Jio Offer: 3GB ಡೇಟಾ ಜೊತೆ ಕಡಿಮೆ ಬೆಲೆ ಹೊಸ ರಿಚಾರ್ಜ್ ಪ್ಲ್ಯಾನ್ ಪರಿಚಯಿಸಿದ ಜಿಯೋ
Jio Recharge Plans: ಎರಡೂ ಯೋಜನೆಗಳನ್ನು ಹೋಲಿಸಿದರೆ, ಏರ್‌ಟೆಲ್‌ಗಿಂತ ಜಿಯೋ ಯೋಜನೆ ಉತ್ತಮ ಎನ್ನಬಹುದು. ಏರ್‌ಟೆಲ್‌ನ ಯೋಜನೆಗಿಂತ ಜಿಯೋ ಯೋಜನೆ 4 ರೂಪಾಯಿ ಅಗ್ಗವಾಗಿದೆ.
ಭಾರತದ ಅತ್ಯಂತ ಜನಪ್ರಿಯ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹೊಸ ರಿಚಾರ್ಜ್ ಪ್ಲ್ಯಾನ್ ಅನ್ನು ಪರಿಚಯಿಸಿದೆ. 28 ದಿನಗಳ ವಾಲಿಟಿಡಿ ಹೊಂದಿರುವ ಈ ಯೋಜನೆಗೆ ಜಿಯೋಫೋನ್ ಆಲ್ ಇನ್ ಒನ್ (Jiophone All in one) ಪ್ಲ್ಯಾನ್ ಎಂದು ಹೆಸರಿಡಲಾಗಿದೆ. ಅದರಂತೆ ಈ ಯೋಜನೆಯು ಜಿಯೋಫೋನ್ ಬಳಕೆದಾರರಿಗಾಗಿ ಮಾತ್ರ ಲಭ್ಯವಿರಲಿದೆ. ಹಾಗಿದ್ರೆ ಜಿಯೋ ಹೊಸ ರಿಚಾರ್ಜ್ ಪ್ಲ್ಯಾನ್ನ ಲಾಭಗಳೇನು ನೋಡೋಣ.
ಜಿಯೋನ 75 ರೂ ಯೋಜನೆ ( Jio 75 rs recharge plan ): 75 ರೂ. ರಿಚಾರ್ಜ್ನ ಈ ಯೋಜನೆಯಲ್ಲಿ ಗ್ರಾಹಕರಿಗೆ ಒಟ್ಟು 3 ಜಿಬಿ ಡೇಟಾ ನೀಡಲಾಗುತ್ತಿದೆ. ಅಂದರೆ ಪ್ರತಿ ದಿನ 0.1 GB ಡೇಟಾವನ್ನು ಬಳಸಬಹುದು. ಹಾಗೆಯೇ ಇದೇ ಪ್ಲ್ಯಾನ್ನಲ್ಲಿ ಆಫರ್ ರೀತಿಯಲ್ಲಿ ಹೆಚ್ಚುವರಿ 200 MB ಉಚಿತ ಡೇಟಾ ಕೂಡ ಸಿಗಲಿದೆ. ಇನ್ನು ರಿಚಾರ್ಜ್ ಮೂಲಕ ಯಾವುದೇ ನಂಬರ್ಗೆ ಅನಿಯಮಿತ ಕರೆ ಮಾಡಬಹುದು. ಹಾಗೆಯೇ ಉಚಿತ 50 SMS ಗಳನ್ನು ಸಹ ಕಳುಹಿಸಬಹುದು. ಇದರ ವಾಲಿಟಿಡಿ 28 ದಿನಗಳ ಮಾತ್ರ.
ಏರ್‌ಟೆಲ್ 79 ರೂ. ರಿಚಾರ್ಜ್ ಪ್ಲ್ಯಾನ್ ( Airtel 79 rs Rechage plan ): ಏರ್‌ಟೆಲ್ ತನ್ನ ರೂ 49 ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು ಸ್ಥಗಿತಗೊಳಿಸಿದ್ದು, ಅದರ ಬದಲಾಗಿ 79 ರೂ. ಗಳ ಯೋಜನೆಯನ್ನು ಪರಿಚಯಿಸಿದೆ. ಈ ಪ್ಲ್ಯಾನ್ ಮೂಲಕ ಏರ್‌ಟೆಲ್ ಗ್ರಾಹಕರು 64 ರೂ. ಟಾಕ್ ಟೈಮ್ ಪಡೆಯಲಿದ್ದಾರೆ. ಜೊತೆಗೆ 200MB ಡೇಟಾ ಕೂಡ ಲಭ್ಯವಿರುತ್ತದೆ. ಈ ಯೋಜನೆಯು 28 ದಿನಗಳ ಮಾನ್ಯತೆಯನ್ನು ಹೊಂದಿರುತ್ತದೆ. ಏರ್‌ಟೆಲ್‌ನ ಈ ಯೋಜನೆ ಜುಲೈ 29 ರಿಂದ ಆರಂಭವಾಗಿದ್ದು, ಈ ಹಿಂದಿನ ಯೋಜನೆಗೆ ಹೋಲಿಸಿದರೆ 30 ರೂಪಾಯಿಯಷ್ಟು ದುಬಾರಿಯಾಗಿದೆ.
ಏರ್‌ಟೆಲ್ vs ಜಿಯೋ ( Jio vs Airtel ) ಯಾವುದು ಉತ್ತಮ? ಎರಡೂ ಯೋಜನೆಗಳನ್ನು ಹೋಲಿಸಿದರೆ, ಏರ್‌ಟೆಲ್‌ಗಿಂತ ಜಿಯೋ ಯೋಜನೆ ಉತ್ತಮ ಎನ್ನಬಹುದು. ಏರ್‌ಟೆಲ್‌ನ ಯೋಜನೆಗಿಂತ ಜಿಯೋ ಯೋಜನೆ 4 ರೂಪಾಯಿ ಅಗ್ಗವಾಗಿದೆ. ಆದರೆ ಈ ಯೋಜನೆಯ ಏಕೈಕ ಅನಾನುಕೂಲವೆಂದರೆ ಇದು ಜಿಯೋಫೋನ್ ಬಳಕೆದಾರರಿಗೆ ಮಾತ್ರ ನೀಡಲಾಗಿದೆ. ಹೀಗಾಗಿ ಜಿಯೋ ಸಿಮ್ ಬಳಕೆದಾರರಿಗೆ 75 ರೂ.ಗಳ ಹೊಸ ರಿಚಾರ್ಜ್ ಪ್ಲ್ಯಾನ್ ಲಭ್ಯವಿರುವುದಿಲ್ಲ.
ಇದನ್ನೂ ಓದಿ: ಮದ್ಯಪಾನ ಮಾಡಿ ಶತಕ ಸಿಡಿಸಿದ್ದ ಗ್ಯಾರಿ ಸೋಬರ್ಸ್..!
ಇದನ್ನೂ ಓದಿ: ಸೂರ್ಯಕುಮಾರ್ ಯಾದವ್ಗೆ ಅವಕಾಶ ಕೈತಪ್ಪುವ ಆತಂಕ
(Reliance Jio launched cheapest recharge plan)