Karnataka Dams Water Level: ಮಳೆನಾಡು ಕರ್ನಾಟಕ, ಶೇ 20ರಷ್ಟು ಅಧಿಕ ಮಳೆ, 12 ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ

ಮುಂಗಾರಿನ ಅವಧಿಯಲ್ಲಿ ಅಂದರೆ ಜೂನ್ 1 ರಿಂದ ಜುಲೈ 19ರ ನಡುವಣ ಅವಧಿಯಲ್ಲಿ ಕರ್ನಾಟಕದಲ್ಲಿ ವಾಡಿಕೆಯಂತೆ 484 ಮಿ.ಮೀ. ಮಳೆಯಾಗಬೇಕು. ಇದೀಗ ಆ ವಾಡಿಕೆ ಪ್ರಮಾಣಕ್ಕಿಂತ ಹೆಚ್ಚು ಅಂದರೆ 578 ಮಿ.ಮೀ. ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್​ಎನ್​ಡಿಎಂಸಿ -Karnataka SNDMC) ಮೂಲಗಳು ತಿಳಿಸಿವೆ.

Karnataka Dams Water Level: ಮಳೆನಾಡು ಕರ್ನಾಟಕ, ಶೇ 20ರಷ್ಟು ಅಧಿಕ ಮಳೆ, 12 ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ
ಜಲಾಶಯ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jul 26, 2021 | 8:25 AM

ಬೆಂಗಳೂರು: ಕಳೆದ 10 ದಿನಗಳಲ್ಲಿ ಕರ್ನಾಟಕದಲ್ಲಿ ಮುಂಗಾರು ಮಳೆ ವಿಪರೀತ ಅನಿಸುವಷ್ಟು ಎಡೆಬಿಡದೆ ಸುರಿಯುತ್ತಿದೆ. ರಾಜ್ಯದಲ್ಲಿ ಬಹುತೇಕ ಭಾಗಗಳಲ್ಲಿ ವಾಡಿಕೆಗಿಂತ ಶೇ. 20ರಷ್ಟು ಅಧಿಕ ಮಳೆಯಾಗಿದ್ದು, ಕರ್ನಾಟಕ ಮಳೆನಾಡು ಆಗಿ ಮಾರ್ಪಟ್ಟಿದೆ. ಇನ್ನೂ 2 ದಿನ ಮಳೆಯಾಗಲಿದ್ದು, 7 ಜಿಲ್ಲೆಗಳಲ್ಲಿ ರೆಡ್​​ ಅಲರ್ಟ್​ ಮುಂದುವರಿದಿದೆ. (Monsoon 2021)

ಮುಂಗಾರಿನ ಅವಧಿಯಲ್ಲಿ ಅಂದರೆ ಜೂನ್ 1 ರಿಂದ ಜುಲೈ 19ರ ನಡುವಣ ಅವಧಿಯಲ್ಲಿ ಕರ್ನಾಟಕದಲ್ಲಿ ವಾಡಿಕೆಯಂತೆ 484 ಮಿ.ಮೀ. ಮಳೆಯಾಗಬೇಕು. ಇದೀಗ ಆ ವಾಡಿಕೆ ಪ್ರಮಾಣಕ್ಕಿಂತ ಹೆಚ್ಚು ಅಂದರೆ 578 ಮಿ.ಮೀ. ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್​ಎನ್​ಡಿಎಂಸಿ Karnataka State Natural Disaster Management Centre -Karnataka SNDMC) ಮೂಲಗಳು ತಿಳಿಸಿವೆ.

ರಾಜ್ಯದ ಅತಿ ದೊಡ್ಡ ಜಲಾಶಯವಾದ ಲಿಂಗನಮಕ್ಕಿ ಸೇರಿದಂತೆ ಇತರೆ ಪ್ರಮುಖ ಜಲಾಶಯಗಳಾದ ಕಾವೇರಿ ಕಣಿವೆ ಭಾಗದ ಕೆಆರ್​ಎಸ್​, ಕಬಿನಿ, ಹೇಮಾವತಿ, ಹಾರಂಗಿ ಮತ್ತು ಜಲ ವಿದ್ಯುತ್​ ಅಣೆಕಟ್ಟೆಗಳಾದ ಲಿಂಗನಮಕ್ಕಿ, ಸೂಪಾ ಮತ್ತು ಕೃಷ್ಣಾ ನದಿ ಭಾಗದ ಜಲಾಶಯಗಳಾದ ತುಂಗಭದ್ರಾ, ಭದ್ರಾ, ಘಟಪ್ರಭಾ, ಮಲಪ್ರಭಾ, ನಾರಾಯಣಪುರ, ಆಲಮಟ್ಟಿ (ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರ) ಜಲಾಶಯಗಳ ನೀರಿನ ಮಟ್ಟ (Karnataka Dams Water Level) ಎಷ್ಟಿದೆ?

ಕಾವೇರಿ ಕಣಿವೆ ಭಾಗದ ಜಲಾಶಯಗಳು:

1) ಕೆಆರ್​ಎಸ್​ ಜಲಾಶಯ | KRS Dam ಇಂದಿನ ನೀರಿನ ಮಟ್ಟ: 111.00 ಅಡಿ ಗರಿಷ್ಠ ಸಾಮರ್ಥ್ಯ: 124.80 ಅಡಿ

2) ಹಾರಂಗಿ ಜಲಾಶಯ | Harangi Dam ಇಂದಿನ ನೀರಿನ ಮಟ್ಟ: 2855 ಅಡಿ ಗರಿಷ್ಠ ಸಾಮರ್ಥ್ಯ: 2859 ಅಡಿ

3) ಹೇಮಾವತಿ ಜಲಾಶಯ | Hemavathi Dam ಇಂದಿನ ನೀರಿನ ಮಟ್ಟ: 2917 ಅಡಿ ಗರಿಷ್ಠ ಸಾಮರ್ಥ್ಯ: 2922 ಅಡಿ

4) ಕಬಿನಿ ಜಲಾಶಯ | Kabini Dam ಇಂದಿನ ನೀರಿನ ಮಟ್ಟ: 2280 ಅಡಿ ಗರಿಷ್ಠ ಸಾಮರ್ಥ್ಯ: 2284 ಅಡಿ

ಜಲ ವಿದ್ಯುತ್​ ಅಣೆಕಟ್ಟೆಗಳು:

5) ಲಿಂಗನಮಕ್ಕಿ ಜಲಾಶಯ | Linganamakki Dam ಇಂದಿನ ನೀರಿನ ಮಟ್ಟ: 1804 ಅಡಿ ಗರಿಷ್ಠ ಸಾಮರ್ಥ್ಯ: 1819 ಅಡಿ

6) ಸೂಪಾ ಜಲಾಶಯ | Supa Dam ಇಂದಿನ ನೀರಿನ ಮಟ್ಟ: 550 ಅಡಿ ಗರಿಷ್ಠ ಸಾಮರ್ಥ್ಯ: 564 ಅಡಿ

ಕೃಷ್ಣಾ ನದಿ ಭಾಗದ ಜಲಾಶಯಗಳು:

7) ತುಂಗಾಭದ್ರಾ ಜಲಾಶಯ | Tungabhadra Dam ಇಂದಿನ ನೀರಿನ ಮಟ್ಟ: 1630 ಅಡಿ ಗರಿಷ್ಠ ಸಾಮರ್ಥ್ಯ: 1633 ಅಡಿ

8) ಭದ್ರಾ ಜಲಾಶಯ | Bhadra Dam ಇಂದಿನ ನೀರಿನ ಮಟ್ಟ: 178 ಅಡಿ ಗರಿಷ್ಠ ಸಾಮರ್ಥ್ಯ: 186 ಅಡಿ

9) ಮಲಪ್ರಭಾ ಜಲಾಶಯ | Malaprabha Dam ಇಂದಿನ ನೀರಿನ ಮಟ್ಟ: 2077 ಅಡಿ ಗರಿಷ್ಠ ಸಾಮರ್ಥ್ಯ: 2079.05 ಅಡಿ

10) ಘಟಪ್ರಭಾ ಜಲಾಶಯ | Ghataprabha Dam ಇಂದಿನ ನೀರಿನ ಮಟ್ಟ: 2170 ಅಡಿ ಗರಿಷ್ಠ ಸಾಮರ್ಥ್ಯ: 2175 ಅಡಿ

11) ನಾರಾಯಣಪುರ ಜಲಾಶಯ | Narayanpur Dam ಇಂದಿನ ನೀರಿನ ಮಟ್ಟ: 490 ಮೀಟರ್ ಗರಿಷ್ಠ ಸಾಮರ್ಥ್ಯ: 492.25 ಮೀಟರ್

12) ಆಲಮಟ್ಟಿ ಜಲಾಶಯ | Almatti Dam ಇಂದಿನ ನೀರಿನ ಮಟ್ಟ: 516 ಮೀಟರ್ ಗರಿಷ್ಠ ಸಾಮರ್ಥ್ಯ: 519.69 ಮೀಟರ್

(Monsoon 2021 Karnataka 12 reservoirs and dams water level as on 26th July 2021 )

Published On - 8:16 am, Mon, 26 July 21