AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vikrant Rona First Look: ವಿಕ್ರಾಂತ್ ರೋಣಾದಲ್ಲಿ ಜಿಆರ್ ಆಗಿ ಧೂಳೆಬ್ಬಿಸಲಿದ್ದಾರೆ ಜಾಕ್ವೆಲಿನ್!

Jacqueline Fernandez: ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ವಿಕ್ರಾಂತ್ ರೋಣಾ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ನಿಮಗೆಲ್ಲಾ ತಿಳಿದೇ ಇದೆ. ಈಗ ಚಿತ್ರದ ನಿರ್ದೇಶಕ ಜಾಕ್ವೆಲಿನ್ ಅವರ ಹೆಸರನ್ನು ಸೂಚ್ಯವಾಗಿ ತಿಳಿಸಿದ್ದು, ಅವರ ಪಾತ್ರದ ಫಸ್ಟ್ ಲುಕ್​ ಅನ್ನು ಬಿಡುಗಡೆ ಮಾಡಲು ದಿನಾಂಕ ನಿಗದಿಪಡಿಸಿದ್ದಾರೆ.

Vikrant Rona First Look: ವಿಕ್ರಾಂತ್ ರೋಣಾದಲ್ಲಿ ಜಿಆರ್ ಆಗಿ ಧೂಳೆಬ್ಬಿಸಲಿದ್ದಾರೆ ಜಾಕ್ವೆಲಿನ್!
ಅನೂಪ್ ಭಂಡಾರಿ, ಜಾಕ್ವೆಲಿನ್ ಫರ್ನಾಂಡಿಸ್
TV9 Web
| Updated By: shivaprasad.hs|

Updated on:Jul 28, 2021 | 12:53 PM

Share

ಕನ್ನಡದ ಬಹುನಿರೀಕ್ಷೆಯ ‘ವಿಕ್ರಾಂತ್ ರೋಣಾ’(Vikranth Rona) ಚಿತ್ರದ ಚಿತ್ರೀಕರಣದ ಮುಕ್ತಾಯದ ಬೆನ್ನಲ್ಲೇ ಚಿತ್ರತಂಡ ಮುಂದಿನ ಕೆಲಸಗಳಲ್ಲಿ ತೊಡಗಿಕೊಂಡಿದೆ. ಇತ್ತೀಚೆಗಷ್ಟೇ ಬಾಲಿವುಡ್ ತಾರೆ ಜಾಕ್ವೆಲಿನ್ ಫರ್ನಾಂಡಿಸ್(Jacqueline Fernandez) ವಿಕ್ರಾಂತ್ ರೋಣಾ ತಂಡವನ್ನು ಸೇರಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಅವರ ಪಾತ್ರದ ಕುರಿತು ಸದ್ಯದಲ್ಲೇ ತಿಳಿಸುವುದಾಗಿ ಅಂದು ಚಿತ್ರತಂಡ ತಿಳಿಸಿತ್ತು. ಈಗ ಅದಕ್ಕೆ ದಿನಾಂಕವನ್ನು ನಿಗದಿಪಡಿಸಲಾಗಿದೆ. ಜುಲೈ 31ರಿಂದ ‘ಜಿಆರ್’ ಅನ್ನೋ ಹೆಸರು ಚಾಲ್ತಿಗೆ ಬರಲಿದೆ ಎಂದು ಬರೆದುಕೊಂಡಿರುವ ನಿರ್ದೇಶಕ ಅನೂಪ್ ಭಂಡಾರಿ(Anup Bhandari) ಅಂದೇ, ಜಾಕ್ವೆಲಿನ್ ಪಾತ್ರದ ಫಸ್ಟ್ ಲುಕ್ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

ಜಾಕ್ವೆಲಿನ್ ಫರ್ನಾಂಡಿಸ್ ಅವರು ಮುಖ್ಯ ಪಾತ್ರವೊಂದನ್ನು ನಿಭಾಯಿಸುತ್ತಿದ್ದಾರೆ ಎಂದು ಈ ಹಿಂದೆ ತಿಳಿಸಲಾಗಿತ್ತು. ಅದನ್ನು ಘೋಷಿಸುವುದಕ್ಕೆ ಈಗ ದಿನಾಂಕ ನಿಗದಿಯಾಗಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಇತ್ತೀಚೆಗಷ್ಟೇ ನಟ ಕಿಚ್ಚ ಸುದೀಪ್, ನಿರ್ದೇಶಕ ಅನೂಪ್ ಭಂಡಾರಿ ಅವರು ಜಾಕ್ವಲಿನ್ ಜೊತೆಗಿನ ಚಿತ್ರಗಳನ್ನು ಹಂಚಿಕೊಂಡಿದ್ದರು.

ನಿರ್ದೇಶಕ ಅನೂಪ್ ಭಂಡಾರಿ ಹಂಚಿಕೊಂಡಿರುವ ಟ್ವೀಟ್: 

ಈ ಹಿಂದೆ ಅನೂಪ್ ಭಂಡಾರಿ ಜಾಕ್ವೆಲಿನ್ ಪಾತ್ರದ ಬಗ್ಗೆ ಏನು ಹೇಳಿದ್ದರು?

ಈ ಮೊದಲು ಜಾಕ್ವೆಲಿನ್ ಹಾಡಿಗೆ ಹೆಜ್ಜೆ ಹಾಕಿದ ಕುರಿತು ಮಾಹಿತಿ ಹಂಚಿಕೊಂಡಿದ್ದ ಅನೂಪ್ ಭಂಡಾರಿ, ‘ಜಾಕ್ವೆಲಿನ್​ ಅವರೇ ನಿಮಗೆ ಚಂದನವನಕ್ಕೆ ಸ್ವಾಗತ. ನಿಮ್ಮ ಜೊತೆ ಕೆಲಸ ಮಾಡಿದ್ದು ಖುಷಿ ನೀಡಿತು. ನಿಮ್ಮ ಪಾತ್ರದ ಹೆಸರು ಮತ್ತು ಫಸ್ಟ್​ಲುಕ್​ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಪ್ರೇಕ್ಷಕರಿಗೆ ಇದು ಖಂಡಿತ ಇಷ್ಟವಾಗಲಿದೆ ಎಂಬ ನಂಬಿಕೆ ನನಗಿದೆ. ಡಬ್ಬಿಂಗ್​ ಸ್ಟುಡಿಯೋದಲ್ಲಿ ಮತ್ತೆ ಭೇಟಿ ಆಗೋಣ. ಅಲ್ಲಿಯವರೆಗೆ ಸ್ವಲ್ಪ ಜೋಪಾನ’ ಎಂದು ಅನೂಪ್​ ಭಂಡಾರಿ ಟ್ವೀಟ್​ ಮಾಡಿದ್ದರು. ಅಲ್ಲಿ ಒಂದು ಸುಳಿವನ್ನೂ ಬಿಟ್ಟುಕೊಟ್ಟಿದ್ದ ಅವರು- ‘ಸ್ವಲ್ಪ ಜೋಪಾನ’ ಎನ್ನುವುದು ಹಾಡಿನ ಸಾಲಾಗಿರಬಹುದು ಎಂಬಂತೆ ಅದನ್ನು ಉಲ್ಲೇಖಿಸಿದ್ದರು. ನಿಜವನ್ನು ತಿಳಿಯಲು ಹಾಡಿಗೆ ಕಾಯಬೇಕಾಗಿದ್ದರೂ ಸಹ, ಜಾಕ್ವೆಲಿನ್ ಪಾತ್ರ ಪರಿಚಯದ ದಿನಾಂಕವನ್ನು ಈಗ ಘೋಷಿಸಿರುವುದು ಅಭಿಮಾನಿಗಳಿಗೆ ಸ್ವಲ್ಪ ಸಮಾಧಾನ ನೀಡಿದೆ.

ಇದನ್ನೂ ಓದಿ: ‘ವಿಕ್ರಾಂತ್​ ರೋಣ’ ಚಿತ್ರದ ನಟಿ ಜಾಕ್ವೆಲಿನ್​ ಹಾಟ್​ ಫೋಟೋ ವೈರಲ್​

ಇದನ್ನೂ ಓದಿ: ವಿಕ್ರಾಂತ್​ ರೋಣ ಚಿತ್ರದಲ್ಲಿ ಕಿಚ್ಚನ ಜೊತೆ ಕಿಚ್ಚು ಹೆಚ್ಚಿಸಿದ ಜಾಕ್ವೆಲಿನ್​ ಫರ್ನಾಂಡಿಸ್

(Jacqueline Fernandez first look in Vikranth Rona Movie as JR will be releasing on July 31st says Anup Bhandari)

Published On - 12:38 pm, Wed, 28 July 21

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ