AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆ ಮುಗಿಸಿ ಹಿಂದಿರುವಾಗ ಪತಿ ಹಣೆಗೆ ಗನ್ ಇಟ್ಟು ನವ ವಧುವನ್ನು ಅಪಹರಿಸಿದ ಮಾಜಿ ಪ್ರೇಮಿ

ಒಡಿಶಾದ ಬೋಲಂಗೀರ್‌ನಲ್ಲಿ ಮದುವೆ ಮುಗಿಸಿ ಪತಿಯೊಂದಿಗೆ ಹಿಂದಿರುಗುತ್ತಿದ್ದ ನವ ವಧುವನ್ನು ಮಾಜಿ ಪ್ರೇಮಿಯೊಬ್ಬ ಬಂದೂಕು ತೋರಿಸಿ ಅಪಹರಿಸಿದ್ದಾನೆ. ತರ್ಭಾ ರಸ್ತೆಯಲ್ಲಿ ವಾಹನ ಅಡ್ಡಗಟ್ಟಿ, ವರನ ಹಣೆಗೆ ಗನ್ ಇಟ್ಟು ಬೆದರಿಸಿ, ವಧುವನ್ನು ಬಲವಂತವಾಗಿ ಕರೆದುಕೊಂಡು ಹೋಗಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳ ಪತ್ತೆಗೆ ಪ್ರಯತ್ನಿಸುತ್ತಿದ್ದಾರೆ. ಈ ಘಟನೆ ಪ್ರದೇಶದಲ್ಲಿ ಆತಂಕ ಮೂಡಿಸಿದೆ.

ಮದುವೆ ಮುಗಿಸಿ ಹಿಂದಿರುವಾಗ ಪತಿ ಹಣೆಗೆ ಗನ್ ಇಟ್ಟು ನವ ವಧುವನ್ನು ಅಪಹರಿಸಿದ ಮಾಜಿ ಪ್ರೇಮಿ
ಮದುವೆ Image Credit source: 1to1 Help
ನಯನಾ ರಾಜೀವ್
|

Updated on: Feb 23, 2026 | 7:23 AM

Share

ಒಡಿಶಾ, ಫೆಬ್ರವರಿ 23: ಮದುವೆ ಮುಗಿಸಿಕೊಂಡು ಪತಿಯೊಂದಿಗೆ ಮನೆಗೆ ತೆರಳುತ್ತಿದ್ದ ನವ ವಧುವನ್ನು ಮಾಜಿ ಪ್ರೇಮಿ ಅಪಹರಿಸಿರುವ ಘಟನೆ ಒಡಿಶಾದ ಬೋಲಂಗೀರ್ ಜಿಲ್ಲೆಯಲ್ಲಿ ನಡೆದಿದೆ. ದಂಪತಿ ಇದ್ದ ಕಾರಿಗೆ ಮೂವರು ಅಡ್ಡ ಬಂದು, ಇಬ್ಬರನ್ನೂ ಕಾರಿಂದ ಇಳಿಸಿ ಆಕೆಯ ಪತಿಯ ಹಣೆಗೆ ಗನ್ ಇಟ್ಟು ಆಕೆಯನ್ನು ಅಪಹರಣ(Kidnap) ಮಾಡಿದ್ದಾನೆ. ಬೋಲಂಗಿರ್ ಜಿಲ್ಲೆಯ ನಿವಾಸಿ ಹರಿಬಂಧು ಪಟೇಲ್ ಎಂಬ ವರ ಮದುವೆಗಾಗಿ ಕಾಂತಮಲ್‌ಗೆ ಹೋಗಿದ್ದ, ಮದುವೆಯ ವಿಧಿವಿಧಾನಗಳು ಮುಗಿದ ನಂತರ, ವಧು-ವರರು ಕುಟುಂಬ ಸದಸ್ಯರೊಂದಿಗೆ ಮನೆಗೆ ಹಿಂತಿರುಗುತ್ತಿದ್ದಾಗ, ತರ್ಭಾ ರಸ್ತೆಯ ಬಡಬಂಧ ಬಳಿ ಅವರ ವಾಹನವನ್ನು ಕೆಲವರು ಅಡ್ಡಗಟ್ಟಿದ್ದರು.

ಆರೋಪಿಯು ಇತರ ಇಬ್ಬರೊಂದಿಗೆ ಬಂದು ತರ್ಭಾ ರಸ್ತೆಯಲ್ಲಿ ವರನಿಗೆ ಬಂದೂಕಿನಿಂದ ಬೆದರಿಕೆ ಹಾಕಿ ವಧುವನ್ನು ಬಲವಂತವಾಗಿ ಕರೆದುಕೊಂಡು ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ. ವರ ಮತ್ತು ಅವನ ಸಹಚರರು ಸಿಲುಕಿಕೊಂಡು ಅಸಹಾಯಕರಾಗಿದ್ದರು.

ಘಟನೆಯ ನಂತರ, ವರ ತರ್ಭಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ, ತನ್ನ ಹೆಂಡತಿಯನ್ನು ಅಪಹರಿಸಿದಾಗ ತನೆಗೆ ಬಂದೂಕು ತೋರಿಸಿ ಬೆದರಿಕೆ ಹಾಕಿದ್ದಾಗಿ ಪೊಲೀಸರ ಬಳಿ ಹೇಳಿದ್ದಾರೆ. ತರ್ಭಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್-ಇನ್-ಚಾರ್ಜ್ (ಐಐಸಿ) ಅನಿತಾ ಕಿಡೋ ಮಾತನಾಡಿ, ಹರಿಬಂಧು ಪಟೇಲ್ ತಮ್ಮ ಮದುವೆಗಾಗಿ ಕಾಂತಮಲ್‌ಗೆ ಹೋಗಿದ್ದರು.

ಮತ್ತಷ್ಟು ಓದಿ: ಉದ್ಯಮಿ ಕಿಡ್ನ್ಯಾಪ್: 1 ಕೋಟಿ ರೂ ಹಣಕ್ಕೆ ಡಿಮ್ಯಾಂಡ್ ಮಾಡಿದ್ದ ಆರೋಪಿಗಳ ಕೈಗೆ ಸಿಕ್ಕಿದ್ದು ಚಿಪ್ಪು

ಸಮಾರಂಭದ ನಂತರ, ದಂಪತಿ ಹಿಂತಿರುಗುತ್ತಿದ್ದಾಗ, ತರ್ಭಾ ರಸ್ತೆಯ ಬಡಬಂಧ ಬಳಿ ಮೂವರು ವ್ಯಕ್ತಿಗಳು ಅವರ ವಾಹನವನ್ನು ಅಡ್ಡಗಟ್ಟಿ, ಬಂದೂಕು ತೋರಿಸಿ ಬೆದರಿಸಿ ವಧುವನ್ನು ಅಪಹರಿಸಿದ್ದಾರೆ ಎಂದು ಅವರು ಹೇಳಿದರು. ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ಮತ್ತು ಮಹಿಳೆಯನ್ನು ರಕ್ಷಿಸಲು ಪ್ರಯತ್ನಗಳನ್ನು ಪ್ರಾರಂಭಿಸಿದ್ದಾರೆ. ಈ ಘಟನೆಯು ಪ್ರದೇಶದಲ್ಲಿ ಆತಂಕವನ್ನು ಹುಟ್ಟುಹಾಕಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಹಾಸನಾಂಬೆ ಮಹೋತ್ಸವ: ಗುತ್ತಿಗೆದಾರನ ಜತೆ ಸಚಿವ ಶಿವಲಿಂಗೇಗೌಡ ಚೌಕಾಸಿ
ಹಾಸನಾಂಬೆ ಮಹೋತ್ಸವ: ಗುತ್ತಿಗೆದಾರನ ಜತೆ ಸಚಿವ ಶಿವಲಿಂಗೇಗೌಡ ಚೌಕಾಸಿ
ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ?
ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
‘ಪ್ರೇಮದ ಊರಲಿ’ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್
‘ಪ್ರೇಮದ ಊರಲಿ’ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
‘ಆ ಸಿನಿಮಾ ದರ್ಶನ್​​​ಗೆ ಮಾತ್ರ’: ತರುಣ್ ಸುಧೀರ್ ಹೇಳಿದ್ದು ಯಾವ ಕತೆ?
‘ಆ ಸಿನಿಮಾ ದರ್ಶನ್​​​ಗೆ ಮಾತ್ರ’: ತರುಣ್ ಸುಧೀರ್ ಹೇಳಿದ್ದು ಯಾವ ಕತೆ?
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!