AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dhananjay: ಡೇಂಜರಸ್ ಡಾಲಿ ಇಸ್ ಬ್ಯಾಕ್: ಹೊಸ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ

Dally Dhananjay: ಆಗಸ್ಟ್ 20 ರಂದು ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ದುನಿಯಾ ವಿಜಯ್ ನಟನೆಯ 'ಸಲಗ' ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲೂ ಖಡಕ್ ಪೊಲೀಸ್ ಆಫೀಸರ್​ ಆಗಿ ಧನಂಜಯ್ ಅಭಿನಯಿಸಿರುವುದು ವಿಶೇಷ.

Dhananjay: ಡೇಂಜರಸ್ ಡಾಲಿ ಇಸ್ ಬ್ಯಾಕ್: ಹೊಸ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ
Dhananjay
TV9 Web
| Updated By: ಝಾಹಿರ್ ಯೂಸುಫ್|

Updated on: Jul 27, 2021 | 9:56 PM

Share

ಡಾಲಿ ಧನಂಜಯ್​ ಅಂದರೆ ಥಟ್ಟನೆ ನೆನಪಾಗುವುದು ‘ಟಗರು’ ಶಿವನಿಗೆ ಟಕ್ಕರ್ ಕೊಟ್ಟ ಖತರ್ನಾಕ್ ಖಳನ ಮುಖ. ಅಂತಹದೊಂದು ಭಯಂಕರ ಅಭಿನಯ ಮಾಡಿ ನಟ ಭಯಂಕರ ಎನಿಸಿಕೊಂಡಿದ್ದ ಡಾಲಿ ಇದೀಗ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದ್ದಾರೆ. ‘ಟಗರು’ ಸಿನಿಮಾದಲ್ಲಿ ಶಿವಣ್ಣನ ಎದುರು ತೊಡೆ ತಟ್ಟಿದ ಬೆನ್ನಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ‘ಯಜಮಾನ’ ಸಿನಿಮಾದಲ್ಲಿ ಡಾಲಿ ಪಟ್ಟು ಅಂದ್ರೆ ಪಟಾಸು ಎನ್ನುತ್ತಾ ಮಿಠಾಯಿ ಸೂರಿಯಾಗಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ‘ಪಾಪ್ ಕಾರ್ನ್ ಮಂಕಿ ಟೈಗರ್’​ನಲ್ಲಿ ಮಂಕಿ ಸೀನನಾಗಿ ನಟ ರಾಕ್ಷಸನ ಬಿರುದಿಗೆ ತಕ್ಕಂತೆ ಅಭಿನಯಸಿದ್ದರು. ಹಾಗೆಯೇ ಪವರ್ ಸ್ಟಾರ್​ ಪುನೀತ್ ರಾಜ್​ ಕುಮಾರ್ ಅಭಿನಯದ ‘ಯುವರತ್ನ’ದಲ್ಲಿ ಧನಂಜಯ್ ಕಿಲಾಡಿ ಕಿಂಕರನಾಗಿ ಕಾಣಿಸಿಕೊಂಡ ಬಳಿಕ ಡಾಲಿಯ ಯಾವುದೇ ಚಿತ್ರದ ಅಪ್ಡೇಟ್​ಗಳು ಹೊರಬಿದ್ದಿರಲಿಲ್ಲ. ಇದೀಗ ‘ಬಡವ ರಾಸ್ಕಲ್’ ಆಗಿ ಪ್ರೇಕ್ಷಕರ ಮುಂದೆ ಬರಲು ಧನಂಜಯ್ ಸಜ್ಜಾಗಿದ್ದಾರೆ.

ಈ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದ್ದು, ಅದರಂತೆ ‘ಬಡವ ರಾಸ್ಕಲ್’ ಅವತಾರದಲ್ಲಿ ಡಾಲಿ ಸೆಪ್ಟೆಂಬರ್ 24 ರಂದು ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಹಾಗೂ ಡಬ್ಬಿಂಗ್ ಕಂಪ್ಲೀಟ್ ಆಗಿದ್ದು, ಒಂದಷ್ಟು ಪ್ರಿ ರಿಲೀಸ್ ಕೆಲಸಗಳನ್ನು ಮಾತ್ರ ಉಳಿಸಿಕೊಂಡಿದೆ. ಅದು ಕೂಡ ಶೀಘ್ರದಲ್ಲೇ ಮುಗಿಸುವ ವಿಶ್ವಾಸದಲ್ಲಿದೆ ಚಿತ್ರತಂಡ. ಇನ್ನು ಈ ಚಿತ್ರದಲ್ಲಿ ಧನಂಜಯ್ ಮಿಡ್ಲ್​ ಕ್ಲಾಸ್ ಗ್ಯಾಂಗ್​ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

‘ಬಡವ ರಾಸ್ಕಲ್​’ನಲ್ಲೂ ರಗಡ್ ಕಥಾಹಂದರವಿದ್ದು, ಹೀಗಾಗಿ ಮತ್ತೊಮ್ಮೆ ಡಾಲಿ ದೌತ್ರವತಾರವನ್ನು ನಿರೀಕ್ಷಿಸಬಹುದು. ಹಾಗೆಯೇ ಚಿತ್ರದಲ್ಲಿ ಡಾಲಿಗೆ ನಾಯಕಿಯಾಗಿ ‘ಲವ್ ಮಾಕ್ಟೇಲ್’ ಖ್ಯಾತಿಯ ಅಮೃತ ಅಯ್ಯಂಗಾರ್ ಕಾಣಿಸಿಕೊಂಡಿದ್ದಾರೆ. ಶಂಕರ್ ಗುರು ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರವನ್ನು ಡಾಲಿ ಪಿಕ್ಚರ್ಸ್ ಬ್ಯಾನರ್​ ಅಡಿಯಲ್ಲಿ ಖುದ್ದು ಧನಂಜಯ್ ನಿರ್ಮಿಸಿದ್ದು, ಅವರಿಗೆ ಸಾವಿತ್ರಮ್ಮ ಅಡವಿಸ್ವಾಮಿ ಸಹ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ.

ಆಗಸ್ಟ್ 20 ರಂದು ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ದುನಿಯಾ ವಿಜಯ್ ನಟನೆಯ ‘ಸಲಗ’ ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲೂ ಖಡಕ್ ಪೊಲೀಸ್ ಆಫೀಸರ್​ ಆಗಿ ಧನಂಜಯ್ ಅಭಿನಯಿಸಿರುವುದು ವಿಶೇಷ. ಹಾಗೆಯೇ ಗಣೇಶ ಚತುರ್ಥಿ ಪ್ರಯುಕ್ತ ಸೆಪ್ಟೆಂಬರ್‌ 10ರಂದು ಶಿವರಾಜ್ ಕುಮಾರ್ ನಟನೆಯ ‘ಭಜರಂಗಿ 2’ ಚಿತ್ರ ಕೂಡ ತೆರೆ ಕಾಣಲಿದ್ದು, ಅದರಂತೆ ಇನ್ನೆರಡು ತಿಂಗಳಲ್ಲಿ ಸಿನಿಪ್ರಿಯರಿಗೆ ಬ್ಯಾಕ್ ಟು ಬ್ಯಾಕ್ ಮನರಂಜನೆಯ ಭರ್ಜರಿ ರಸದೌತಣ ಸಿಗಲಿರುವುದು ಪಕ್ಕಾ.

ಇದನ್ನೂ ಓದಿ: Rahul Dravid: ಶ್ರೀಲಂಕಾ ನಾಯಕನ ಜೊತೆ ರಾಹುಲ್ ದ್ರಾವಿಡ್ ಮಾತನಾಡಿದ್ದೇನು? ಇಲ್ಲಿದೆ ಉತ್ತರ

ಇದನ್ನೂ ಓದಿ: Ola electric scooter: ಓಲಾ ಎಲೆಕ್ಟ್ರಿಕ್ ಸ್ಕೂಟರ್ ಟಾಪ್ ಸ್ಪೀಡ್ ಎಷ್ಟು ಗೊತ್ತಾ?

(Dhananjay’s Badava Rascal movie release Date announced)

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ