Viral Story: ಟ್ರಾಫಿಕ್​ ಪೊಲೀಸ್​ ಮನೆಯಲ್ಲಿ ಚಿನ್ನದ ಟಾಯ್ಲೆಟ್​​

Trending news: ಸಂಚಾರ ಪೊಲೀಸ್ ಇಲಾಖೆಯ 35 ಕ್ಕೂ ಹೆಚ್ಚು ಟ್ರಾಫಿಕ್​ ಪೊಲೀಸರನ್ನು ಬಂಧಿಸಲಾಗಿದೆ. ಈ ತನಿಖೆಯಲ್ಲಿ, ಅಧಿಕಾರಿಗಳ 80 ಕ್ಕೂ ಅಧಿಕ ಆಸ್ತಿಗಳನ್ನು ಪತ್ತೆ ಹಚ್ಚಲಾಗಿದ್ದು, ಅದರ ಜೊತೆ ದೊಡ್ಡ ಪ್ರಮಾಣದ ನಗದು, ದುಬಾರಿ ಕಾರುಗಳು ಮತ್ತು ಹಲವು ದಾಖಲೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ

Viral Story: ಟ್ರಾಫಿಕ್​ ಪೊಲೀಸ್​ ಮನೆಯಲ್ಲಿ ಚಿನ್ನದ ಟಾಯ್ಲೆಟ್​​
golden toilet
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jul 26, 2021 | 8:09 PM

ಎಲ್ಲರೂ ಚಿನ್ನದ ದರ ಗಗನಕ್ಕೇರುವ ಚಿಂತೆಯಲ್ಲಿದ್ದರೆ ಇಲ್ಲೊಬ್ಬ ಪೊಲೀಸಪ್ಪ ಚಿನ್ನದಲ್ಲೇ ಟಾಯ್ಲೆಟ್ ಮಾಡಿಕೊಂಡು ಸುದ್ದಿಯಾಗಿದ್ದಾನೆ. ಹೀಗೆ ಸುದ್ದಿಯಾಗಲು ಮುಖ್ಯ ಕಾರಣ ಈ ಪೊಲೀಸಪ್ಪನನ್ನು ಪೊಲೀಸರೇ ಬಂಧಿಸಿರುವುದು. ಹೌದು, ದಕ್ಷಿಣ ರಷ್ಯಾದ ಸ್ಟಾವ್ರೊಪೋಲ್ ಪ್ರದೇಶದ ಉನ್ನತ ಸಂಚಾರಿ ಪೊಲೀಸ್ ಅಧಿಕಾರಿ ಕರ್ನಲ್ ಅಲೆಕ್ಸಿ ಸಫೊನೊವ್ ಭ್ರಷ್ಟಚಾರ ಪ್ರಕರಣದಲ್ಲಿ ಬಂಧಿತನಾಗಿದ್ದ. ಹೀಗೆ ಬಂಧನಕ್ಕೊಳಗಾದ ಆತನ ಮನೆಯನ್ನು ಪರಿಶೀಲಸಿದಾಗ ಮನೆಯ ಶೌಚಾಲಯದ ಕಾಮೋರ್ಡ್​ನ್ನು ಚಿನ್ನದಿಂದಲೇ ನಿರ್ಮಿಸಿರುವುದು ಬಹಿರಂಗವಾಗಿದೆ.

ರಷ್ಯನ್ ಭಷ್ಟ್ರಚಾರ ತನಿಖಾ ಸಮಿತಿಯ ಹೇಳಿಕೆಯ ಪ್ರಕಾರ, ಟ್ರಾಫಿಕ್ ಪೊಲೀಸ್ ಸಫೊನೊವ್ ಕಳೆದ ಹಲವಾರು ವರ್ಷಗಳಲ್ಲಿ 19 ಮಿಲಿಯನ್ ರೂಬಲ್ಸ್ ( ಸುಮಾರು 1,89,72,854 ರೂ.) ಮೊತ್ತದ ಲಂಚ ಪಡೆದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನು ಹಾಗೂ ಅವರ ಆರು ಅಧೀನದಲ್ಲಿದ್ದ ಅಧಿಕಾರಿಗಳನ್ನು ಬಂಧಿಸಲಾಗಿದೆ. ಭ್ರಷ್ಟಚಾರದ ಮೂಲಕ ಸಂಪಾದಿಸಿದ್ದ ಸಂಪತ್ತನ್ನು ವಿಲಾಸಿ ಜೀವನಕ್ಕೆ ಬಳಸಿಕೊಳ್ಳುತ್ತಿದ್ದ ಸಫೊನೊವ್ ಮನೆಯ ಟಾಯ್ಲೆಟ್​​ನ್ನು ಚಿನ್ನದಿಂದಲೇ ನಿರ್ಮಿಸಿಕೊಂಡಿದ್ದ. ಅಲ್ಲದೆ ಶೌಚಾಲಯದ ನೆಲವನ್ನು ಅಮೃತ ಶಿಲೆಯಿಂದ ವಿನ್ಯಾಸಗೊಳಿಸಿದ್ದನು.

ಅಲೆಕ್ಸಿ ಸಫೊನೊವ್ ಸಾರಿಗೆ ಪರವಾನಗಿಗಳಿಗಾಗಿ ಬೃಹತ್ ಮೊತ್ತದ ಲಂಚ ಪಡೆಯುತ್ತಿದ್ದರು. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಆತನನ್ನು ಅವರೊಂದಿಗೆ ಕೈ ಜೋಡಿಸಿದ್ದ ಅಧಿಕಾರಿಗಳನ್ನು ಭ್ರಷ್ಟಚಾರ ತನಿಖಾ ತಂಡ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಈ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದರೆ ಸಫೊನೊವ್​ಗೆ 8 ರಿಂದ 15 ವರ್ಷಗಳವರೆಗೆ ಜೈಲು ಶಿಕ್ಷೆ ಆಗಲಿದೆ.

ಇದೊಂದು ದೊಡ್ಡ ಪ್ರಮಾಣದ ಕಾರ್ಯಾಚರಣೆಯಾಗಿದ್ದು, ಸ್ಟೇವ್ರೊಪೋಲ್‌ನ ಸಂಚಾರ ಪೊಲೀಸ್ ಇಲಾಖೆಯ 35 ಕ್ಕೂ ಹೆಚ್ಚು ಟ್ರಾಫಿಕ್​ ಪೊಲೀಸರನ್ನು ಬಂಧಿಸಲಾಗಿದೆ. ಈ ತನಿಖೆಯಲ್ಲಿ ಅಧಿಕಾರಿಗಳ 80 ಕ್ಕೂ ಹೆಚ್ಚು ಅಕ್ರಮ ಆಸ್ತಿಗಳನ್ನು ಪತ್ತೆ ಹಚ್ಚಲಾಗಿದ್ದು, ಅದರ ಜೊತೆ ದೊಡ್ಡ ಪ್ರಮಾಣದ ನಗದು, ದುಬಾರಿ ಕಾರುಗಳು ಮತ್ತು ಹಲವು ದಾಖಲೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಯುನೈಟೆಡ್ ರಷ್ಯಾ ಪಕ್ಷದ ಶಾಸಕರಾದ ಅಲೆಕ್ಸಾಂಡರ್ ಖಿನ್‌ಸ್ಟೈನ್ ತಿಳಿಸಿದ್ದಾರೆ.

ಈ ಪ್ರಕರಣ ರಷ್ಯಾದಲ್ಲಿ ಭಾರೀ ಸುದ್ದಿಯಾಗುತ್ತಿದ್ದಂತೆ, ಇತ್ತ ಭ್ರಷ್ಟ ಪೊಲೀಸ್ ಅಧಿಕಾರಿ ಕರ್ನಲ್ ಅಲೆಕ್ಸಿ ಸಫೊನೊವ್ ಅವರ ಚಿನ್ನದ ಕಮೋರ್ಡ್​​ ಫೋಟೋ ಮತ್ತು ಆತನ ಐಷರಾಮಿ ಮನೆಯ ವಿನ್ಯಾಸ ಹಾಗೂ ಮನೆಯಲ್ಲಿ ಬಳಸಲಾದ ವಸ್ತುಗಳನ್ನು ವಿಡಿಯೋ ಮೂಲಕ ಪೊಲೀಸರು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: ಬಾಲ ನಟಿಯಾಗಿ ಮಿಂಚಿದ್ದ ಚೆಂದುಳ್ಳಿ ಚೆಲುವೆ ಅನಿಕಾ ಈಗ ಹೇಗಿದ್ದಾರೆ ಗೊತ್ತಾ?

ಇದನ್ನೂ ಓದಿ: ಐಫೋನ್ 12 ಮೇಲೆ ಭರ್ಜರಿ ಆಫರ್: 12 ಸಾವಿರ ರೂ. ಕಡಿಮೆಗೆ ಖರೀದಿಸಬಹುದು

(Russia Cop’s golden toilet steals the show during bribery investigation)

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್