AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ ಮನೆಯಲ್ಲಿ ಮಂಗಳವಾರ ನಡೆಯಿತು ಎಲಿಮಿನೇಷನ್​; ದೊಡ್ಮನೆಯಿಂದ ಔಟ್​ ಆಗಿದ್ದು ಇವರೇ

ಬಿಗ್​ ಬಾಸ್​ ಮನೆಯಲ್ಲಿ ಒಂದು ಫೋನ್​ ಬೂತ್​ ಇಡಲಾಗಿದೆ. ಅದಕ್ಕೆ ಕರೆ ಮಾಡಿ ಒಂದು ಮೆಸೇಜ್​ ನೀಡಲಾಯಿತು. ಶುಭಾ ಪೂಂಜಾ, ದಿವ್ಯಾ ಉರುಡುಗ, ಪ್ರಶಾಂತ್​ ಸಂಬರಗಿ, ಶಮಂತ್​ ಬ್ರೋ ಗೌಡ, ಚಕ್ರವರ್ತಿ ಚಂದ್ರಚೂಡ್​ ಅವರು ಫೋನ್​ನಲ್ಲಿ ಮಾತನಾಡಿದರು.

ಬಿಗ್​ ಬಾಸ್​ ಮನೆಯಲ್ಲಿ ಮಂಗಳವಾರ ನಡೆಯಿತು ಎಲಿಮಿನೇಷನ್​; ದೊಡ್ಮನೆಯಿಂದ ಔಟ್​ ಆಗಿದ್ದು ಇವರೇ
ಬಿಗ್ ಬಾಸ್​ ಕನ್ನಡ ಸೀಸನ್​ 8
TV9 Web
| Edited By: |

Updated on: Jul 27, 2021 | 10:37 PM

Share

ಬಿಗ್​ ಬಾಸ್​ ಕನ್ನಡ ಸೀಸನ್​ 8ನಲ್ಲಿ ಕೊನೇ ದಿನಗಳು ಹತ್ತಿರ ಆಗುತ್ತಿದ್ದಂತೆಯೇ ದೊಡ್ಮನೆಯಲ್ಲಿ ರೋಚಕತೆ ಹೆಚ್ಚಿದೆ. ಬಿಗ್ ಬಾಸ್​ ಎರಡನೇ ಇನ್ನಿಂಗ್ಸ್​ನಲ್ಲಿ ಸ್ಪರ್ಧಿಗಳಿಗೆ ಹೊಸ ಹೊಸ ಟ್ವಿಸ್ಟ್​ಗಳನ್ನು ನೀಡಲಾಗುತ್ತಿದೆ. ಕಳೆದ ಭಾನುವಾರ (ಜು.25) ಇಬ್ಬರು ಎಲಿಮಿನೇಟ್​ ಆಗುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ ವಾರಾಂತ್ಯದ ಬದಲು ಮಿಡ್​ವೀಕ್​ನಲ್ಲಿ ಎಲಿಮಿನೇಷನ್​ (Elimination) ಇಡಲಾಗಿದೆ. ಈ ವೇಳೆ ಚಕ್ರವರ್ತಿ ಚಂದ್ರಚೂಡ್​ ಔಟ್​ ಆಗಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಒಂದು ಫೋನ್​ ಬೂತ್​ ಇಡಲಾಗಿದೆ. ಅದಕ್ಕೆ ಕರೆ ಮಾಡಿ ಒಂದು ಮೆಸೇಜ್​ ನೀಡಲಾಯಿತು. ಶುಭಾ ಪೂಂಜಾ, ದಿವ್ಯಾ ಉರುಡುಗ, ಪ್ರಶಾಂತ್​ ಸಂಬರಗಿ, ಶಮಂತ್​ ಬ್ರೋ ಗೌಡ, ಚಕ್ರವರ್ತಿ ಚಂದ್ರಚೂಡ್​ ಅವರು ಫೋನ್​ನಲ್ಲಿ ಮಾತನಾಡಿದರು. ಇಷ್ಟು ಜನರಲ್ಲಿ ಒಬ್ಬರಿಗೆ ಈಗ ಬಿಗ್​ ಬಾಸ್​ ಪಯಣ ಕೊನೆ ಆಗಲಿದೆ ಎಂದು ಸೂಚನೆ ನೀಡಲಾಯಿತು. ಪ್ರತಿಯೊಬ್ಬರೂ ಗೇಟ್​ ಬಳಿ ಹೋಗಿ ನಿಲ್ಲಬೇಕು. ಯಾರಿಗೆ ಬಾಗಿಲು ತೆರೆಯುತ್ತದೆಯೋ ಅವರು ಎಲಿಮಿನೇಟ್​ ಆದಂತೆ. ಈ ವೇಳೆ ಚಕ್ರವರ್ತಿಗೆ ಬಾಗಿಲು ತೆಗೆದಿದೆ.

ಸಾಮಾನ್ಯವಾಗಿ ವೀಕೆಂಡ್​ನಲ್ಲಿ ಎಲಿಮಿನೇಟ್​ ಆದವರನ್ನು ಸುದೀಪ್​ ಅವರು ವೇದಿಕೆಗೆ ಕರೆಸಿ ಮಾತನಾಡಿಸುತ್ತಾರೆ. ಬಿಗ್​ ಬಾಸ್​ ಮನೆಯ ಅನುಭವವನ್ನು ಹಂಚಿಕೊಳ್ಳಲು ಅವಕಾಶ ನೀಡುತ್ತಾರೆ. ಆದರೆ ಇದು ವಿಡ್​ವೀಕ್​ ಎಲಿಮಿನೇಷನ್​ ಆದಕಾರಣ ಸುದೀಪ್​ ಅನುಪಸ್ಥಿತಿಯಲ್ಲೇ ಚಕ್ರವರ್ತಿ ಔಟ್​ ಆಗಿದ್ದಾರೆ.

ಪ್ರಿಯಾಂಕಾ ಎಲಿಮಿನೇಟ್​ ಆದಾಗ ಚಕ್ರವರ್ತಿ ಚಂದ್ರಚೂಡ್​ ನಡೆದುಕೊಂಡಿದ್ದ ರೀತಿ ಅನೇಕರಿಗೆ ಇಷ್ಟವಾಗಿರಲಿಲ್ಲ. ಅವರು ಪ್ರಿಯಾಂಕಾಗೆ ಅಶ್ಲೀಲ ಸನ್ನೆ ತೋರಿದ್ದರು. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕಾರಣಕ್ಕೆ ಇವರು ಕಡಿಮೆ ವೋಟ್​ ಪಡೆದು ಔಟ್​ ಆಗಿದ್ದಾರೆ. ಈ ಮೂಲಕ ಬಿಗ್​ ಬಾಸ್​ ಮನೆಯ ಸ್ಪರ್ಧಿಗಳ ಸಂಖ್ಯೆ 8ಕ್ಕೆ ಇಳಿಕೆ ಆಗಿದೆ.

ಸದ್ಯ ಬಿಗ್​ ಬಾಸ್​ ಮನೆಯಲ್ಲಿ ಅರವಿಂದ್​ ಕೆ.ಪಿ, ಮಂಜು ಪಾವಗಡ, ಪ್ರಶಾಂತ್​ ಸಂಬರಗಿ, ಶಮಂತ್​ ಬ್ರೋ ಗೌಡ, ದಿವ್ಯಾ ಉರುಡುಗ, ದಿವ್ಯಾ ಸುರೇಶ್​, ವೈಷ್ಣವಿ ಹಾಗೂ ಶುಭಾ ಪೂಂಜಾ ಆಟ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ಎಲಿಮಿನೇಷನ್​: ತೆರೆಯಿತು ಬಾಗಿಲು; ಬಿಕ್ಕಿ ಬಿಕ್ಕಿ ಅತ್ತ ಪ್ರಶಾಂತ್​ ಸಂಬರಗಿ

‘ಆ ಕೈಸನ್ನೆ ತೋರಿಸಿದ್ದಕ್ಕೆ ಕ್ಷಮೆ ಕೇಳುತ್ತೇನೆ’; ಪ್ರಿಯಾಂಕಾ ತಿಮ್ಮೇಶ್​ ಬಳಿ ಶಿರಬಾಗಿ ಕ್ಷಮೆ ಕೇಳಿದ ಚಕ್ರವರ್ತಿ ಚಂದ್ರಚೂಡ್​

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?