ಬಿ ಎಸ್ ಯಡಿಯೂರಪ್ಪ ಬಾಯಿಂದಲೇ ಮುಂದಿನ ಸಿಎಂ ಹೆಸರು ಘೋಷಿಸಲು ಯೋಚಿಸುತ್ತಿದೆ ಬಿಜೆಪಿ ಹೈಕಮಾಂಡ್

ಖುದ್ದು ಯಡಿಯೂರಪ್ಪ ಅವರಿಂದಲೇ ಸಿಎಂ ಅಭ್ಯರ್ಥಿ ಹೆಸರನ್ನು ಸೂಚಿಸಬೇಕು ಎಂದು ಪಕ್ಷದ ಉನ್ನತ ಮೂಲಗಳು ನಿರ್ಧರಿಸಿವೆ ಎನ್ನಲಾಗಿದೆ.

ಬಿ ಎಸ್ ಯಡಿಯೂರಪ್ಪ ಬಾಯಿಂದಲೇ ಮುಂದಿನ ಸಿಎಂ ಹೆಸರು ಘೋಷಿಸಲು ಯೋಚಿಸುತ್ತಿದೆ ಬಿಜೆಪಿ ಹೈಕಮಾಂಡ್
ಸಾಂದರ್ಭಿಕ ಚಿತ್ರ
TV9kannada Web Team

| Edited By: guruganesh bhat

Jul 26, 2021 | 5:02 PM

ಬೆಂಗಳೂರು: ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯನ್ನು ಶಾಸಕಾಂಗ ಸಭೆಯಲ್ಲಿ ಪೂರ್ಣಗೊಳಿಸಲು ಬಿಜೆಪಿ ಹೈಕಮಾಂಡ್ (BJP) ಯೋಜನೆ ರೂಪಿಸಿದೆ. ಶಾಸಕಾಂಗ ಸಭೆಯಲ್ಲಿ ಉಸ್ತುವಾರಿ ಸಿಎಂ ಬಿ.ಎಸ್.ಯಡಿಯೂರಪ್ಪ (BS Yediyurappa)  ಮೂಲಕವೇ ಮುಂದಿನ ಮುಖ್ಯಮಂತ್ರಿಯ ಹೆಸರನ್ನು ಘೋಷಿಸಿದರೆ ಯಾವುದೇ ಅಪಸ್ವರ, ಗಲಾಟೆಗೆ ಅವಕಾಶ ಇರುವುದಿಲ್ಲ ಎಂದು ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ. ಖುದ್ದು ಯಡಿಯೂರಪ್ಪ ಅವರಿಂದಲೇ ಸಿಎಂ ಅಭ್ಯರ್ಥಿ ಹೆಸರನ್ನು ಸೂಚಿಸಬೇಕು ಎಂದು ಪಕ್ಷದ ಉನ್ನತ ಮೂಲಗಳು ನಿರ್ಧರಿಸಿವೆ ಎನ್ನಲಾಗಿದೆ.

ಹೊಸ ಸಿಎಂ ಸಚಿವ ಸಂಪುಟದಲ್ಲಿ ಹೊಸಬರಿಗೆ ಮಣೆ ಹಾಕುವ ಕುರಿತು ಸಹ ಬಿಜೆಪಿ ಯೋಚಿಸುತ್ತಿದೆ. ನಾಯಕರಾದ ಸುನಿಲ್ ಕುಮಾರ್, ಎಸ್.ಎ.ರಾಮದಾಸ್, ರಾಜುಗೌಡ, ಪಿ.ರಾಜೀವ್, ಎಂ.ಪಿ.ರೇಣುಕಾಚಾರ್ಯ, ಹಾಲಪ್ಪ ಆಚಾರ್ , ಎಂ.ಪಿ.ಕುಮಾರಸ್ವಾಮಿ, ಪ್ರೀತಂ ಗೌಡ, ರೂಪಾಲಿ ನಾಯ್ಕ್ ಮತ್ತು ಪೂರ್ಣಿಮಾ ಶ್ರೀನಿವಾಸ್​ಗೆ ಮಂತ್ರಿಗಿರಿ ನೀಡುವ ಸಾಧ್ಯತೆ ಹೆಚ್ಚಾಗಿದೆ. ಸಿಎಂ ಸ್ಥಾನದಿಂದ ಶಾಸಕ ಅರವಿಂದ ಬೆಲ್ಲದ್ ಹೊರಗುಳಿದಲ್ಲಿ ಸಚಿವ ಸ್ಥಾನ ದೊರೆಯುವದಂತೂ ಖಚಿತವಾಗಿದೆ.

ಬಿಎಸ್‌ವೈ ಸಂಪುಟದಲ್ಲಿದ್ದ 12ಕ್ಕೂ ಹೆಚ್ಚು ಸಚಿವರಿಗೆ ಮಂತ್ರಿಸ್ಥನ ಕೈತಪ್ಪುವ ಸಾಧ್ಯತೆಯಿದೆ. ಘಟಾನುಘಟಿ ಸಚಿವರಿಗೇ ಮತ್ತೆ ಸ್ಥಾನ ಸಿಗುವುದು ಅನುಮಾನ ಎನ್ನಲಾಗುತ್ತಿದೆ. ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಆರ್. ಅಶೋಕ್‌ಗೂ ಸಹ ಸ್ಥಾನ ಕೈತಪ್ಪುವ ಆತಂಕ ಎದುರಾಗಿದೆ. ಕೋಟ ಶ್ರೀನಿವಾಸ ಪೂಜಾರಿ, ಕೆ.ಸಿ.ನಾರಾಯಣಗೌಡ, ಪ್ರಭು ಚೌಹಾಣ್, ಸಿ.ಸಿ.ಪಾಟೀಲ್, ಶ್ರೀಮಂತ ಪಾಟೀಲ್, ಶಶಿಕಲಾ ಜೊಲ್ಲೆ, ಬಿ.ಸಿ.ಪಾಟೀಲ್, ಶಿವರಾಂ ಹೆಬ್ಬಾರ್ ಎಸ್.ಸುರೇಶ್ ಕುಮಾರ್ ಸೇರಿ ಹಲವರಿಗೆ ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: 

BS Yediyurappa: ಸಂಧ್ಯಾ ಕಾಲದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ; ಯಡಿಯೂರಪ್ಪಗೆ ಈಗ ಆರೋಗ್ಯವೇ ಭಾಗ್ಯ ..

ಶಿಕಾರಿಪುರ: ಬಿಎಸ್ ಯಡಿಯೂರಪ್ಪ ರಾಜೀನಾಮೆ ಹಿನ್ನೆಲೆ ಅಂಗಡಿ ಮುಂಗಟ್ಟು ಬಂದ್; ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

(BJP High Command is planning to announce the next CM name right from the mouth of BS Yediyurappa )

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada