Happy Birthday Garry Sobers: ಮದ್ಯಪಾನ ಮಾಡಿ ಶತಕ ಸಿಡಿಸಿದ್ದ ಗ್ಯಾರಿ ಸೋಬರ್ಸ್​..!

Garry Sobers: ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಒವರ್​ನಲ್ಲಿ 6 ಸಿಕ್ಸರ್ ಸಿಡಿಸಿದ ಮೊದಲ ಬ್ಯಾಟ್ಸ್​ಮನ್ ಎಂಬ ದಾಖಲೆ ಸೋಬರ್ಸ್ ಹೆಸರಿನ್ಲಲಿದೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮಾಲ್ಕಮ್ ನ್ಯಾಶ್ ಅವರ ಓವರ್‌ನಲ್ಲಿ ಸತತ 6 ಸಿಕ್ಸರ್‌ಗಳನ್ನು ಬಾರಿಸಿ ಹೊಸ ಇತಿಹಾಸ ನಿರ್ಮಿಸಿದ್ದರು.

Happy Birthday Garry Sobers: ಮದ್ಯಪಾನ ಮಾಡಿ ಶತಕ ಸಿಡಿಸಿದ್ದ ಗ್ಯಾರಿ ಸೋಬರ್ಸ್​..!
Garry Sobers
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jul 28, 2021 | 4:45 PM

ಸರ್ ಗ್ಯಾರಿ ಸೋಬರ್ಸ್​…ಕ್ರಿಕೆಟ್ ಇತಿಹಾಸ ಕಂಡ ಅತ್ಯಾದ್ಭುತ ಆಲ್​ರೌಂಡರ್​ಗಳಲ್ಲಿ ಒಬ್ಬರು. ವೆಸ್ಟ್ ಇಂಡೀಸ್‌ ತಂಡದ ದಂತಕಥೆ ಸೋಬರ್ಸ್ ಅವರ ಜನ್ಮದಿನ. ಜುಲೈ 28, 1936 ರಂದು ಬಾರ್ಬಡೋಸ್‌ನಲ್ಲಿ ಜನಿಸಿದ ಗ್ಯಾರಿ ಸೋಬರ್ಸ್ ಇಂದು 85 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಗ್ಯಾರಿ ಸೋಬರ್ಸ್ ಅವರ ಅಂತರರಾಷ್ಟ್ರೀಯ ವೃತ್ತಿಜೀವನವು ಪ್ರತಿಯೊಬ್ಬ ಕ್ರಿಕೆಟಿಗನ ಸ್ಪೂರ್ತಿ ಕಾರಣವಾಗಿತ್ತು. ಏಕೆಂದರೆ ಬ್ಯಾಟಿಂಗ್, ಬೌಲಿಂಗ್ ಅಥವಾ ಫೀಲ್ಡಿಂಗ್ ಸೋಬರ್ಸ್ ಹೊಸ ಸಂಚಲನ ಸೃಷ್ಟಿಸಿದ್ದರು. ಬಹುಶಃ ಅದಕ್ಕಾಗಿಯೇ ದಿ ಲೆಜೆಂಡ್ ಡಾನ್ ಬ್ರಾಡ್ಮನ್ ಸೋಬರ್ಸ್ ಅವರನ್ನು ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ ಎಂದು ವರ್ಣಿಸಿರುವುದು.

ಡಾನ್ ಬ್ರಾಡ್ಮನ್ ಅವರ ಈ ಮಾತಿಗೆ ಸೋಬರ್ಸ್ ಅವರ ವೃತ್ತಿಜೀವನದ ಅಂಕಿ ಅಂಶಗಳೇ ಸಾಕ್ಷಿ. ಗ್ಯಾರಿ ವೆಸ್ಟ್ ಇಂಡೀಸ್ ಪರ 93 ಟೆಸ್ಟ್ ಪಂದ್ಯಗಳಲ್ಲಿ 57.78 ಸರಾಸರಿಯಲ್ಲಿ 8032 ರನ್ ಬಾರಿಸಿದ್ದಾರೆ. ಇದರಲ್ಲಿ 26 ಶತಕ ಮತ್ತು 30 ಅರ್ಧಶತಕಗಳು ಮೂಡಿಬಂದಿವೆ. ಇದೇ 235 ಟೆಸ್ಟ್ ವಿಕೆಟ್​ಗಳನ್ನು ಕೂಡ ಉರುಳಿಸಿದ್ದರು​ ಎಂಬುದು ವಿಶೇಷ.

ಕಡು ಬಡ ಕುಟುಂಬದಲ್ಲಿ ಜನಿಸಿದ ಸೋಬರ್ಸ್​ ಬಾಲ್ಯದಲ್ಲಿ ಕ್ರಿಕೆಟ್​ನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. 16 ವರ್ಷದ ತನಕ ಎಲ್ಲರಂತೆ ಸಾಮಾನ್ಯವಾಗಿ ಕ್ರಿಕೆಟ್ ಆಡುತ್ತಿದ್ದರು. ಆದರೆ ಅವರಲ್ಲಿನ ಪ್ರತಿಭೆ ಗಮನಿಸಿದ ಸ್ಥಳೀಯ ತಂಡಗಳಲ್ಲಿ ಚಾನ್ಸ್ ನೀಡಲಾಗುತ್ತಿತ್ತು. ಇದೇ ಪ್ರತಿಭೆ ಅನಾವರಣಗೊಳ್ಳುತ್ತಿದ್ದಂತೆ 1952-53ರಲ್ಲಿ ಅವರಿಗೆ ಇದ್ದಕ್ಕಿದ್ದಂತೆ ವೆಸ್ಟ್ ಇಂಡೀಸ್ ತಂಡದಲ್ಲಿ ಸ್ಥಾನ ಲಭಿಸಿತು. ಇದೇ ವೇಳೆ ಸೋಬರ್ಸ್​ ಸ್ವಂತ ಕ್ರಿಕೆಟ್ ಕಿಟ್​ ಕೂಡ ಹೊಂದಿರಲಿಲ್ಲ ಎಂಬುದು ಅಚ್ಚರಿ. ಹೀಗಾಗಿ ಅವರಿಗೆ ಬಾರ್ಬಡೋಸ್ ಕ್ರಿಕೆಟ್ ಅಸೋಸಿಯೇಷನ್ ಸುರಕ್ಷಿತ ಕಿಟ್ ನೀಡಿತ್ತು.

ವೆಸ್ಟ್ ಇಂಡೀಸ್ ತಂಡಕ್ಕೆ ಬೌಲರ್ ಆಗಿ ಪಾದಾರ್ಪಣೆ ಮಾಡಿದ ಸೋಬರ್ಸ್​ ಇಂಗ್ಲೆಂಡ್ ವಿರುದ್ಧದ ಚೊಚ್ಚಲ ಪಂದ್ಯದಲ್ಲಿ 4 ವಿಕೆಟ್ ಪಡೆದರು. ಇದಾಗ್ಯೂ ಸೋಬರ್ಸ್ ಕ್ರಿಕೆಟ್ ಅಂಗಳದಲ್ಲಿ ಗುರುತಿಸಿಕೊಂಡಿರಲಿಲ್ಲ. ಆದರೆ 1958 ರಲ್ಲಿ ಸೋಬರ್ಸ್ ಇಡೀ ವಿಶ್ವವನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದರು. ಪಾಕಿಸ್ತಾನದ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ಬಾರಿಸಿದರು. ಅಷ್ಟೇ ಅಲ್ಲದೆ ಈ ಇನಿಂಗ್ಸ್​ನಲ್ಲಿ ತ್ರಿಪಲ್ ಸೆಂಚುರಿಯೊಂದಿಗೆ ಅಂತ್ಯಗೊಳಿಸಿದ್ದರು. ಅಂದು 365 ರನ್ ಬಾರಿಸುವ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಪುಟಕ್ಕೆ ನಾಂದಿಯಾಡಿದ್ದರು ಎಡಗೈ ದಾಂಡಿಗ ಸೋಬರ್ಸ್​. 36 ವರ್ಷಗಳ ಕಾಲ ಈ ವಿಶ್ವ ದಾಖಲೆ 36 ಉಳಿದಿತ್ತು. 1994 ರಲ್ಲಿ ವೆಸ್ಟ್ ಇಂಡೀಸ್​ನ ಬ್ರಿಯಾನ್ ಲಾರಾ 375 ರನ್ ಗಳಿಸುವ ಮೂಲಕ ಸೋಬರ್ಸ್ ದಾಖಲೆಯನ್ನು ಮುರಿದಿದ್ದರು.

ತಮ್ಮ ಚೊಚ್ಚಲ ಶತಕದ ಬಳಿಕ ಬೌಲರ್ ಆಗಿದ್ದ ಸೋಬರ್ಸ್​ ಸ್ಪೋಟಕ ಬ್ಯಾಟ್ಸ್​ಮನ್ ಆಗಿ ಕೂಡ ಗುರುತಿಸಿಕೊಂಡರು. ಹಾಗೆಯೇ ಸೋಬರ್ಸ್​ ಬೌಲರುಗಳನ್ನು ಸಿಂಹಸ್ವಪ್ನದಂತೆ ಕಾಡ ತೊಡಗಿದರು. ಇಂಗ್ಲೆಂಡ್ ವಿರುದ್ಧದ ಚೊಚ್ಚಲ ಸರಣಿಯಲ್ಲಿ ವೇಗದ ಬೌಲರ್ ಲೆನ್ ಹಟ್ಟನ್‌ ಸತತ ಬೌನ್ಸರ್ ಎಸೆಯಲಾರಂಭಿಸಿದರು. ಈ ವೇಳೆ ಚೆಂಡು ಸೋಬರ್ಸ್​ ತಲೆಗೆ ಬಡಿಯಿತು. ಚೆಂಡನ್ನು ಮುಟ್ಟದೇ ಬಿಡಲು ಪ್ರಯತ್ನಿಸಿದಾಗ ಬಾಲ್ ಅವರ ತಲೆಗೆ ಬಡಿದಿತ್ತು. ಇದರ ಬಳಿಕ ಅವರು ತಮ್ಮ ಇಡೀ ವೃತ್ತಿಜೀವನದಲ್ಲಿ ಯಾವುದೇ ಬೌನ್ಸರ್ ಅನ್ನು ಬಿಡಲು ಪ್ರಯತ್ನಿಸಲಿಲ್ಲ ಎಂಬುದು ಅಚ್ಚರಿ. ಬೌನ್ಸರ್ ಎಸೆತಗಳಿಗೆ ಆಕ್ರಮಣಕಾರಿ ಹೊಡೆತಗಳ ಉತ್ತರ ನೀಡಲಾರಂಭಿಸಿದರು.

ಇನ್ನು 1973 ರಲ್ಲಿ, ಗ್ಯಾರಿ ಸೋಬರ್ಸ್ ಲಾರ್ಡ್ಸ್​ನಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು. ಆದರೆ ಈ ವೇಳೆ ಅವರು ಮದ್ಯಪಾನ ಮಾಡಿದ್ದರು ಎಂಬುದು ಆ ಬಳಿಕ ಅವರು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು. ಲಾರ್ಡ್ಸ್ ಟೆಸ್ಟ್ ವೇಳೆ ಸೋಬರ್ಸ್ 31 ರಂದು ಅಜೇಯರಾಗಿ ಉಳಿದಿದ್ದರು. ದಿನದಾಟದ ಬಳಿಕ ವೆಸ್ಟ್ ಇಂಡೀಸ್ ನಾಯಕ ಕ್ಲೈವ್ ಲಾಯ್ಡ್ ಲಂಡನ್ ನೈಟ್​​ಕ್ಲಬ್​ಗೆ ಕರೆದುಕೊಂಡು ಹೋಗಿದ್ದರು. ಇಬ್ಬರು ಮದ್ಯಪಾನ ಮಾಡುತ್ತಾ ಸಮಯ ಕಳೆದು ಹೋಗಿತ್ತು ಗೊತ್ತಿರಲಿಲ್ಲ. ಬೆಳಿಗ್ಗೆ 4 ಗಂಟೆಯವರೆಗೆ ಅಲ್ಲಿ ಕುಡಿಯುತ್ತಿದ್ದರು. ಆದರೆ ಮರುದಿನ ಸೋಬರ್ಸ್ ಬ್ಯಾಟಿಂಗ್ ಮುಂದುವರೆಸಬೇಕಿತ್ತು. ಈಗ ರೂಮ್​ಗೆ ಹೋಗಿ ಮಲಗಿದರೆ, ಎದ್ದೇಳಲು ಸಾಧ್ಯವಿಲ್ಲ ಎಂದು ಸೋಬರ್ಸ್​ಗೆ ಗೊತ್ತಿತ್ತು. ಹೀಗಾಗಿ ಬಾರ್​ನಲ್ಲೇ ಕೂಡ ಮತ್ತಷ್ಟು ವೈನ್ ಸೇವಿಸಿದರು. ಬಳಿಕ ಲಾರ್ಡ್ಸ್​ ಸ್ಟೇಡಿಯಂಗೆ ಆಗಮಿಸಿ ಸ್ನಾನ ಮಾಡಿ ಬ್ಯಾಟಿಂಗ್​ಗೆ ಇಳಿದರು. ಹ್ಯಾಂಗೋವರ್​ನಲ್ಲಿದ್ದ ಅವರು ಮೊದಲ ಓವರ್‌ನ 5 ಎಸೆತಗಳನ್ನು ನೋಡಿರಲಿಲ್ಲವಂತೆ. ಆದರೆ ಆರನೇ ಎಸೆತದ ವೇಳೆ ಸ್ವಲ್ಪ ಸುಧಾರಿಸಿಕೊಂಡು ಬ್ಯಾಟಿಂಗ್ ಮುಂದುವರೆಸಿದರು. ಅಲ್ಲದೆ ಈ ಪಂದ್ಯದಲ್ಲಿ ಅಜೇಯ 150 ರನ್ ಬಾರಿಸಿ ಮಿಂಚಿದ್ದ ಗ್ಯಾರಿ ಸೋಬರ್ಸ್.

ಅಂದಹಾಗೆ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಒವರ್​ನಲ್ಲಿ 6 ಸಿಕ್ಸರ್ ಸಿಡಿಸಿದ ಮೊದಲ ಬ್ಯಾಟ್ಸ್​ಮನ್ ಎಂಬ ದಾಖಲೆ ಸೋಬರ್ಸ್ ಹೆಸರಿನ್ಲಲಿದೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮಾಲ್ಕಮ್ ನ್ಯಾಶ್ ಅವರ ಓವರ್‌ನಲ್ಲಿ ಸತತ 6 ಸಿಕ್ಸರ್‌ಗಳನ್ನು ಬಾರಿಸಿ ಹೊಸ ಇತಿಹಾಸ ನಿರ್ಮಿಸಿದ್ದರು. ಆ ಬಳಿಕ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ರವಿಶಾಸ್ತ್ರಿ, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಯುವರಾಜ್ ಸಿಂಗ್, ಹರ್ಷಲ್ ಗಿಬ್ಸ್ ಮತ್ತು ಕೀರನ್ ಪೊಲಾರ್ಡ್ 6 ಎಸೆತಗಳಲ್ಲಿ 6 ಸಿಕ್ಸರ್‌ಗಳನ್ನು ಸಿಡಿಸಿದ ಸಾಧನೆ ಮಾಡಿದ್ದರು.

ಇದನ್ನೂ ಓದಿ: Dhananjay: ಡೇಂಜರಸ್ ಡಾಲಿ ಇಸ್ ಬ್ಯಾಕ್: ಹೊಸ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ

ಇದನ್ನೂ ಓದಿ: Rahul Dravid: ಶ್ರೀಲಂಕಾ ನಾಯಕನ ಜೊತೆ ರಾಹುಲ್ ದ್ರಾವಿಡ್ ಮಾತನಾಡಿದ್ದೇನು? ಇಲ್ಲಿದೆ ಉತ್ತರ

(Happy Birthday Garry Sobers: Scored a century while drunk, hit 6 sixes off 6 balls)

PC: GettyImages

‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ