‘ಆ ಕೈಸನ್ನೆ ತೋರಿಸಿದ್ದಕ್ಕೆ ಕ್ಷಮೆ ಕೇಳುತ್ತೇನೆ’; ಪ್ರಿಯಾಂಕಾ ತಿಮ್ಮೇಶ್​ ಬಳಿ ಶಿರಬಾಗಿ ಕ್ಷಮೆ ಕೇಳಿದ ಚಕ್ರವರ್ತಿ ಚಂದ್ರಚೂಡ್​

‘ಆ ಕೈಸನ್ನೆ ತೋರಿಸಿದ್ದಕ್ಕೆ ಕ್ಷಮೆ ಕೇಳುತ್ತೇನೆ’; ಪ್ರಿಯಾಂಕಾ ತಿಮ್ಮೇಶ್​ ಬಳಿ ಶಿರಬಾಗಿ ಕ್ಷಮೆ ಕೇಳಿದ ಚಕ್ರವರ್ತಿ ಚಂದ್ರಚೂಡ್​
‘ಆ ಕೈಸನ್ನೆ ತೋರಿಸಿದ್ದಕ್ಕೆ ಕ್ಷಮೆ ಕೇಳುತ್ತೇನೆ’; ಪ್ರಿಯಾಂಕಾ ತಿಮ್ಮೇಶ್​ ಬಳಿ ಶಿರಬಾಗಿ ಕ್ಷಮೆ ಕೇಳಿದ ಚಕ್ರವರ್ತಿ ಚಂದ್ರಚೂಡ್​

ಚಕ್ರವರ್ತಿ ಅವರು ಪ್ರಿಯಾಂಕಾಗೆ ಮಧ್ಯ ಬೆರಳು ತೋರಿಸಿದ್ದರು. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಈಗ ಈ ಬಗ್ಗೆ ಚಕ್ರವರ್ತಿ ಬಹಿರಂಗ ಕ್ಷಮೆ ಯಾಚಿಸಿದ್ದಾರೆ.

TV9kannada Web Team

| Edited By: Rajesh Duggumane

Jul 26, 2021 | 2:51 PM

ಪ್ರಿಯಾಂಕಾ ತಿಮ್ಮೇಶ್​ ಅವರು ಬಿಗ್​ ಬಾಸ್​ನಿಂದ ಎಲಿಮಿನೇಟ್​ ಆಗುವುದಕ್ಕೂ ಮೊದಲು ಚಕ್ರವರ್ತಿ ಚಂದ್ರಚೂಡ್ ಅವರನ್ನು ನಾಮಿನೇಟ್​ ಮಾಡಿದ್ದರು. ಇದು ಚಕ್ರವರ್ತಿ ಆಕ್ರೋಶಕ್ಕೆ ಕಾರಣವಾಗಿತ್ತು. ಅಷ್ಟೇ ಅಲ್ಲ ಅವರು ಪ್ರಿಯಾಂಕಾಗೆ ಮಧ್ಯ ಬೆರಳು ತೋರಿಸಿದ್ದರು. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಈಗ ಈ ಬಗ್ಗೆ ಚಕ್ರವರ್ತಿ ಬಹಿರಂಗ ಕ್ಷಮೆ ಯಾಚಿಸಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್​ ಅಶ್ಲೀಲ ಸನ್ನೆ ತೋರಿಸಿದ ಬಗ್ಗೆ ಸುದೀಪ್​ ಕ್ಲಾಸ್​ ತೆಗೆದುಕೊಂಡಿದ್ದರು. ‘ಆ ಬೆರಳನ್ನು ತೋರಿಸಿದ್ರೆ ಜಗಳ ನಡೆಯುತ್ತೆ. ಒಂದು ಹುಡುಗಿಗೆ ತೋರಿಸೋದು ಎಷ್ಟು ಸರಿ? ಮಾನ-ಮರ್ಯಾದೆ ಹರಾಜು ಹಾಕ್ಕೊಳೋಕೆ ಒಳಗೆ ಹೋಗಿದ್ದೀನಿ ಎಂದರೆ ಅದನ್ನು ನಾವು ತಡೆಯೋಕೆ ಆಗಲ್ಲ. ಹೆಣ್ಮಕ್ಳಿಗೆ ಗೌರವ ಕೊಡ್ತೀನಿ ಎಂದು ನೀವು ಹೇಳ್ತೀರ. ಹಾಗೆ ಹೇಳಿ ಹೀಗೆ ಮಾಡಿದರೆ ಎಷ್ಟು ಕೆಟ್ಟದಾಗಿ ಕಾಣಬಹುದು ಅಂತ ನೀವೇ ಆಲೋಚಿಸಿ. ನಿಮಗೆ ಅವಕಾಶ ಸಿಕ್ಕಿದೆ. ಆದ್ರೆ, ಅದನ್ನು ಸದ್ಬಳಕೆ ಮಾಡಿಕೊಂಡಿಲ್ಲ. ನೀವು ಮಾತು ಉಳಿಸಿಕೊಂಡಿಲ್ಲ. ನನಗೆ ತುಂಬಾ ನೋವಾಯ್ತು’ ಎಂದು ಸುದೀಪ್​ ಹೇಳಿದ್ದರು​.

ಇದಾದ ನಂತರದಲ್ಲಿ ಚಕ್ರವರ್ತಿಗೆ ತಪ್ಪಿನ ಅರಿವಾಗಿದೆ. ‘ಪ್ರೀತಿ ಹಾಗೂ ಅಭಿಮಾನದಿಂದ ಆ ಹುಡುಗಿಯನ್ನು ನೋಡಿಕೊಂಡಿದ್ದೇನೆ. ಈ ವೇದಿಕೆಯಲ್ಲಿ ಆ ಕೈಸನ್ನೆ ಮಾಡಬಾರದಿತ್ತು. ನನ್ನ ಗುಣವಲ್ಲ ಅದು. ಸ್ವಲ್ಪ ಸಿಟ್ಟಿನಲ್ಲಿ ಆ ಕೈ ಸನ್ನೆ ತೋರಿಸಿದ್ದೇನೆ ಅಷ್ಟೆ. ಈ ವಿಚಾರಕ್ಕೆ ನಾನು ನಿಮ್ಮಲ್ಲಿ ಕ್ಷಮೆಯಾಚಿಸುತ್ತೇನೆ. ಅದು ತುಂಬಾ ಕೆಟ್ಟದಾಗಿ ಕಂಡಿರುತ್ತೆ. ಉದ್ದೇಶಪೂರ್ವಕವಾಗಿ ನಾನು ಆ ರೀತಿ ಮಾಡಿಲ್ಲ. ಶಿರಬಾಗಿ ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ. ದಯವಿಟ್ಟು ಕ್ಷಮಿಸಿ’ ಎಂದು ಕೋರಿದ್ದಾರೆ ಚಕ್ರವರ್ತಿ. ಈ ಕ್ಷಮೆಯನ್ನು ಪ್ರಿಯಾಂಕಾ ಮನ್ನಿಸುತ್ತಾರೋ ಅಥವಾ ಇಲ್ಲವೋ ಎಂಬುದು ಸದ್ಯದ ಕುತೂಹಲ.

ಕಳೆದ ವಾರ ಯಾರೂ ಎಲಿಮಿನೇಟ್​ ಆಗಿಲ್ಲ. ನಾಮಿನೇಟ್​ ಆದವರ ಪೈಕಿ ಈ ವಾರದಲ್ಲಿ ಒಬ್ಬರು  ಎಲಿಮಿನೇಟ್​ ಆಗುತ್ತಿದ್ದಾರೆ. ನಾಮಿನೇಟ್​ ಆದ ಶಮಂತ್​, ದಿವ್ಯಾ ಉರುಡುಗ, ಶುಭಾ ಪೂಂಜಾ, ಚಕ್ರವರ್ತಿ ಚಂದ್ರಚೂಡ್​ ಹಾಗೂ ಪ್ರಶಾಂತ್​ ಇವರಲ್ಲಿ ಒಬ್ಬರು ಯಾವುದೇ ಕ್ಷಣದಲ್ಲಿ ಬೇಕಿದ್ದರೂ ಬಿಗ್​ ಬಾಸ್ ಮನೆಯಿಂದ ಹೊರ ಹೋಗಬಹುದು.

ಇದನ್ನೂ ಓದಿ: ‘ನೀವು ನನ್ನನ್ನು ಸ್ತ್ರೀ ನಿಂದಕ ಎಂಬಂತೆ ಮಾಡಿದ್ದೀರಿ’; ಸುದೀಪ್​ ಮೇಲೆಯೇ ಗೂಬೆ ಕೂರಿಸಿದ ಚಕ್ರವರ್ತಿ, ಕಿಚ್ಚ ಕೊಟ್ಟ ಉತ್ತರ ಏನು?

ಪ್ರಿಯಾಂಕಾಗೆ ಅಶ್ಲೀಲ ಸನ್ನೆ ತೋರಿಸಿದ ಚಕ್ರವರ್ತಿ; ಬಿಗ್​ ಬಾಸ್​ ನೀಡ್ತೀರೋ ಶಿಕ್ಷೆ ಏನು?

Follow us on

Related Stories

Most Read Stories

Click on your DTH Provider to Add TV9 Kannada