Maharashtra Rains: 9 ಲಕ್ಷ ರೂ. ಹಣ ಕಾಪಾಡಲು ಮಳೆಯಲ್ಲೇ 7 ಗಂಟೆ ಬಸ್ ಮೇಲೆ ಹತ್ತಿ ಕುಳಿತ ಡಿಪೋ ಮ್ಯಾನೇಜರ್!

Maharashtra Floods: ರತ್ನಗಿರಿಯ ಚಿಪ್ಲೂನ್​​ನ ಬಸ್ ಡಿಪೋ ಮ್ಯಾನೇಜರ್ ರಂಜಿತ್ ರಾಜೇ ಶಿರ್ಕೆ ಸಾಹಸಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಸರ್ಕಾರದ ಬೊಕ್ಕಸಕ್ಕೆ ಹೋಗಬೇಕಾದ 9 ಲಕ್ಷ ರೂ. ಹಣವನ್ನು ಜತನವಾಗಿ ಕಾಪಾಡಿಕೊಂಡ ಡಿಪೋ ಮ್ಯಾನೇಜರ್ ಪ್ರವಾಹದ ನೀರು ಕೊಂಚ ಕಡಿಮೆಯಾದ ನಂತರ ಕೆಳಗೆ ಇಳಿದಿದ್ದಾರೆ.

Maharashtra Rains: 9 ಲಕ್ಷ ರೂ. ಹಣ ಕಾಪಾಡಲು ಮಳೆಯಲ್ಲೇ 7 ಗಂಟೆ ಬಸ್ ಮೇಲೆ ಹತ್ತಿ ಕುಳಿತ ಡಿಪೋ ಮ್ಯಾನೇಜರ್!
ಮಹಾರಾಷ್ಟ್ರದ ಪ್ರವಾಹದಲ್ಲಿ ಮುಳುಗಿರುವ ಬಸ್​ಗಳು
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jul 26, 2021 | 6:37 PM

ಮುಂಬೈ: ಕಳೆದ 10 ದಿನಗಳಿಂದ ಒಂದೇ ಸಮನೆ ಸುರಿಯುತ್ತಿರುವ ಮಳೆಗೆ ಮಹಾರಾಷ್ಟ್ರ ತತ್ತರಿಸಿ ಹೋಗಿದೆ. ಪ್ರವಾಹದಿಂದ ಊರಿಗೂರೇ ಮುಳುಗಡೆಯಾಗಿದ್ದು, ಭೂಕುಸಿತವಾಗಿ ಸಾಕಷ್ಟು ಜನರು ಮಣ್ಣಿನಡಿ ಜೀವಂತಸಮಾಧಿಯಾಗಿದ್ದಾರೆ. ರೈಲು ಹಳಿಗಳ ಮೇಲೆ ಗುಡ್ಡ ಕುಸಿದು ರೈಲ್ವೆ ಸಂಚಾರವೂ ಅಸ್ತವ್ಯಸ್ತವಾಗಿದೆ. ರಸ್ತೆಗಳೆಲ್ಲ ಕೆರೆಗಳಂತಾಗಿರುವುದರಿಂದ ಹಲವೆಡೆ ಬಸ್ ಸಂಚಾರವೂ ಸ್ಥಗಿತಗೊಂಡಿದೆ. ಪ್ರವಾಹದಲ್ಲಿ (Maharashtra Floods) ಸಿಲುಕಿರುವವರನ್ನು ರಕ್ಷಿಸಲು ಎನ್​ಡಿಆರ್​ಎಫ್ ತಂಡಗಳು ಮಹಾರಾಷ್ಟ್ರದ ಹಳ್ಳಿ-ಹಳ್ಳಿಗಳಲ್ಲಿ ಬೀಡುಬಿಟ್ಟಿವೆ. ಇಂತಹ ಸಂದರ್ಭದಲ್ಲಿ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಬಸ್ ಡಿಪೋ ಮ್ಯಾನೇಜರ್ ಒಬ್ಬರು ತೋರಿದ ಧೈರ್ಯದಿಂದ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹಾಗಾದರೆ, ಅವರು ಮಾಡಿದ ಅಂತಹ ಕೆಲಸವಾದರೂ ಏನು?

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಬಸ್​ ಡಿಪೋ ಮ್ಯಾನೇಜರ್ ಬಳಿ ಇಡೀ ದಿನ ಬಸ್​ಗಳ ಓಡಾಟದಿಂದ ಟಿಕೆಟ್​ನಲ್ಲಿ ಸಂಗ್ರಹಿಸಿದ ಆ ದಿನದ ಆದಾಯವಾದ 9 ಲಕ್ಷ ರೂ. ಹಣವಿತ್ತು. ಆದರೆ, ಭಾರೀ ಮಳೆಯಿಂದ ಆ ಬಸ್​ ಅನ್ನು ನಿಲ್ಲಿಸಿದ ಜಾಗ ಸಂಪೂರ್ಣ ನೀರಿನಿಂದ ಆವೃತವಾಗಿತ್ತು. ಹಳೇ ಬಸ್ ಆಗಿದ್ದರಿಂದ ಬಸ್​ನೊಳಗೂ ನೀರು ತುಂಬಿತ್ತು. ಸುತ್ತಮುತ್ತಲೂ ಇದ್ದ ವಾಹನಗಳೆಲ್ಲ ಪ್ರವಾಹದ ನೀರಿನಲ್ಲಿ ಮುಳುಗಿತ್ತು. ಬಸ್​ ಮುಕ್ಕಾಲು ಭಾಗ ಮುಳುಗಿದ್ದರಿಂದ ತನ್ನ ಬಳಿ ಇರುವ ಟಿಕೆಟ್​ನಿಂದ ಸಂಗ್ರಹವಾದ ಹಣವೆಲ್ಲ ಒದ್ದೆಯಾಗಬಹುದು ಎಂಬ ಭೀತಿ ಡಿಪೋ ಮ್ಯಾನೇಜರ್​ನನ್ನು ಕಾಡತೊಡಗಿತು. ಹೇಗಾದರೂ ಮಾಡಿ ಸರ್ಕಾರದ ಹಣವನ್ನು ರಕ್ಷಿಸಲೇಬೇಕೆಂದು ಆ ಬಸ್​ನ ಮೇಲೇರಿ ಕುಳಿತುಕೊಳ್ಳಲು ನಿರ್ಧರಿಸಿದರು. ಇಡೀ ಪ್ರದೇಶದಲ್ಲಿ ನೀರು ಪೂರ್ತಿ ಮುಳುಗದೆ ನಿಂತಿದ್ದ ಬಸ್​ ಅನ್ನು ಹತ್ತಿ ಕುಳಿತು, ಪ್ರವಾಹದ ನೀರಿನಲ್ಲಿ ಹಣ ಕೊಚ್ಚಿಹೋಗುವುದನ್ನು ತಡೆದರು. ಸತತ 7 ಗಂಟೆಗಳ ಕಾಲ ಸುರಿಯುವ ಮಳೆಯಲ್ಲಿ ಬಸ್​ನ ಮೇಲೆ ಹತ್ತಿ ಕುಳಿತಿದ್ದರು.

ಬಸ್ ಡಿಪೋ ಮ್ಯಾನೇಜರ್​ನ ಈ ಸಾಹಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ರತ್ನಗಿರಿಯ ಚಿಪ್ಲೂನ್​​ನ ಬಸ್ ಡಿಪೋ ಮ್ಯಾನೇಜರ್ ರಂಜಿತ್ ರಾಜೇ ಶಿರ್ಕೆ ಕೆಲಸಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಸರ್ಕಾರದ ಬೊಕ್ಕಸಕ್ಕೆ ಹೋಗಬೇಕಾದ 9 ಲಕ್ಷ ರೂ. ಹಣವನ್ನು ಜತನವಾಗಿ ಕಾಪಾಡಿಕೊಂಡ ಡಿಪೋ ಮ್ಯಾನೇಜರ್ ಪ್ರವಾಹದ ನೀರು ಕೊಂಚ ಕಡಿಮೆಯಾದ ನಂತರ ಬಸ್​ ಮೇಲಿನಿಂದ ಕೆಳಗೆ ಇಳಿದಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಡಿಪೋ ಮ್ಯಾನೇಜರ್ ಶಿರ್ಕೆ, ‘ನೀರಿನ ಮಟ್ಟ ನಿಮಿಷದಿಂದ ನಿಮಿಷಕ್ಕೆ ಏರುತ್ತಲೇ ಇತ್ತು. ಡಿಪೋ ಆಫೀಸಿನೊಳಗೆ ಹಣವನ್ನು ಇಟ್ಟರೆ ಆ ಆಫೀಸಿನೊಳಗೆ ನೀರು ನುಗ್ಗಿ ಹಣ ಕೊಚ್ಚಿಕೊಂಡು ಹೋಗುವ ಸಾಧ್ಯತೆಯಿತ್ತು. ಪ್ರತಿದಿನದ ಆದಾಯವನ್ನು ಜೋಪಾನವಾಗಿ ತಲುಪಬೇಕಾದಲ್ಲಿಗೆ ತಲುಪಿಸಬೇಕಾದ ಜವಾಬ್ದಾರಿ ನನ್ನ ಮೇಲಿತ್ತು. ಹೀಗಾಗಿ, ನನ್ನ ಜೀವದ ಬಗ್ಗೆಯೂ ಯೋಚನೆ ಮಾಡದೆ ಆ ಹಣವನ್ನು ರಕ್ಷಣೆ ಮಾಡಲು ಯೋಚಿಸಿದಾಗ ಬಸ್​ನ ಮೇಲ್ಭಾಗ ಕಾಣಿಸಿತು. ಬೇರೆ ಬಸ್​ಗಳೆಲ್ಲ ಮುಳುಗುವ ಹಂತದಲ್ಲಿದ್ದವು. ಆದರೆ, ಸ್ವಲ್ಪ ಎತ್ತರದ ಜಾಗದಲ್ಲಿ ನಿಲ್ಲಿಸಿದ್ದ ಒಂದು ಬಸ್​ ಮುಳುಗುವಷ್ಟು ನೀರು ಬರಲಾರದು ಎಂಬ ಧೈರ್ಯದಿಂದ ಆ ಬಸ್​ ಏರಿ ಕುಳಿತೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: Maharashtra Rains: ಮಹಾರಾಷ್ಟ್ರದಲ್ಲಿ ಮಳೆಯ ಆರ್ಭಟಕ್ಕೆ 138 ಮಂದಿ ಸಾವು; ಸುರಕ್ಷಿತ ಸ್ಥಳಕ್ಕೆ 90 ಸಾವಿರ ಜನರು ಶಿಫ್ಟ್​

Karnataka Rains: ವರುಣನ ಆರ್ಭಟಕ್ಕೆ ಕರ್ನಾಟಕ ತತ್ತರ; ಮಳೆಯಿಂದ ಸಾವನ್ನಪ್ಪಿದವರ ಸಂಖ್ಯೆ 9ಕ್ಕೆ ಏರಿಕೆ

(Maharashtra Rains Bus Depot Manager Sit Atop Bus for Nearly 7 Hours to Keep 9 Lakh Government Money Safe)

Published On - 6:33 pm, Mon, 26 July 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ