Mi Hypersonic: ಕಡಿಮೆ ಬೆಲೆಯ ಪವರ್ಫುಲ್ ಪವರ್ ಬ್ಯಾಂಕ್: ಮೊಬೈಲ್, ಲ್ಯಾಪ್ಟಾಪ್ನ್ನು ಚಾರ್ಜ್ ಮಾಡಬಹುದು
Mi Hypersonic: ವೇಗದ ಚಾರ್ಜಿಂಗ್ ಸಾಮರ್ಥ್ಯದ ಹೊರತಾಗಿ, ಮಿ ಹೈಪರ್ಸೋನಿಕ್ ಪವರ್ ಬ್ಯಾಂಕ್ ಬ್ಲೂಟೂತ್ ಹೆಡ್‌ಸೆಟ್‌ಗಳು, ಫಿಟ್‌ನೆಸ್ ಬ್ಯಾಂಡ್‌ಗಳು, ಸ್ಮಾರ್ಟ್ ವಾಚ್‌ಗಳು ಮುಂತಾದ ಕಡಿಮೆ ವಿದ್ಯುತ್ ಉತ್ಪಾದನಾ ಸಾಧನಗಳಿಗೆ ಕಡಿಮೆ ಪವರ್ ಚಾರ್ಜಿಂಗ್ ಮೋಡ್ ಅನ್ನು ಒಳಗೊಂಡಿದೆ.
Mi India ತನ್ನ ಅತ್ಯಂತ ಪ್ರೀಮಿಯಂ ಪವರ್ ಬ್ಯಾಂಕ್ ಮಿ ಹೈಪರ್ಸೋನಿಕ್ (Mi HyperSonic) ಅನ್ನು ಬಿಡುಗಡೆ ಮಾಡಿದೆ. ಹೊಸ ಮಾದರಿಯ ಪವರ್ ಬ್ಯಾಂಕ್ 50W ಫಾಸ್ಟ್-ಚಾರ್ಜಿಂಗ್ ಸಪೋರ್ಟ್ ಮಾಡುತ್ತಿರುವುದು ವಿಶೇಷ. ಹಾಗೆಯೇ ಈ ಪವರ್ ಬ್ಯಾಂಕ್ ಮೂಲಕ ಒಂದೇ ಸಮಯದಲ್ಲಿ ಅನೇಕ ಮೊಬೈಲ್ಗಳನ್ನು ಚಾರ್ಜ್ ಮಾಡಿಕೊಳ್ಳಬಹುದು. ಇದಕ್ಕಾಗಿ ಈ ಪವರ್ ಬ್ಯಾಂಕ್ನಲ್ಲಿ ಮೂರು ಪೋರ್ಟ್‌ಗಳನ್ನು ನೀಡಲಾಗಿದೆ. ಮಿ ಹೈಪರ್ಸೋನಿಕ್ ಪವರ್ ಬ್ಯಾಂಕ್ 20,000mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಇದನ್ನು ಝಿರೋದಿಂದ ಸಂಪೂರ್ಣ ಚಾರ್ಜ್ ಮಾಡಲು ತಗುಲುವ ಸಮಯ ಕೇವಲ 3 ಗಂಟೆ 50 ನಿಮಿಷ ಮಾತ್ರ.
ಈ ಪವರ್ ಬ್ಯಾಂಕ್ನ ವೈಶಿಷ್ಟ್ಯಗಳೇನು? ವೇಗದ ಚಾರ್ಜಿಂಗ್ ಸಾಮರ್ಥ್ಯದ ಹೊರತಾಗಿ, ಮಿ ಹೈಪರ್ಸೋನಿಕ್ ಪವರ್ ಬ್ಯಾಂಕ್ ಬ್ಲೂಟೂತ್ ಹೆಡ್‌ಸೆಟ್‌ಗಳು, ಫಿಟ್‌ನೆಸ್ ಬ್ಯಾಂಡ್‌ಗಳು, ಸ್ಮಾರ್ಟ್ ವಾಚ್‌ಗಳು ಮುಂತಾದ ಕಡಿಮೆ ವಿದ್ಯುತ್ ಉತ್ಪಾದನಾ ಸಾಧನಗಳಿಗೆ ಕಡಿಮೆ ಪವರ್ ಚಾರ್ಜಿಂಗ್ ಮೋಡ್ ಅನ್ನು ಒಳಗೊಂಡಿದೆ. ಈ ಮೋಡ್ ಮೂಲಕ ಸುರಕ್ಷಿತವಾಗಿ ಚಾರ್ಜ್ ಮಾಡಲು ಪವರ್ ಬಟನ್ ಅನ್ನು ಎರಡು ಬಾರಿ ಒತ್ತಿದರೆ ಸಾಕು.
ಮಿ ಹೈಪರ್ಸೋನಿಕ್ ಪವರ್ ಬ್ಯಾಂಕ್ ಸಂಪೂರ್ಣ ಸುರಕ್ಷತೆಯಿಂದ ಕೂಡಿರಲಿದೆ ಎಂದು ಶಿಯೋಮಿ ಕಂಪೆನಿ ಹೇಳಿಕೊಂಡಿದೆ. ಇದಕ್ಕಾಗಿ, ಲಿಥಿಯಂ-ಪಾಲಿಮರ್ ಬ್ಯಾಟರಿಗಳು 16-ಲೇಯರ್ ಚಿಪ್ ರಕ್ಷಣೆಯನ್ನು ಅಳವಡಿಸಲಾಗಿದೆ. ಇದು ಪವರ್ ಬ್ಯಾಂಕ್ನ ಮತ್ತು ಚಾರ್ಜಿಂಗ್ ಡಿವೈಸ್ ಅನ್ನು ಶಾರ್ಟ್ ಸರ್ಕ್ಯೂಟ್, ಅಧಿಕ ಬಿಸಿಯಾಗುವಿಕೆ, ಇನ್ಪುಟ್ ಓವರ್-ವೋಲ್ಟೇಜ್, ಎಲೆಕ್ಟ್ರೋಸ್ಟಾಟಿಕ್, ಬ್ಯಾಟರಿ ಓವರ್-ಕರೆಂಟ್, ಓವರ್-ಡಿಸ್ಚಾರ್ಜ್ ಮತ್ತು ಇತರ ಸಮಸ್ಯೆಗಳಿಂದ ರಕ್ಷಿಸುತ್ತದೆ.
ಇನ್ನು ಈ ಪವರ್ ಬ್ಯಾಂಕ್ ಯುಎಸ್‌ಬಿ ಟೈಪ್-ಸಿ ಮತ್ತು ಎರಡು ಯುಎಸ್‌ಬಿ ಟೈಪ್-ಎ ಪೋರ್ಟ್‌ಗಳನ್ನು ಒಳಗೊಂಡ ಟ್ರಿಪಲ್ ಪೋರ್ಟ್ ವಿನ್ಯಾಸವನ್ನು ಹೊಂದಿದೆ. ಸ್ಮಾರ್ಟ್ಫೋನ್ ಮತ್ತು ಲ್ಯಾಪ್ಟ್ಯಾಪ್ ಎರಡನ್ನೂ ವೇಗವಾಗಿ ಚಾರ್ಜ್ ಮಾಡಲು ಇದನ್ನು ಬಳಸಬಹುದು.
ಶಿಯೋಮಿ ಕಂಪೆನಿಯ ಪ್ರಕಾರ, ಮಿ ಹೈಪರ್ಸೋನಿಕ್ ಪವರ್ ಬ್ಯಾಂಕ್ 50W ನಲ್ಲಿ ಸ್ಮಾರ್ಟ್ ಫೋನ್ ಗಳನ್ನು ವೇಗವಾಗಿ ಚಾರ್ಜ್ ಮಾಡಬಹುದು. ಅಂದರೆ 1 ಗಂಟೆ ಚಾರ್ಜಿಂಗ್‌ನಲ್ಲಿ 4500mAh ಸಾಮರ್ಥ್ಯದ ಬ್ಯಾಟರಿಯನ್ನು ಚಾರ್ಜ್ ಫುಲ್ ಮಾಡಬಹುದು. ಹಾಗೆಯೇ ಇದು ಪವರ್ ಡೆಲಿವರಿ 3.0 ಸಪೋರ್ಟ್ ಮಾಡುತ್ತಿದ್ದು, ಲಾಪ್ಟಾಪ್ ಅನ್ನು 45W ನಲ್ಲಿ ವೇಗವಾಗಿ ಚಾರ್ಜ್ ಮಾಡಬಹುದು. ಅಂದಹಾಗೆ ಇದರ ಬೆಲೆ ಕೇವಲ 3,499 ರೂ. ಮಾತ್ರ.
ಇದನ್ನೂ ಓದಿ: Jio Offer: 3GB ಡೇಟಾ ಜೊತೆ ಕಡಿಮೆ ಬೆಲೆ ಹೊಸ ರಿಚಾರ್ಜ್ ಪ್ಲ್ಯಾನ್ ಪರಿಚಯಿಸಿದ ಜಿಯೋ
ಇದನ್ನೂ ಓದಿ: ಸೂರ್ಯಕುಮಾರ್ ಯಾದವ್ಗೆ ಅವಕಾಶ ಕೈತಪ್ಪುವ ಆತಂಕ
(Mi Hypersonic 20,000 mAh power bank launched)