Haveri: ವರದಾ ನದಿ ಪ್ರವಾಹದಿಂದ 20ಕ್ಕೂ ಹೆಚ್ಚು ಮನೆಗಳು ಜಲಾವೃತ; ಅಪಾರ ಹಾನಿ

Karnataka Rains: ವರದಾ ನದಿ ನೀರಿನಲ್ಲಿ ಮನೆ, ದೇವಸ್ಥಾನ, ಮಸೀದಿಗಳು ಜಲಾವೃತವಾಗಿದೆ. ಮನೆಯಲ್ಲಿನ ಬಟ್ಟೆ, ದವಸಧಾನ್ಯಗಳು, ಆಹಾರ ಪದಾರ್ಥಗಳು ಸೇರಿದಂತೆ ಎಲ್ಲವೂ ನೀರಿನಲ್ಲಿ ಮುಳುಗಿ ಹಾನಿ ಸಂಭವಿಸಿದೆ.

Haveri: ವರದಾ ನದಿ ಪ್ರವಾಹದಿಂದ 20ಕ್ಕೂ ಹೆಚ್ಚು ಮನೆಗಳು ಜಲಾವೃತ; ಅಪಾರ ಹಾನಿ
ವರದಾ ನದಿ ನೀರು ನುಗ್ಗಿ ಬೆಳೆನಾಶ
Follow us
TV9 Web
| Updated By: ganapathi bhat

Updated on: Jul 26, 2021 | 4:31 PM

ಹಾವೇರಿ: ವರದಾ ನದಿ ಪ್ರವಾಹದಿಂದ 20ಕ್ಕೂ ಹೆಚ್ಚು ಮನೆ ಜಲಾವೃತವಾಗಿದೆ. ಹಾವೇರಿ ತಾಲೂಕಿನ ಕರ್ಜಗಿಯಲ್ಲಿ ಮನೆಗಳು ಮುಳುಗಡೆ ಆಗಿದೆ. 20ಕ್ಕೂ ಹೆಚ್ಚು ಕುಟುಂಬಗಳು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿದ್ದ ಬೆಳೆಗಳು ಜಲಾವೃತವಾಗಿದೆ. ಶೇಂಗಾ, ಹತ್ತಿ, ಮೆಕ್ಕೆಜೋಳ, ಸೋಯಾಬೀನ್ ಬೆಳೆ ಜಲಾವೃತವಾಗಿ ನಷ್ಟ ಸಂಭವಿಸಿದೆ. ಅಪಾರ ಆಸ್ತಿ ಪಾಸ್ತಿ ಹಾನಿಯಾಗಿದೆ. ಬೆಳೆನಾಶವಾಗಿದೆ. ವರದಾ ನದಿ ನೀರಿನ ಆರ್ಭಟಕ್ಕೆ ಗ್ರಾಮದ ಜನರು ತತ್ತರಿಸಿ ಹೋಗಿದ್ದಾರೆ.

ವರದಾ ನದಿಯಲ್ಲಿ ಕಡಿಮೆಯಾಗದ ನೀರಿನ ಹರಿವು ಸಂಕಷ್ಟ ತಂದೊಡ್ಡಿದೆ. ಕಳೆದ ಮೂರು ದಿನಗಳಿಂದ ಇಲ್ಲಿನ ಜನರು ಮನೆ ಬಿಟ್ಟು ಸರಕಾರದ ಕಾಳಜಿ ಕೇಂದ್ರದಲ್ಲಿ ವಾಸವಾಗಿದ್ದಾರೆ. ಈ ಮಧ್ಯೆ, ವರದಾ ನದಿ ನೀರಿನಲ್ಲಿ ಮನೆ, ದೇವಸ್ಥಾನ, ಮಸೀದಿಗಳು ಜಲಾವೃತವಾಗಿದೆ. ಮನೆಯಲ್ಲಿನ ಬಟ್ಟೆ, ದವಸಧಾನ್ಯಗಳು, ಆಹಾರ ಪದಾರ್ಥಗಳು ಸೇರಿದಂತೆ ಎಲ್ಲವೂ ನೀರಿನಲ್ಲಿ ಮುಳುಗಿ ಹಾನಿ ಸಂಭವಿಸಿದೆ.

ವಿಜಯಪುರ: ಕೃಷ್ಣಾ ನದಿ ನೀರಿನ ಪ್ರವಾಹದಲ್ಲಿ ಕೊಚ್ಚಿ ಹೋದ ವ್ಯಕ್ತಿ ಕೃಷ್ಣಾ ನದಿ ನೀರಿನ ಪ್ರವಾಹಕ್ಕೆ ನದಿಯಲ್ಲಿ ವ್ಯಕ್ತಿಯೋರ್ವ ನೀರಿನಲ್ಲಿ ಕೊಚ್ಚಿ ಹೋದ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸವದಿ ಗ್ರಾಮದಲ್ಲಿ ನಡೆದಿದೆ. ರಾಮಗೌಡ ಸಿದ್ದಗೌಡ ಪಾಟೀಲ್ ಎಂಬ 55 ವರ್ಷದ ವ್ಯಕ್ತಿ ನೀರುಪಾಲು ಆಗಿದ್ದಾರೆ. ಜಾನುವಾರು, ಮನೆ ಸಾಮಗ್ರಿ ಸ್ಥಳಾಂತರಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಕೊಚ್ಚಿ ಹೋದ ವ್ಯಕ್ತಿಗಾಗಿ NDRF, ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತಿದೆ.

ಕೊಪ್ಪಳ: ತು‌ಂಗಭದ್ರಾ ಜಲಾಶಯ ಭರ್ತಿ ತು‌ಂಗಭದ್ರಾ ಜಲಾಶಯ ಭರ್ತಿ ಹಿನ್ನಲೆಯಲ್ಲಿ ಜಲಾಶಯದ 33 ಕ್ರಸ್ಟ್ ಗೇಟ್​ಗಳಿಂದ ನದಿಗೆ ನೀರು ಬಿಡಲಾಗುತ್ತಿದೆ. 1,633 ಅಡಿ ಸಂಗ್ರಹ ಸಾಮಾರ್ಥ್ಯದ ಜಲಾಶಯ ಇದಾಗಿದ್ದು, ಸದ್ಯ ಜಲಾಶಯದಲ್ಲಿ 94.97 ಟಿಎಂಸಿ ನೀರು ಸಂಗ್ರಹವಾಗಿದೆ. 33 ಕ್ರಸ್ಟ್ ಗೇಟ್ ಗಳಿಂದ 1,22,757 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಜಲಾಶಯಕ್ಕೆ 1,86,973 ಕ್ಯೂಸೆಕ್ ಒಳಹರಿವು ಇದೆ.

ಹೀಗಾಗಿ ಜಲಾಶಯದ ಮುಂಭಾಗದ ಸೇತುವೆ ಮುಳುಗಡೆ ಆಗಿದೆ. ಅಪಾಯ ಲೆಕ್ಕಿಸದೆ ಸೇತುವೆ ಮೇಲೆ ಫೋಟೋ ತೆಗೆಸಿಕೊಳ್ಳಲು ಜನರು ಮುಗಿಬಿದ್ದಿದ್ದಾರೆ. ಜನರನ್ನು ಸೇತುವೆಯಿಂದ ಪೊಲೀಸರು ಹೊರ ಕಳುಹಿಸಿದ್ದಾರೆ. ಸೇತುವೆ ರಸ್ತೆ ಬಂದ್ ಮಾಡಿಸಿದ್ದಾರೆ.

ಇದನ್ನೂ ಓದಿ: ಮಳೆ ನಿಂತರೂ ನಿಲ್ಲದ ನೆರೆ ಸಂತ್ರಸ್ತರ ಪರದಾಟ; ಕಾರವಾರದಲ್ಲಿ 50 ಕ್ಕೂ ಹೆಚ್ಚು ಮನೆಗಳು ಕುಸಿತ

Karnataka Dams Water Level: ಮಳೆನಾಡು ಕರ್ನಾಟಕ, ಶೇ 20ರಷ್ಟು ಅಧಿಕ ಮಳೆ, 12 ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ

(Varada River Flood in Haveri 20 House covered by Water People facing difficulty)