ಬಿಗ್​ ಬಾಸ್​ ಮನೆಯಿಂದ ಕಾಣೆಯಾದ ಶುಭಾ ಪೂಂಜಾ; ಸ್ಪರ್ಧಿಗಳಿಗೆ ಮಿಡ್​ವೀಕ್​ ಟ್ವಿಸ್ಟ್​

ಈ ವಾರ ಪ್ರಶಾಂತ್ ಸಂಬರಗಿ​, ಶುಭಾ ಪೂಂಜಾ, ಶಮಂತ್​ ಬ್ರೋ ಗೌಡ, ಚಕ್ರವರ್ತಿ ಚಂದ್ರಚೂಡ್, ದಿವ್ಯಾ ಉರುಡುಗ​ ನಾಮಿನೇಷನ್​ ಲಿಸ್ಟ್​ನಲ್ಲಿದ್ದಾರೆ. ಇವರಲ್ಲಿ ಒಬ್ಬರು ವೇದಿಕೆ ಏರದೇ ನೇರವಾಗಿ ಎಲಿಮಿನೇಟ್​ ಆಗುತ್ತಿದ್ದಾರೆ.

ಬಿಗ್​ ಬಾಸ್​ ಮನೆಯಿಂದ ಕಾಣೆಯಾದ ಶುಭಾ ಪೂಂಜಾ; ಸ್ಪರ್ಧಿಗಳಿಗೆ ಮಿಡ್​ವೀಕ್​ ಟ್ವಿಸ್ಟ್​
ನಟಿ ಶುಭಾ ಪೂಂಜಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 26, 2021 | 5:06 PM

ಕಳೆದ ವಾರ ಬಿಗ್​ ಬಾಸ್​ ಎಲಿಮಿನೇಷನ್​ಗೆ​  ಕಿಚ್ಚ ಸುದೀಪ್​ ಟ್ವಿಸ್ಟ್​ ಒಂದನ್ನು ನೀಡಿದ್ದರು. ‘ಈ ವಾರ ಯಾರೂ ಬಿಗ್​ ಬಾಸ್​ನಿಂದ ಹೊರ ಹೋಗುತ್ತಿಲ್ಲ. ಆದರೆ, ಶನಿವಾರದೊಳಗೆ ಒಬ್ಬರು ಬಿಗ್​ ಬಾಸ್​ ಮನೆಯಿಂದ ಔಟ್​ ಆಗುತ್ತಾರೆ’ ಎಂದಿದ್ದರು! ಇದಾದ ಮರುದಿನವೇ ಶುಭಾ ಪೂಂಜಾ ಬಿಗ್​ ಬಾಸ್​ ಮನೆಯಿಂದ ಕಾಣೆಯಾಗಿದ್ದಾರೆ. ಇದು ಉಳಿದ ಸ್ಪರ್ಧಿಗಳಿಗೆ ಆತಂಕ ಮೂಡಿಸಿದೆ.

ಈ ವಾರ ಪ್ರಶಾಂತ್ ಸಂಬರಗಿ​, ಶುಭಾ ಪೂಂಜಾ, ಶಮಂತ್​ ಬ್ರೋ ಗೌಡ, ಚಕ್ರವರ್ತಿ ಚಂದ್ರಚೂಡ್, ದಿವ್ಯಾ ಉರುಡುಗ​ ನಾಮಿನೇಷನ್​ ಲಿಸ್ಟ್​ನಲ್ಲಿದ್ದಾರೆ. ಇವರಲ್ಲಿ ಒಬ್ಬರು ವೇದಿಕೆ ಏರದೇ ನೇರವಾಗಿ ಎಲಿಮಿನೇಟ್​ ಆಗುತ್ತಿದ್ದಾರೆ. ಹೀಗೆ ಎಲಿಮಿನೇಟ್​ ಆಗುವ ಸ್ಪರ್ಧಿ ಯಾವಾಗ ಬೇಕಾದರೂ, ಹೇಗೆ ಬೇಕಾದರೂ ಬಿಗ್​ ಬಾಸ್​ ಮನೆಯಿಂದ ಹೊರ ಹೋಗಬಹುದು ಎಂದು ಸುದೀಪ್​ ಹೇಳಿದ್ದರು.

ಈ ವಿಚಾರದ ಬಗ್ಗೆ ಬಿಗ್​ ಬಾಸ್​ ಮನೆಯಲ್ಲಿ ಚರ್ಚೆ ಆಗಿತ್ತು. ‘ಕಳೆದ ಸೀಸನ್​ನಲ್ಲಿ ಹರೀಶ್​ ರಾಜ್​ ಅವರನ್ನು ಕ್ರೇನ್ ಮೂಲಕ ಬಿಗ್​ ಬಾಸ್​ ಮನೆಯಿಂದ ಹೊರಗೆ ಕರೆತರಲಾಗಿತ್ತು’ ಎಂದು ಚಕ್ರವರ್ತಿ ಹಳೆಯ ಸೀಸನ್​ ಘಟನೆಯನ್ನು ವಿವರಿಸಿದರು. ಈ ಬಾರಿಯೂ  ಅದೇರೀತಿ  ಆಗಬಹುದು ಎಂದು ಕೆಲವರು ಅನುಮಾನ ಹೊರ ಹಾಕಿದರು. ಇದಾದ ಮರುದಿನವೇ ಶುಭಾ ಬಿಗ್​ ಬಾಸ್​ ಮನೆಯಿಂದ ಕಾಣೆಯಾಗಿದ್ದಾರೆ.

ಹಾಗಂತ ಅವರು ಎಲಿಮಿನೇಷನ್​ ಆಗಿಲ್ಲ. ಬದಲಿಗೆ ಅಡಗಿ ಕೂತಿದ್ದಾರೆ. ಸುದೀಪ್​ ಕಡೆಯಿಂದ ವಿಶೇಷ ಆದೇಶ ಬಂದ ಬೆನ್ನಲ್ಲೇ ಶುಭಾ ಅವರು ‘ನಾನು ಮನೆಯಲ್ಲಿ ಅಡಗುತ್ತೇನೆ. ಈ ಮೂಲಕ ಸ್ಪರ್ಧಿಗಳಿಗೆ ಶಾಕ್​ ನೀಡುತ್ತೇನೆ ’ಎಂದು ಶಮಂತ್​ ಬಳಿ ಹೇಳಿಕೊಂಡಿದ್ದರು. ಈಗ ಹಾಗೆಯೇ ಮಾಡಿದ್ದಾರೆ. ಅವರು ಕಾಣೆ ಆಗಿದ್ದಾರೆ ಎಂದು ತಿಳಿದ ಮನೆ ಮಂದಿ ಶುಭಾಗಾಗಿ ಹುಡುಕಾಟ ಆರಂಭಿಸಿದ್ದಾರೆ.  ಕೆಲವರು ಶುಭಾ ಅವರೇ ಎಲಿಮಿನೇಟ್​ ಆಗಿದ್ದಾರೆ ಎನ್ನುವ ಭಯದಲ್ಲಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ಫಿನಾಲೆಗೂ ಮೊದಲು ಬಿಗ್​ ಟ್ವಿಸ್ಟ್​; ಈ ವಾರದ ಎಲಿಮಿನೇಷನ್​ ನೋಡಿ ಚಕಿತಗೊಂಡ ಫ್ಯಾನ್ಸ್​

ಬಿಗ್​ ಬಾಸ್​ ಫಿನಾಲೆಗೂ ಮೊದಲೇ ಶುಭಾ ಪೂಂಜಾಗೆ ಬಿಗ್​ ಬಾಸ್​ ಕಡೆಯಿಂದ ಶಾಕ್​

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ