Kriti Kharabanda: ಮದುವೆಯ ಗುಟ್ಟು ಬಿಟ್ಟುಕೊಟ್ಟ ಗೂಗ್ಲಿ ಬೆಡಗಿ ಕೃತಿ ಕರಬಂಧ!
ಕೃತಿ ಕರಬಂಧ: ಕನ್ನಡದ ಗೂಗ್ಲಿ, ಸೂಪರ್ ರಂಗ ಮೊದಲಾದ ಚಿತ್ರಗಳಲ್ಲಿ ನಟಿಸಿರುವ ಕೃತಿ ಕರಬಂಧ ತಮ್ಮ ಮದುವೆಯ ಕುರಿತು ಮಾತನಾಡಿದ್ದಾರೆ. ಈ ಹಿಂದೆ ತಮ್ಮ ಗೆಳೆಯ ಪುಲ್ಕಿತ್ ಸಾಮ್ರಾಟ್ ಜೊತೆಗಿನ ಸಂಬಂಧವನ್ನು ಸ್ಪಷ್ಟಪಡಿಸಿದ್ದ ಅವರು ಈಗ ಮದುವೆಯ ಮಾತನಾಡಿದ್ದಾರೆ.
‘ಗೂಗ್ಲಿ’ ಬೆಡಗಿ ಕೃತಿ ಕರಬಂಧ ಬಾಲಿವುಡ್ನಲ್ಲಿ ಭದ್ರವಾಗಿ ಬೇರೂರಿರುವುದು ಎಲ್ಲರಿಗೂ ತಿಳಿದೇ ಇದೆ. ಪ್ರಸ್ತುತ ಅವರ ಖಾತೆಯಲ್ಲಿ ಹಲವಾರು ಸಿನಿಮಾಗಳಿವೆ. ಇತ್ತೀಚೆಗೆ ಅವರ ‘14 ಫೇರೆ’ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾದರೂ ಅದರ ಯಶಸ್ಸಿನಿಂದ ಅವರು ಹಿರಿಹಿರಿ ಹಿಗ್ಗುತ್ತಿದ್ದಾರೆ. ಅವರ ಸ್ನೇಹಿತ/ ಪ್ರಿಯಕರ ಪುಲ್ಕಿತ್ ಸಾಮ್ರಾಟ್ ಜೊತೆಗಿನ ಮದುವೆಯ ಯೋಚನೆಯ ಕುರಿತು ಮಾಧ್ಯಮವೊಂದರಲ್ಲಿ ಅವರು ಮಾತನಾಡಿದ್ದು, ತಾನು ಸಾಮ್ರಾಟ್ ಜೊತೆ ಒಡನಾಟದಲ್ಲಿರುವುದು ಮುಕ್ತವಾಗಿ ಹೇಳಿಕೊಂಡಿದ್ದರೂ ಸಹ ಉಳಿದ ವಿಚಾರಗಳನ್ನು ಗೌಪ್ಯವಾಗಿಯೇ ಇಡಲು ಬಯಸುವುದಾಗಿ ತಿಳಿಸಿದ್ದಾರೆ.
ಪುಲ್ಕಿತ್ ಸಾಮ್ರಾಟ್ ಜೊತೆಗಿನ ಮದುವೆಯ ವಿಚಾರವನ್ನು ಕೇವಲ ಪೋಷಕರೊಂದಿಗೆ ಮಾತ್ರ ಮಾತನಾಡುವುದಾಗಿ ತಿಳಿಸಿದ ಅವರು, ತಾನು ಖಾಸಗಿ ವಿಚಾರಗಳನ್ನು ಎಂದಿಗೂ ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಾನು ಪುಲ್ಕಿತ್ ಜೊತೆಗೆ ಡೇಟಿಂಗ್ ಆರಂಭಿಸಿದಾಗ ಅದನ್ನು ಮುಕ್ತವಾಗಿ ಒಪ್ಪಿಕೊಂಡೆ ಮತ್ತು ಎಲ್ಲರೆದುರು ಹೇಳಿಕೊಂಡೆ. ಅದಕ್ಕೆ ನನಗೇನೂ ಹಿಂಜರಿಕೆ ಇಲ್ಲ. ಆದರೆ ಅದರ ನಂತರದ್ದು ತೀರಾ ವೈಯಕ್ತಿಕ ವಿಷಯ. ಅದು ಬಹಳ ಪವಿತ್ರವಾದದ್ದು ಎಂಬ ಭಾವನೆ ನನ್ನದು. ಅದನ್ನು ನನ್ನ ತೀರಾ ಆಪ್ತ ವಲಯದೊಂದಿಗೆ ಮಾತ್ರ ಹಂಚಿಕೊಳ್ಳಬಲ್ಲನೇ ಹೊರತು ಮತ್ಯಾರಿಗೂ ತಿಳಿಸುವ ಅವಶ್ಯಕತೆ ನನಗೆ ಕಾಣುವುದಿಲ್ಲ ಎಂದು ಕೃತಿ ಹೇಳಿದ್ದಾರೆ.
ನೀವು ಅದ್ದೂರಿ ಮದುವೆಯನ್ನು ಇಷ್ಟಪಡುತ್ತೀರಾ ಎಂಬ ಪ್ರಶ್ನೆಗೆ ಕೃತಿ ಸ್ಪಷ್ಟವಾದ ಉತ್ತರವನ್ನು ನೀಡಿಲ್ಲ. ತಾನು ಆ ಕ್ಷಣದ್ದನ್ನು ಮಾತ್ರ ಯೋಚಿಸಬಲ್ಲೆ. ಹೀಗಾಗಿ ಆ ಕುರಿತು ತಾನಿನ್ನೂ ತೀರ್ಮಾನ ಕೈಗೊಂಡಿಲ್ಲ ಎಂದಿದ್ದಾರೆ. ಹಾಗೆಯೇ ಮುಂದಿನ ಭವಿಷ್ಯದ ಬಗ್ಗೆ ಯಾರಿಗೂ ತಿಳಿದಿಲ್ಲ. ಹಾಗಾಗಿ ಈ ಪ್ಲಾನ್ ಎಲ್ಲಾ ಮಾಡುವುದು ಏಕೆ ಎಂದು ನಗುತ್ತಾರೆ ಕೃತಿ. ಏನಾಗಬೇಕೋ ಅದು ಆಗುತ್ತದೆ. ಆದರೆ ಏನಾಗುತ್ತದೆ ಎಂದು ನನಗಿನ್ನೂ ತಿಳಿದಿಲ್ಲ. ನಿಮ್ಮಂತೆ ನನಗೂ ಆ ಸಮಯದಲ್ಲಿ ಆಶ್ಚರ್ಯವಾಗಬಹುದು ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಿದ್ದಾರೆ ಕೃತಿ ಕರಬಂಧ.
ಇದನ್ನೂ ಓದಿ: Parul Yadav: “ಒಂದು ವೇಳೆ ನಾನು ಸತ್ತರೆ…” ಪಾರುಲ್ ಯಾದವ್ ಹೀಗೆ ಬರೆಯಲು ಕಾರಣವಾಗಿದ್ದ ಕರುಣಾಜನಕ ಕತೆ ತಿಳಿದಿದೆಯೇ?
ಇದನ್ನೂ ಓದಿ: ನಾನಿ, ಸಾಯಿ ಪಲ್ಲವಿ ಮತ್ತು ಕೃತಿ ಶೆಟ್ಟಿ ಅಭಿನಯದ ‘ಶ್ಯಾಮ್ ಸಿಂಘಾ ರಾಯ್’ ಚಿತ್ರ ಶೀಘ್ರದಲ್ಲೇ ಬಿಡುಗಡೆಗೊಳ್ಳಲಿದೆ
(Kriti Karabandha opens up about her marriage planning with Pulkit Samrat)