈ ಫೋನಿನೊಂದಿಗೆ Mi Wifi ಸ್ಮಾರ್ಟ್ ಸ್ಪೀಕರ್ ಅನ್ನು ಕೇವಲ 1,999 ರೂಗಳಿಗೆ ತಮ್ಮದಾಗಿಸಿಕೊಳ್ಳಬಹುದು. Mi 10i 6GB+64GB, 6GB+128GB ಸ್ಟೋರೇಜ್ ಮತ್ತು 8GB+128GB ಸ್ಟೋರೇಜ್​ ಮೂರು ಆಯ್ಕೆಗಳಲ್ಲಿ ಲಭ್ಯವಿದೆ. ಹಾಗೆಯೇ ಫೋನಿನ ಮತ್ತೊಂದು ವಿಶೇಷತೆ ಎಂದರೆ ಇದರ ಕ್ಯಾಮೆರಾ. Mi 10i ನಲ್ಲಿ 108 ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ.

Mi 10i ವಿಶೇಷತೆಗಳೇನು? ಡಿಸ್​ಪ್ಲೇ: Mi 10i 6.67 ಇಂಚಿನ ಪೂರ್ಣ HD + (2400 x 1080 ಪಿಕ್ಸೆಲ್‌ಗಳು) ರೆಸಲ್ಯೂಶನ್ ಡಾಟ್ ಡಿಸ್‌ಪ್ಲೇ ಹೊಂದಿದೆ. ಫೋನ್‌ನ ಸುರಕ್ಷತೆಗಾಗಿ, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಅನ್ನು ಮುಂಭಾಗ ಮತ್ತು ಹಿಂಭಾಗದಲ್ಲಿ ನೀಡಲಾಗಿದೆ. ಗ್ರಾಹಕರು ಈ ಫೋನ್ ಅನ್ನು ಪೆಸಿಫಿಕ್ ಸನ್​ರೈಸ್, ಅಟ್ಲಾಂಟಿಕ್ ಬ್ಲೂ ಮತ್ತು ಮಿಡ್ನೈಟ್ ಬ್ಲಾಕ್ ಬಣ್ಣಗಳಲ್ಲಿ ಖರೀದಿಸಬಹುದು.

ಪ್ರೊಸೆಸರ್: ಈ ಸ್ಮಾರ್ಟ್​ಫೋನ್ ಕ್ವಾಲ್ಕಾಮ್ ಸ್ನಾಪ್ ಡ್ರಾಗನ್ 750 ಜಿ ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ ಬೆಸ್ಟ್ MIUI 12 ನಲ್ಲಿ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ.

ಕ್ಯಾಮೆರಾ: ಈ ಫೋನ್​ನಲ್ಲಿ ಒಟ್ಟು 5 ಕ್ಯಾಮೆರಾ ನೀಡಲಾಗಿದೆ. ಹಿಂಬದಿಯ 108 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ (ಸ್ಯಾಮ್‌ಸಂಗ್ ಎಚ್‌ಎಂ 2), 8 ಮೆಗಾಪಿಕ್ಸೆಲ್ (ಅಲ್ಟ್ರಾ-ವೈಡ್-ಆಂಗಲ್ ಅಪರ್ಚರ್ ಎಫ್ / 2.2), 2 ಮೆಗಾಪಿಕ್ಸೆಲ್ ಮ್ಯಾಕ್ರೋ ಮತ್ತು 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಕ್ಯಾಮೆರಾಗಳನ್ನು ನೀಡಲಾಗಿದೆ. ಹಾಗೆಯೇ ಸೆಲ್ಫಿಗಾಗಿ ಈ ಫೋನಿನ ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್​ನ ಕ್ಯಾಮೆರಾ ಇರಲಿದೆ.

ಬ್ಯಾಟರಿ: Mi 10i ಫೋನ್​ನಲ್ಲಿ 4820mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದೆ. ಇದರ ಜೊತೆ 33W ಫಾಸ್ಟ್ ಚಾರ್ಜರ್ ಕೂಡ ಸಿಗಲಿದೆ. ಇದಲ್ಲದೆ ಈ ಫೋನ್​ನಲ್ಲಿ ಡ್ಯುಯಲ್-ಸ್ಟೀರಿಯೋ ಸ್ಪೀಕರ್‌ಗಳು, 3.5 ಎಂಎಂ ಹೆಡ್‌ಫೋನ್ ಜ್ಯಾಕ್, ಯುಎಸ್‌ಬಿ ಟೈಪ್-ಸಿ ಪೋರ್ಟ್, ಐಆರ್ ಸೆನ್ಸರ್ ಅನ್ನು ನೀಡಲಾಗಿದೆ. ಹಾಗೆಯೇ ಫಿಂಗರ್ ಪ್ರಿಂಟ್ ಸೆನ್ಸರ್ ಆಯ್ಕೆ ಇದರಲ್ಲಿದೆ.

ಬೆಲೆ: Mi.com ವೆಬ್​ಸೈಟ್​ನಲ್ಲಿ Mi 10i ಸ್ಮಾರ್ಟ್​ಫೋನ್​ ಬೆಲೆ 21,999 ರೂ. (6GB+128GB), 23,999 ರೂ. (8GB+128GB)ಇದ್ದು, ಆಫರ್​ ಅಡಿಯಲ್ಲಿ ಖರೀದಿಸಬಹುದು.

ಇದನ್ನೂ ಓದಿ: ಕಡಿಮೆ ಬೆಲೆಯ ಪವರ್​ಫುಲ್ ಪವರ್ ಬ್ಯಾಂಕ್: ಮೊಬೈಲ್, ಲ್ಯಾಪ್​ಟಾಪ್​ನ್ನು ಚಾರ್ಜ್​ ಮಾಡಬಹುದು

ಇದನ್ನೂ ಓದಿ: Viral Story: ಒಂದು ಕೆ.ಜಿ ಮಾಂಸ ಖರೀದಿಸಿದ್ರೆ ಒಂದು ಲೀಟರ್ ಪೆಟ್ರೋಲ್ ಉಚಿತ

ಇದನ್ನೂ ಓದಿ: LICಯ ವಿಶೇಷ ಯೋಜನೆ: 200 ರೂ. ಹೂಡಿಕೆ ಮಾಡಿ, 28 ಲಕ್ಷ ರೂ. ಪಡೆಯಿರಿ

(Xiaomi’s budget phone with 108 megapixel camera is getting big discounts)

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್