Viral News: ಕೈಕಾಲುಗಳನ್ನು ವಿಸ್ತರಿಸುವ ಮೂಲಕ ಮಾನವರನ್ನು 5.6 ಇಂಚು ಎತ್ತರವಾಗಿಸಬಹುದು! ವಿಲಕ್ಷಣ ಹೇಳಿಕೆ ನೀಡಿ ವೈರಲ್​ ಆದ ವೈದ್ಯ

ಶಸ್ತ್ರ ಚಿಕಿತ್ಸೆಯ ಮೂಲಕ ಎಲ್ಲವನ್ನೂ ಬದಲಾಯಿಸಬಹುದೇ? ರೋಗಿಗಳ ಕೈಕಾಲುಗಳನ್ನು ವಿಸ್ತರಿಸುವ ಮೂಲಕ 5.6 ಇಂಚುಗಳಷ್ಟು ಎತ್ತರ ಮಾಡಬಹುದು ಎಂದು ಹೇಳಿದ ವೈದ್ಯರ ಮಾತು ಇದೀಗ ವೈರಲ್​ ಆಗಿದೆ

Viral News: ಕೈಕಾಲುಗಳನ್ನು ವಿಸ್ತರಿಸುವ ಮೂಲಕ ಮಾನವರನ್ನು 5.6 ಇಂಚು ಎತ್ತರವಾಗಿಸಬಹುದು! ವಿಲಕ್ಷಣ ಹೇಳಿಕೆ ನೀಡಿ ವೈರಲ್​ ಆದ ವೈದ್ಯ
ಕೈಕಾಲುಗಳನ್ನು ವಿಸ್ತರಿಸುವ ಮೂಲಕ ಮಾನವರನ್ನು 5.6 ಇಂಚು ಎತ್ತರವಾಗಿಸಬಹುದು!
Follow us
TV9 Web
| Updated By: shruti hegde

Updated on:Jul 27, 2021 | 11:21 AM

ಸಾಮಾನ್ಯವಾಗಿ ನಾನೂ ಎತ್ತರವಾಗಬೇಕಿತ್ತು! ಕುಳ್ಳಗಾಗಿದ್ದೇನೆ.. ಎಂಬ ಚಿಂತೆ ಹಲವರಿಗೆ. ಹಾಗಿರುವಾಗ ಎತ್ತರವಾಗಲು ಅದೆಷ್ಟೋ ಔಷಧಗಳನ್ನು, ವ್ಯಾಯಾಮವನ್ನು ಮಾಡುತ್ತಲೇ ಇರುತ್ತೇವೆ. ಅದರಲ್ಲಿಯೂ ದೇಹದ ತೂಕ ಮತ್ತು ಎತ್ತರದಲ್ಲಿ(Height) ನಮ್ಮ ದೇಹದ ಬೆಳವಣಿಗೆಯ ಮೇಲೆ ಅವಲಂಬಿತವಾಗಿರುತ್ತದೆ. ಕೆಲವರು 18 ವರ್ಷದ ಬಳಿಕ ಎತ್ತರವಾಗುವುದೇ ಇಲ್ಲ. ಇನ್ನು ಕೆಲವರು 20 ವರ್ಷದವರೆಗೆ ಬೆಳವಣಿಗೆ ಹೊಂದುತ್ತಾರೆ. ಅದರಲ್ಲಿಯೂ ಮುಖ್ಯವಾಗಿ ವ್ಯಕ್ತಿಯ ಎತ್ತರ ಕಾಣುವುದು ಆತನ ಮೂಳೆಗಳು, ಎಲುಬುಗಳ ಬೆಳವಣಿಗೆಯಿಂದ. ಆದರೆ ಶಸ್ತ್ರ ಚಿಕಿತ್ಸೆಯ(Surgical treatment) ವಿಧಾನದಿಂದ ಮಾನವರನ್ನು 5.6 ಇಂಚುಗಳಷ್ಟು ಎತ್ತರ ಮಾಡಬಹುದು ಎಂದು ಎಲುಬು ತಜ್ಞ ಟಿಕ್ಟಾಕ್​ನಲ್ಲಿ ಹೇಳಿಕೊಂಡಿದ್ದಾರೆ. ಆ ಬಳಿಕ ವಿಡಿಯೋ ಸಕತ್(Video Viral) ಸುದ್ದಿ ಮಾಡಿದ್ದು, ವೈದ್ಯರ ಮಾತು ಇದೀಗ ಭಾರೀ ಚರ್ಚೆಯಲ್ಲಿದೆ.

ಆದರೆ ಶಸ್ತ್ರ ಚಿಕಿತ್ಸೆಯ ಮೂಲಕ ಎಲ್ಲವನ್ನೂ ಬದಲಾಯಿಸಬಹುದೇ? ರೋಗಿಗಳ ಕೈಕಾಲುಗಳನ್ನು ವಿಸ್ತರಿಸುವ ಮೂಲಕ 5.6 ಇಂಚುಗಳಷ್ಟು ಎತ್ತರ ಮಾಡಬಹುದು ಎಂದು ಹೇಳಿದ ವೈದ್ಯರ ಮಾತು ಇದೀಗ ವೈರಲ್​ ಆಗಿದೆ.

ಡಾ. ಶಹಾಬ್ ಮಹ್​ಬೌಬೇನ್​, 10 ವರ್ಷ ಮೇಲ್ಪಟ್ಟವರು ಎತ್ತರವಾಗಲು ಶಸ್ತ್ರ ಚಿಕಿತ್ಸೆಯನ್ನು ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಜನರನ್ನು ಎತ್ತರ ಮಾಡಲು ಸಾಧ್ಯವಾಗಿದೆ. ರೋಗಿಗಳಿಗೆ ಆತ್ಮ ವಿಶ್ವಾಸ ಮೂಡಿಸಿ ಅವರ ಎತ್ತರವನ್ನು ಹೆಚ್ಚಿಸಲು ಸಾಧ್ಯವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಅನೇಕರು ಎತ್ತರವಾಗಬೇಕು ಎಂಬ ಕನಸು ಕಾಣುತ್ತಾರೆ. ನಾನು ಅವರನ್ನು ಶಾಶ್ವತವಾಗಿ ಎತ್ತರವಾಗಿಸುತ್ತೇನೆ. ಶಸ್ತ್ರ ಚಿಕಿತ್ಸೆಯ ಮೂಲಕ ಮಾನವರನ್ನು ಎತ್ತರ ಮಾಡಬಹುದು. ಅವರ ಮೂಳೆ ಅಥವಾ ಎಲುಬುಗಳನ್ನು ಕತ್ತರಿಸಿ ಪುನಃ ಹೆಚ್ಚುವರಿ ಎಲುಬುಗಳನ್ನು ಅಳವಡಿಸುವ ಮೂಲಕ ಅವರ ಎತ್ತರ ಇನ್ನಷ್ಟು ಹೆಚ್ಚುತ್ತದೆ. ಶಸ್ತ್ರ ಚಿಕಿತ್ಸೆಗೆ ಕೇವಲ 1,60,000 ಡಾಲರ್ ವ್ಯಯಿಸಬೇಕು ಎಂದು ಹೇಳಿದ್ದಾರೆ.

ಓರ್ವ ವ್ಯಕ್ತಿಗೆ ಶಸ್ತ್ರ ಚಿಕಿತ್ಸೆ ಮಾಡಿದ ಬಳಿಕ ಆತ ನಡೆಯಲು 3-4 ತಿಂಗಳ ಸಮಯ ತೆಗೆದುಕೊಳ್ಳುತ್ತಾನೆ. ಆದರೆ ಹೆಚ್ಚಿನ ಕೆಲಸ, ಕ್ರೀಡೆಯಲ್ಲಿ ತೊಡಗಿಕೊಳ್ಳಲು 8 ತಿಂಗಳು ಸಮಯ ಹಿಡಿಯುತ್ತದೆ ಎಂದು ಹೇಳಿದ್ದಾರೆ. ಜುಲೈ 7ರಂದು ಟಿಕ್​ಟಾಕ್​ನಲ್ಲಿ ಇವರ ಹೇಳಿಕೆಗಳು ಹರಿದಾಡಲು ಪ್ರಾರಂಭವಾದವು. ಬಳಿಕ 7 ದಶಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳು ಲಭ್ಯವಾಗಿದೆ.

ಇದನ್ನೂ ಓದಿ:

Viral Tweet: ಮರಗಳಿಂದ ಮನುಷ್ಯರು ಕಲಿಯಬಹುದಾದ 8 ಸುಂದರ ಪಾಠಗಳು ಇವು..; ಹರ್ಷವರ್ಧನ್​ ಗೋಯೆಂಕಾ ಟ್ವೀಟ್ ಸಖತ್ ವೈರಲ್​

Bihar Rain: ನೋಡನೋಡುತ್ತಿದ್ದಂತೆ ಕುಸಿದು ನದಿಗೆ ಬಿದ್ದ ಮನೆ; ಭಯಾನಕ ದೃಶ್ಯದ ವಿಡಿಯೋ ವೈರಲ್​

Published On - 11:19 am, Tue, 27 July 21

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು