Gujarat Rains: ಗುಜರಾತ್​​ನಾದ್ಯಂತ ವಿಪರೀತ ಮಳೆ; 56 ರಸ್ತೆಗಳು ಬ್ಲಾಕ್​, ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

TV9 Digital Desk

| Edited By: Lakshmi Hegde

Updated on: Jul 26, 2021 | 5:12 PM

ಇಂದು ಮುಂಜಾನೆ 6ಗಂಟೆಗೆ ಕೊನೆಯಾಗುವಂತೆ 24 ಗಂಟೆಯಲ್ಲಿ ಸೌರಾಷ್ಟ್ರ ಸೇರಿ ಗುಜರಾತ್​​ನ ಅನೇಕ ಕಡೆಗಳಲ್ಲಿ ವಿಪರೀತ ಮಳೆಯಾಗಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC) ತಿಳಿಸಿದೆ.

Gujarat Rains: ಗುಜರಾತ್​​ನಾದ್ಯಂತ ವಿಪರೀತ ಮಳೆ; 56 ರಸ್ತೆಗಳು ಬ್ಲಾಕ್​, ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ
ಮಳೆಯ ಸಾಂಕೇತಿಕ ಚಿತ್ರ

ಅಹ್ಮದ್​ಬಾದ್​: ಗುಜರಾತ್​ನ​ ಅನೇಕ ಪ್ರದೇಶಗಳಲ್ಲಿ ವಿಪರೀತ ಮಳೆ (Gujarat Rainfall)ಯಾಗುತ್ತಿದ್ದು, ಸದ್ಯ 56 ರಸ್ತೆಗಳು ಬ್ಲಾಕ್​ ಆಗಿವೆ. ವಾಹನ ಸಂಚಾರ ಸಾಧ್ಯವಿಲ್ಲದಂತಾಗಿದೆ ಎಂದು ಗುಜರಾತ್​ ಸರ್ಕಾರ ತಿಳಿಸಿದೆ. ನಾಳೆಯವರೆಗೂ ಇದೇ ಪ್ರಮಾಣದ ಮಳೆ ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಹಾಗೇ ಜು.29ರವರೆಗೂ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ.

ಇಂದು ಮುಂಜಾನೆ 6ಗಂಟೆಗೆ ಕೊನೆಯಾಗುವಂತೆ 24 ಗಂಟೆಯಲ್ಲಿ ಸೌರಾಷ್ಟ್ರ ಸೇರಿ ಗುಜರಾತ್​​ನ ಅನೇಕ ಕಡೆಗಳಲ್ಲಿ ವಿಪರೀತ ಮಳೆಯಾಗಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC) ತಿಳಿಸಿದೆ. ಅದರಲ್ಲೂ ಸೌರಾಷ್ಟ್ರದ ರಾಜಕೋಟಾ ಜಿಲ್ಲೆಯ ಲೊಧಿಕಾ ತಾಲೂಕಿನಲ್ಲಿ 24 ಗಂಟೆಯಲ್ಲಿ ಅತಿಹೆಚ್ಚು ಅಂದರೆ 198 ಮಿಮೀ ಮಳೆಯಾಗಿದೆ. ಹಾಗೇ, ಛೋಟೌಡ್​ಪುರ್​​ನಲ್ಲಿ 190 ಎಂಎಂ, ಕ್ವಾಂತ್​ನಲ್ಲಿ 182 ಮಿಮೀ ಮಳೆಬಿದ್ದಿದೆ. ಇದರ ಹೊರಾತಿಗೆ ಮಹೀದಾಗರ್​, ಖೇದಾ, ವಡೋದರಾ, ಪಂಚಮಹಲ್​, ಅರ್ವಲ್ಲಿ, ಮೊರ್ಬಿ ಸೇರಿ ಹಲವೆಡೆ 100 ಮಿಮೀ ಗೂ ಅಧಿಕ ಪ್ರಮಾಣದಲ್ಲಿ ಮಳೆ ಯಾಗಿದೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಿಂದ ಕಾಣೆಯಾದ ಶುಭಾ ಪೂಂಜಾ; ಸ್ಪರ್ಧಿಗಳಿಗೆ ಮಿಡ್​ವೀಕ್​ ಟ್ವಿಸ್ಟ್​

ಬಿ ಎಸ್ ಯಡಿಯೂರಪ್ಪ ಬಾಯಿಂದಲೇ ಮುಂದಿನ ಸಿಎಂ ಹೆಸರು ಘೋಷಿಸಲು ಯೋಚಿಸುತ್ತಿದೆ ಬಿಜೆಪಿ ಹೈಕಮಾಂಡ್

Heavy Rainfall in Gujarat 56 roads are blocked

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada