ಜಾಕ್ವೆಲಿನ್ ಜೊತೆಗಿನ ನೆಚ್ಚಿನ ಚಿತ್ರಗಳನ್ನು ಹಂಚಿಕೊಂಡ ಕಿಚ್ಚ ಸುದೀಪ್

Kichcha Sudeepa: ಕಿಚ್ಚ ಸುದೀಪ್ ಜಾಕ್ವೆಲಿನ್ ಜೊತೆ ಹೆಜ್ಜೆ ಹಾಕಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ನಟ ಜಾಕ್ವೆಲಿನ ಪ್ರತಿಭೆಯನ್ನು ಕೊಂಡಾಡಿದ್ದಲ್ಲದೇ, ಅವರೊಂದಿಗಿನ ಎರಡು ಚಿತ್ರಗಳನ್ನೂ ಹಂಚಿಕೊಂಡಿದ್ದಾರೆ.

ಜಾಕ್ವೆಲಿನ್ ಜೊತೆಗಿನ ನೆಚ್ಚಿನ ಚಿತ್ರಗಳನ್ನು ಹಂಚಿಕೊಂಡ ಕಿಚ್ಚ ಸುದೀಪ್
ಕಿಚ್ಚ ಸುದೀಪ್ ಹಂಚಿಕೊಂಡ ಚಿತ್ರ
TV9kannada Web Team

| Edited By: shivaprasad.hs

Jul 18, 2021 | 1:05 PM

ಚಂದನವನದಲ್ಲಿ ಕಿಚ್ಚು ಹತ್ತಿಸಲು ಬಂದ ಜಾಕ್ವೆಲಿನ್ ಫರ್ನಾಂಡಿಸ್ ಅವರೊಂದಿಗಿನ ನೆಚ್ಚಿನ ಚಿತ್ರಗಳನ್ನು ಕಿಚ್ಚ ಸುದೀಪ್ ಹಂಚಿಕೊಂಡಿದ್ದಾರೆ. ಸುದೀಪ್ ನಟನೆಯ ವಿಕ್ರಾಂತ್ ರೋಣ ಚಿತ್ರಕ್ಕೆ ಹೆಜ್ಜೆ ಹಾಕಲು ಕನ್ನಡಕ್ಕೆ ಇದೇ ಮೊದಲ ಬಾರಿಗೆ ಜಾಕ್ವಲಿನ್ ಫರ್ನಾಂಡಿಸ್ ಅವರನ್ನು ಕರೆಸಲಾಗಿತ್ತು. ಇದೀಗ ಸುದೀಪ್ ಹಂಚಿಕೊಂಡಿರುವ ಮಾಹಿತಿಯಂತೆ ಜಾಕ್ವೆಲಿನ್ ಫರ್ನಾಂಡಿಸ್ ತಾವು ಹೆಜ್ಜೆ ಹಾಕಿದ ಹಾಡಿನ ಮೊದಲ ಕಾಪಿಯನ್ನು ನೋಡಿದ್ದಾರೆ. ಮಾತ್ರವಲ್ಲ, ಅದನ್ನು ಬಹಳ ಇಷ್ಟಪಟ್ಟಿದ್ದಾರಂತೆ. ಹೀಗೆಂದು ಸ್ವತಃ ಸುದೀಪ್ ಟ್ವೀಟಿಸಿದ್ದಲ್ಲದೇ, ಜಾಕ್ವೆಲಿನ್ ಜೊತೆ ತೆಗೆಸಿಕೊಂಡ ಚಿತ್ರಗಳಲ್ಲಿ ತಮಗೆ ಇಷ್ಟವಾದ ಎರಡು ಫೊಟೊಗಳನ್ನು ಹಂಚಿಕೊಂಡಿದ್ದಾರೆ.

ಹಾಡಿಗೆ ನೃತ್ಯ ನಿರ್ದೇಶನ ಮಾಡಿದ ಜಾನಿ ಮಾಸ್ಟರ್ ಅವರ ಪ್ರತಿಭೆಯನ್ನು ಕೊಂಡಾಡಿರುವ ಸುದೀಪ್, ಅವರು ಕೊರಿಯೊಗ್ರಾಫ್ ಮಾಡಿದ ಹೆಜ್ಜೆಗಳು ಅದ್ಭುತವಾಗಿತ್ತು ಎಂದಿದ್ದಾರೆ. ಸೆಟ್ ನಿರ್ಮಾಣ ಮಾಡಿದ ಶಿವು ಅವರ ಕೈಚಳಕವನ್ನೂ ಕೊಂಡಾಡಿರುವ ಸುದೀಪ್, ಹಾಡನ್ನು ಅದ್ದೂರಿಯಾಗಿ ನಿರ್ಮಿಸಿರುವ ಜಾಕ್​ ಮಂಜು ಅವರ ಸಿನಿಮಾ ಪ್ರೀತಿಗೆ ವಂದನೆ ಸಲ್ಲಿಸಿದ್ದಾರೆ.

ಚಿತ್ರತಂಡವು ಲಾಕ್​ಡೌನ್​ಗೂ ಮೊದಲು ಬಹುತೇಕ ಚಿತ್ರೀಕರಣ ಮುಗಿಸಿಕೊಂಡಿತ್ತು. ಈಗ ಬಾಕಿ ಇದ್ದ ಹಾಡನ್ನೂ ಚಿತ್ರೀಕರಿಸಿ ಮುಂದಿನ ಕಾರ್ಯಗಳಿಗೆ ಹೊರಟಿದೆ. ಈ ಕುರಿತು ಟ್ವೀಟ್ ಮಾಡಿದ್ದ ಕಿಚ್ಚ, ‘ಸಿನಿಮಾದ ಕೆಲಸ ಶುರು ಮಾಡಿದಾಗ ಯಾವ ಭಾವನೆ ಇತ್ತೋ ಅದೇ ಭಾವನೆಯೊಂದಿಗೆ ನಾವು ಕೆಲಸ ಮುಗಿಸುವುದು ತುಂಬ ವಿರಳ. ಸುತ್ತಮುತ್ತ ಇದ್ದ ಎಲ್ಲರೂ ತುಂಬ ಪಾಸಿಟಿವ್​ ಆಗಿದ್ದರು. ಅದಕ್ಕಾಗಿ ವಿಕ್ರಾಂತ್​ ರೋಣ ತಂಡದ ಎಲ್ಲರಿಗೂ ಧನ್ಯವಾದಗಳು’ ಎಂದು ಬರೆದುಕೊಂಡಿದ್ದರು.

ಜಾಕ್ವೆಲಿನ್ ಹಾಡಿಗೆ ಹೆಜ್ಜೆ ಹಾಕಿದ ಕುರಿತು ಮಾಹಿತಿ ಹಂಚಿಕೊಂಡಿದ್ದ ಅನೂಪ್ ಭಂಡಾರಿ, ‘ಜಾಕ್ವೆಲಿನ್​ ಅವರೇ ನಿಮಗೆ ಚಂದನವನಕ್ಕೆ ಸ್ವಾಗತ. ನಿಮ್ಮ ಜೊತೆ ಕೆಲಸ ಮಾಡಿದ್ದು ಖುಷಿ ನೀಡಿತು. ನಿಮ್ಮ ಪಾತ್ರದ ಹೆಸರು ಮತ್ತು ಫಸ್ಟ್​ಲುಕ್​ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಪ್ರೇಕ್ಷಕರಿಗೆ ಇದು ಖಂಡಿತ ಇಷ್ಟವಾಗಲಿದೆ ಎಂಬ ನಂಬಿಕೆ ನನಗಿದೆ. ಡಬ್ಬಿಂಗ್​ ಸ್ಟುಡಿಯೋದಲ್ಲಿ ಮತ್ತೆ ಭೇಟಿ ಆಗೋಣ. ಅಲ್ಲಿಯವರೆಗೆ ಸ್ವಲ್ಪ ಜೋಪಾನ’ ಎಂದು ಅನೂಪ್​ ಭಂಡಾರಿ ಟ್ವೀಟ್​ ಮಾಡಿದ್ದರು. ಅಲ್ಲಿ ಒಂದು ಸುಳಿವನ್ನೂ ಬಿಟ್ಟುಕೊಟ್ಟಿದ್ದ ಅವರು- ‘ಸ್ವಲ್ಪ ಜೋಪಾನ’ ಎನ್ನುವುದು ಹಾಡಿನ ಸಾಲಾಗಿರಬಹುದು ಎಂಬಂತೆ ಅದನ್ನು ಉಲ್ಲೇಖಿಸಿದ್ದರು. ನಿಜವನ್ನು ತಿಳಿಯಲು ಹಾಡಿಗೆ ಕಾಯಲೇಬೇಕು.

ಕಿಚ್ಚ ಮಾಡಿರುವ ಟ್ವೀಟ್:

ಇದನ್ನೂ ಓದಿ: ವಿಕ್ರಾಂತ್​ ರೋಣ ಚಿತ್ರದಲ್ಲಿ ಕಿಚ್ಚನ ಜೊತೆ ಕಿಚ್ಚು ಹೆಚ್ಚಿಸಿದ ಜಾಕ್ವೆಲಿನ್​ ಫರ್ನಾಂಡಿಸ್

ಇದನ್ನೂ ಓದಿ: ರಾಜ್ಯಾದ್ಯಂತ ನಾಳೆಯಿಂದಲೇ ಚಿತ್ರಮಂದಿರಗಳು ಓಪನ್, ಜುಲೈ 26ರಿಂದ ಪದವಿ ಕಾಲೇಜು ತೆರೆಯಲು ಅವಕಾಶ

(Kichcha Sudeep shares his favourite photo with Jacqueline Fernandez from the sets of Vikranth Rona)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada