ಬಿಗ್ ಬಾಸ್ ಮನೆಯಲ್ಲಿ ಒಂದು ಫೋನ್ ಬೂತ್ ಇಡಲಾಗಿದೆ. ಅದಕ್ಕೆ ಕರೆ ಮಾಡಿ ಒಂದು ಮೆಸೇಜ್ ನೀಡಲಾಗಿದೆ. ಶುಭಾ ಪೂಂಜಾ, ದಿವ್ಯಾ ಉರುಡುಗ, ಪ್ರಶಾಂತ್ ಸಂಬರಗಿ, ಶಮಂತ್ ಬ್ರೋ ಗೌಡ, ಚಕ್ರವರ್ತಿ ಚಂದ್ರಚೂಡ್ ಅವರು ಫೋನ್ನಲ್ಲಿ ಮಾತನಾಡಿದ್ದಾರೆ. ಇಷ್ಟು ಜನರಲ್ಲಿ ಒಬ್ಬರಿಗೆ ಈಗ ಬಿಗ್ ಬಾಸ್ ಪಯಣ ಕೊನೆ ಆಗಲಿದೆ ಎಂದು ಸೂಚನೆ ನೀಡಲಾಗಿದೆ.
ಸಾಮಾನ್ಯವಾಗಿ ವೀಕೆಂಡ್ನಲ್ಲಿ ಎಲಿಮಿನೇಟ್ ಆದವರನ್ನು ಸುದೀಪ್ ಅವರು ವೇದಿಕೆಗೆ ಕರೆಸಿ ಮಾತನಾಡಿಸುತ್ತಾರೆ. ಬಿಗ್ ಬಾಸ್ ಮನೆಯ ಅನುಭವವನ್ನು ಹಂಚಿಕೊಳ್ಳಲು ಅವಕಾಶ ನೀಡುತ್ತಾರೆ. ಆದರೆ ಇದು ವಿಡ್ವೀಕ್ ಎಲಿಮಿನೇಷನ್ ಆದಕಾರಣ ಸುದೀಪ್ ಅನುಪಸ್ಥಿತಿಯಲ್ಲೇ ಸ್ಪರ್ಧಿಗಳು ಔಟ್ ಆಗಬೇಕಾಗುತ್ತದೆ. ಹಾಗಾಗಿ, ಇರಿಸಲಾಗಿರುವ ಟೆಲಿಫೋನ್ ಬೂತ್ ಮೂಲಕವೇ ಸ್ಪರ್ಧಿಗಳ ತಮ್ಮ ಅನುಭವ ಹಂಚಿಕೊಳ್ಳಲು ಬಿಗ್ ಬಾಸ್ ಅವಕಾಶ ನೀಡಿದ್ದಾರೆ.
‘ಇನ್ನು ಎರಡು ನಿಮಿಷಗಳಲ್ಲಿ ಮುಖ್ಯದ್ವಾರ ತೆರೆದರೆ ನಿಮ್ಮ ಪ್ರಯಾಣ ಮುಕ್ತಾಯವಾಗಿದೆ ಎಂದು ಅರ್ಥ’ ಎಂದು ಬಿಗ್ ಬಾಸ್ ಧ್ವನಿ ಕೇಳಿಸಿದೆ. ಫೋನ್ ಬೂತ್ನಲ್ಲಿ ಮಾತನಾಡಿ ಬಂದ ಪ್ರಶಾಂತ್ ಸಂಬರಗಿ ಅವರು ಸಿಕ್ಕಾಪಟ್ಟೆ ಎಮೋಷನಲ್ ಆಗಿದ್ದಾರೆ. ಚಿಕ್ಕ ಮಕ್ಕಳಂತೆ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿರುವ ಪ್ರೋಮೋನಲ್ಲಿ ಈ ಅಂಶಗಳು ಗೊತ್ತಾಗಿವೆ. ನಿಜಕ್ಕೂ ಯಾರು ಎಲಿಮಿನೇಟ್ ಆದರು ಎಂಬುದು ಇಂದಿನ (ಜು.27) ಸಂಚಿಕೆಯಲ್ಲಿ ಬಹಿರಂಗ ಆಗಬೇಕಿದೆ.
ಎರಡನೇ ಇನ್ನಿಂಗ್ಸ್ ಆರಂಭದಲ್ಲೇ ಪ್ರಶಾಂತ್ ಸಂಬರಗಿ ಎಲಿಮಿನೇಟ್ ಆಗಿದ್ದಾರೆ ಎಂದು ಘೋಷಿಸಲಾಗಿತ್ತು. ಆದರೆ ಅದು ಕೇವಲ ಪ್ರ್ಯಾಂಕ್ ಎಂಬುದು ಕೆಲವೇ ನಿಮಿಷಗಳಲ್ಲಿ ಗೊತ್ತಾಗಿತ್ತು. ಈಗ ನಿಜವಾಗಿಯೂ ಎಲಿಮಿನೇಟ್ ಆಗುವ ಸಂದರ್ಭ ಎದುರಾಗಿದ್ದು, ಯಾರ ಪಯಣ ಅಂತ್ಯವಾಗಲಿದೆ ಎಂಬುದನ್ನು ನೋಡಲು ವೀಕ್ಷಕರು ಕಾಯುತ್ತಿದ್ದಾರೆ.
ಇದನ್ನೂ ಓದಿ:
ಬಿಗ್ ಬಾಸ್ ನಿಯಮ ಉಲ್ಲಂಘನೆ? ಇದೇ ಮೊದಲ ಬಾರಿಗೆ ಫೋನ್ ಬಳಕೆ ಮಾಡಿದ ಶಮಂತ್‘
ಅರವಿಂದ್ಗೆ ಗೆಲುವಿನ ಮಾಲೆ, ಮಂಜು ರನ್ನರ್ ಅಪ್; ಇದು ಬಿಗ್ ಬಾಸ್ ಮನೆ ಭವಿಷ್ಯ