Rahul Dravid: ಶ್ರೀಲಂಕಾ ನಾಯಕನ ಜೊತೆ ರಾಹುಲ್ ದ್ರಾವಿಡ್ ಮಾತನಾಡಿದ್ದೇನು? ಇಲ್ಲಿದೆ ಉತ್ತರ

TV9 Digital Desk

| Edited By: Zahir Yusuf

Updated on:Jul 27, 2021 | 10:34 PM

India vs Sri Lanka 2nd T20: ಸದ್ಯ ರಾಹುಲ್ ದ್ರಾವಿಡ್ ಕೋಚಿಂಗ್​ನಲ್ಲಿ ಟೀಮ್ ಇಂಡಿಯಾ ಯುವ ಪಡೆ ಏಕದಿನ ಸರಣಿ ಗೆದ್ದಿದ್ದು, ಇದೀಗ ಟಿ20 ಕ್ರಿಕೆಟ್​ನ ಮೊದಲ ಪಂದ್ಯದಲ್ಲಿ ಗೆಲ್ಲುವ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

Rahul Dravid: ಶ್ರೀಲಂಕಾ ನಾಯಕನ ಜೊತೆ ರಾಹುಲ್ ದ್ರಾವಿಡ್ ಮಾತನಾಡಿದ್ದೇನು? ಇಲ್ಲಿದೆ ಉತ್ತರ
Rahul Dravid - Dasun Shanaka

ಭಾರತ-ಶ್ರೀಲಂಕಾ ಸರಣಿ ಮೂಲಕ ಭಾರತ ಸೀನಿಯರ್ ತಂಡದ ಕೋಚ್ ಆಗಿ ಲೆಜೆಂಡ್ ರಾಹುಲ್ ದ್ರಾವಿಡ್ ಹೊಸ ಇನಿಂಗ್ಸ್ ಆರಂಭಿಸಿದ್ದರು. ಯುವ ಪಡೆಯೊಂದಿಗೆ ನೂತನ ಜವಾಬ್ದಾರಿ ವಹಿಸಿಕೊಂಡಿದ್ದ ದ್ರಾವಿಡ್ ಮೊದಲ ಸರಣಿಯಲ್ಲೇ ಗೆಲುವಿನ ರುಚಿ ನೋಡಿದ್ದಾರೆ. ಏಕದಿನ ಸರಣಿಯಲ್ಲಿ ಲಂಕಾ ತಂಡವನ್ನು ಭಾರತ 2-1 ಅಂತರದಿಂದ ಬಗ್ಗು ಬಡಿದು ಸರಣಿ ವಶಪಡಿಸಿಕೊಂಡಿತು. ಈ ಮೂಲಕ ರಾಹುಲ್ ದ್ರಾವಿಡ್ ಕೂಡ ಕೋಚ್ ಇನಿಂಗ್ಸ್​ ಕೂಡ ಗೆಲುವಿನೊಂದಿಗೆ ಆರಂಭಿಸಿದ್ದರು. ಇಷ್ಟೇ ಅಲ್ಲದೆ ಟೀಮ್ ಇಂಡಿಯಾ ಪರ ಒಂದೇ ಸರಣಿಯಲ್ಲಿ 7 ಹೊಸ ಮುಖಗಳಿಗೆ ಅವಕಾಶ ನೀಡಿ ಗಮನ ಸೆಳೆದಿದ್ದರು. ಅದರಲ್ಲೂ ಅಂತಿಮ ಏಕದಿನ ಪಂದ್ಯದಲ್ಲಿ ತಂಡದಲ್ಲಿ 6 ಬದಲಾವಣೆ ಮಾಡಿ ಮಹತ್ವದ ಪ್ರಯೋಗ ನಡೆಸಿದ್ದರು. ಆದರೆ ಈ ಪಂದ್ಯದಲ್ಲಿ ಶ್ರೀಲಂಕಾ 3 ವಿಕೆಟ್​ಗಳ ರೋಚಕ ಜಯ ಸಾಧಿಸಿತು.

ಮಳೆಯ ಅಡಚಣೆಯೊಂದಿಗೆ ನಡೆದಿದ್ದ 3ನೇ ಏಕದಿನ ಪಂದ್ಯದ ವೇಳೆ ರಾಹುಲ್ ದ್ರಾವಿಡ್ ಹಾಗೂ ಶ್ರೀಲಂಕಾ ನಾಯಕ ದುಸನ್ ಶನಕಾ ನಡುವಣ ಸಂಭಾಷಣೆಯ ವಿಡಿಯೋ ವೈರಲ್ ಆಗಿತ್ತು. ಮಳೆಯ ಕಾರಣ ಪಂದ್ಯವು ಸ್ಥಗಿತಗೊಂಡಿದ್ದ ವೇಳೆ ದ್ರಾವಿಡ್ ಮೈದಾನಕ್ಕಿಳಿದಿದ್ದರು. ಇದೇ ವೇಳೆ ಶ್ರೀಲಂಕಾ ನಾಯಕ ದುಸನ್ ಟೀಮ್ ಇಂಡಿಯಾ ಕೋಚ್ ಬಳಿ ಬಂದು ಚರ್ಚಿಸಿದ್ದರು. ಆ ಫೋಟೋಗಳು ವೈರಲ್ ಆಗಿದ್ದರೂ, ಇಬ್ಬರೇನು ಮಾತನಾಡಿದ್ದರು ಎಂಬುದು ಮಾತ್ರ ಬಹಿರಂಗವಾಗಿರಲಿಲ್ಲ.

ಇದೀಗ ರಾಹುಲ್ ದ್ರಾವಿಡ್ ಜೊತೆಗಿನ ಮಾತುಕತೆಯ ವಿಚಾರವನ್ನು ಶ್ರೀಲಂಕಾ ನಾಯಕ ದಸುನ್ ಶನಕಾ ಬಹಿರಂಗಪಡಿಸಿದ್ದಾರೆ. 3ನೇ ಪಂದ್ಯದ ವೇಳೆ ಲಂಕಾ ಆಟಗಾರರ ಪ್ರದರ್ಶನದ ಬಗ್ಗೆ ದ್ರಾವಿಡ್ ನನ್ನ ಬಳಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲದೆ ತಂಡವನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದೀರಾ ಎಂದು ರಾಹುಲ್ ದ್ರಾವಿಡ್ ನನ್ನನ್ನು ಪ್ರಶಂಸಿದರು ಎಂದು ಶನಕಾ ತಿಳಿಸಿದ್ದಾರೆ.

ಅಲ್ಲದೆ ಮೊದಲೆರಡು ಪಂದ್ಯಗಳ ಸೋಲಿನ ಬಳಿಕ ಮೂರನೇ ಪಂದ್ಯದ ವೇಳೆ ಲಂಕಾ ಆಟಗಾರ ಪ್ರದರ್ಶನವನ್ನು ಅವರು ಶ್ಲಾಘಿಸಿದರು. ನಿಮ್ಮ ತಂಡವು ತುಂಬಾ ಸುಧಾರಿಸುತ್ತಿದ್ದೆ ಎಂದ ದ್ರಾವಿಡ್, 2ನೇ ಪಂದ್ಯದಲ್ಲಿ ನೀವು ಉತ್ತಮ ಪೈಪೋಟಿ ನೀಡಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದು ರಾಹುಲ್ ದ್ರಾವಿಡ್ ಜೊತೆಗಿನ ಸಂಭಾಷಣೆಯ ವಿವರಗಳನ್ನು ಶನಕಾ ಬಹಿರಂಗಪಡಿಸಿದರು. ಇನ್ನು ಎದುರಾಳಿ ತಂಡದ ನಾಯಕನೊಂದಿಗಿನ ರಾಹುಲ್ ದ್ರಾವಿಡ್ ಅವರ ಸಂಭಾಷಣೆಯು ಕ್ರಿಕೆಟ್ ಏಕೆ ಜಂಟಲ್​ಮ್ಯಾನ್ ಗೇಮ್ ಎಂಬುದಕ್ಕೆ ತಾಜಾ ಉದಾಹರಣೆ ಎಂಬುದಾಗಿ ಅನೇಕ ಕ್ರಿಕೆಟ್ ಪ್ರೇಮಿಗಳು ಪ್ರತಿಕ್ರಿಯಿಸಿದ್ದರು.

ಸದ್ಯ ರಾಹುಲ್ ದ್ರಾವಿಡ್ ಕೋಚಿಂಗ್​ನಲ್ಲಿ ಟೀಮ್ ಇಂಡಿಯಾ ಯುವ ಪಡೆ ಏಕದಿನ ಸರಣಿ ಗೆದ್ದಿದ್ದು, ಇದೀಗ ಟಿ20 ಕ್ರಿಕೆಟ್​ನ ಮೊದಲ ಪಂದ್ಯದಲ್ಲಿ ಗೆಲ್ಲುವ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇನ್ನು ಟೀಮ್ ಇಂಡಿಯಾ ಆಲ್​ರೌಂಡರ್ ಕೃನಾಲ್ ಪಾಂಡ್ಯಗೆ ಕೊರೋನಾ ಪಾಸಿಟಿವ್ ಆಗಿದ್ದು, ಹೀಗಾಗಿ ಮಂಗಳವಾರ ನಡೆಯಬೇಕಿದ್ದ ಪಂದ್ಯವನ್ನು ಬುಧವಾರಕ್ಕೆ ಮುಂದೂಡಲಾಗಿದೆ.

ಟೀಮ್ ಇಂಡಿಯಾ ಸಂಪೂರ್ಣ ತಂಡ: ಶಿಖರ್ ಧವನ್ (ನಾಯಕ) , ಪೃಥ್ವಿ ಶಾ , ಇಶಾನ್ ಕಿಶನ್ (ವಿಕೆಟ್ ಕೀಪರ್) , ಸೂರ್ಯಕುಮಾರ್ ಯಾದವ್ , ಸಂಜು ಸ್ಯಾಮ್ಸನ್ , ಹಾರ್ದಿಕ್ ಪಾಂಡ್ಯ , ಕ್ರುನಾಲ್ ಪಾಂಡ್ಯ , ದೀಪಕ್ ಚಹರ್ , ಭುವನೇಶ್ವರ್ ಕುಮಾರ್ , ಯುಜ್ವೇಂದ್ರ ಚಹಲ್ , ವರುಣ್ ಚಕ್ರವರ್ತಿ, ಮನೀಶ್ ಪಾಂಡೆ , ರಾಹುಲ್ ಚಹರ್ , ಕುಲದೀಪ್ ಯಾದವ್ , ಕೃಷ್ಣಪ್ಪ ಗೌತಮ್ , ನಿತೀಶ್ ರಾಣಾ , ನವದೀಪ್ ಸೈನಿ , ರುತುರಾಜ್ ಗಾಯಕ್ವಾಡ್ , ದೇವದತ್ ಪಡಿಕ್ಕಲ್ , ಚೇತನ್ ಸಕರಿಯಾ

ಇದನ್ನೂ ಓದಿ: Viral Story: ಟ್ರಾಫಿಕ್​ ಪೊಲೀಸ್​ ಮನೆಯಲ್ಲಿ ಚಿನ್ನದ ಟಾಯ್ಲೆಟ್

ಇದನ್ನೂ ಓದಿ: ಈವರೆಗೆ ಟೀಮ್ ಇಂಡಿಯಾ ಪರ ಎಷ್ಟು ಮಂದಿ ಆಡಿದ್ದಾರೆ ಗೊತ್ತಾ?

(What exactly Rahul Dravid told Dasun Shanaka on-field during the India vs Sri Lanka 3rd ODI?)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada