‘ನೀವು ನನ್ನನ್ನು ಸ್ತ್ರೀ ನಿಂದಕ ಎಂಬಂತೆ ಮಾಡಿದ್ದೀರಿ’; ಸುದೀಪ್​ ಮೇಲೆಯೇ ಗೂಬೆ ಕೂರಿಸಿದ ಚಕ್ರವರ್ತಿ, ಕಿಚ್ಚ ಕೊಟ್ಟ ಉತ್ತರ ಏನು?

ಸುದೀಪ್​ ವಿರುದ್ಧ ಚಕ್ರವರ್ತಿ ಗಂಭೀರ ಆರೋಪ ಮಾಡಿದ್ದಾರೆ. ಇದನ್ನು ಕೇಳಿದ ಸುದೀಪ್ ಕೂಲ್​ ಆಗಿಯೇ ತಿರುಗೇಟು ನೀಡಿದ್ದಾರೆ.

‘ನೀವು ನನ್ನನ್ನು ಸ್ತ್ರೀ ನಿಂದಕ ಎಂಬಂತೆ ಮಾಡಿದ್ದೀರಿ’; ಸುದೀಪ್​ ಮೇಲೆಯೇ ಗೂಬೆ ಕೂರಿಸಿದ ಚಕ್ರವರ್ತಿ, ಕಿಚ್ಚ ಕೊಟ್ಟ ಉತ್ತರ ಏನು?
‘ನೀವು ನನ್ನನ್ನು ಸ್ತ್ರೀ ನಿಂದಕ ಎಂಬಂತೆ ಮಾಡಿದ್ದೀರಿ’; ಸುದೀಪ್​ ಮೇಲೆಯೇ ಗೂಬೆ ಕೂರಿಸಿದ ಚಕ್ರವರ್ತಿ,  ಕಿಚ್ಚ ಕೊಟ್ಟ ಉತ್ತರ ಏನು?

ಸುದೀಪ್ ಹೇಳಿದ್ದ ವಿಚಾರವನ್ನು ಚಕ್ರವರ್ತಿ ಚಂದ್ರಚೂಡ್​ ಅವರು ತಿರುಚಿ ಹೇಳಿದ್ದರು. ಇದನ್ನು ವಾರಾಂತ್ಯದಲ್ಲಿ ಸುದೀಪ್​ ಚರ್ಚೆಗೆ ತೆಗೆದುಕೊಂಡರು. ಪದೇಪದೇ ಚಕ್ರವರ್ತಿ ಅವರದ್ದೇ ತಪ್ಪು ಎಂದು ಸುದೀಪ್ ಹೇಳಿದರು. ಇದು ಚಕ್ರವರ್ತಿ ಕೋಪಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ, ಸುದೀಪ್​ ವಿರುದ್ಧ ಚಕ್ರವರ್ತಿ ಗಂಭೀರ ಆರೋಪ ಮಾಡಿದ್ದಾರೆ. ಇದನ್ನು ಕೇಳಿದ ಸುದೀಪ್ ಕೂಲ್​ ಆಗಿಯೇ ತಿರುಗೇಟು ನೀಡಿದ್ದಾರೆ.

‘ಬಿಗ್​ ಬಾಸ್​ ಮನೆಯಲ್ಲಿ ಪದೇಪದೇ ನನ್ನನ್ನು ಟಾರ್ಗೆಟ್​ ಮಾಡಲಾಗುತ್ತಿದೆ. ನನ್ನನ್ನು ಸುದೀಪ್ ಸ್ತ್ರೀ ಪೀಡಕ ಎಂಬಂತೆ ಮಾಡಿದ್ದಾರೆ. ನಾನು ಟಾರ್ಗೆಟ್​ ಆಗುತ್ತಿದ್ದೇನೆ’ ಎಂದು ಬ್ರೇಕ್​ ಸಂದರ್ಭದಲ್ಲಿ ಚಕ್ರವರ್ತಿ ಸ್ಪರ್ಧಿಗಳ ಜತೆ ಅಭಿಪ್ರಾಯ ಹಂಚಿಕೊಂಡರು. ಬ್ರೇಕ್​ ತೆಗೆದುಕೊಂಡ ಬಂದ ನಂತರದಲ್ಲಿ ಚಕ್ರವರ್ತಿಯನ್ನು ಸುದೀಪ್​ ಹೊಗಳಿದರು.  ಆದರೆ, ಈ ಹೊಗಳಿಕೆ ಚಕ್ರವರ್ತಿಗೆ ಇಷ್ಟವಾಗಿಲ್ಲ.

‘ಪ್ರತಿ ವಾರವೂ ನನಗೊಂದು ಎಪಿಸೋಡ್​ ಮೀಸಲಿಡುತ್ತಿದ್ದೀರಿ. ನೀವು ನನ್ನನ್ನು ಸ್ತ್ರೀ ನಿಂದಕ ಎಂಬಂತೆ ಮಾಡಿದ್ದೀರಿ. ಅಂತೂ ಈಗ ನಾಲ್ಕು ಸಾಲು​ ಒಳ್ಳೆದನ್ನು ಹೇಳಿದ್ದೀರಿ. ಸಾಧು ಸಂತರ ಮಧ್ಯೆ ನಾನು ಕ್ರಿಮಿನಲ್​ ಆಗಿದ್ದೇನೆ’ ಎಂದು ದೂರಿದರು ಚಕ್ರವರ್ತಿ.

ಇದಕ್ಕೆ ಕೊಟ್ಟ ಸುದೀಪ್​ ಸಖತ್​ ಖಡಕ್​ ಆಗಿತ್ತು. ‘ನೀವು ಹೇಳಿರೋದನ್ನೇ, ಮಾಡಿದ್ದನ್ನೇ ನಾನು ಹೇಳಿದ್ದೀನಿ. ನಂದೇನಾದರೂ ಇದೆಯಾ? ಒಳ್ಳೇದನ್ನೂ ಹೇಳಿದ್ದೀನಿ. ನಿಮ್ಮ ಜ್ಞಾನಕ್ಕೆ ನಾನು ಫ್ಯಾನ್​ ಎಂದು ಹೇಳಿದೀನಿ. ಈ ಮನೆಯಲ್ಲಿ ಎಷ್ಟು ಜನಕ್ಕೆ ಇದನ್ನು ಹೇಳಿದ್ದೇನೆ? ನಿಮ್ಮಲ್ಲಿ ಒಳ್ಳೆತನ ಇದೆ. ಈ ವಾರ ಕೋಪ ಕಂಟ್ರೋಲ್​ ಮಾಡಿಕೊಂಡ್ರಿ. ಅದನ್ನು ಹೇಳ್ತಾ ಇದೀನಿ. ನೀವು ಕೊಟ್ಟಿರೋ ಬೇಜಾರನ್ನು ಬೇಜಾರಿಂದಲೇ ಹೇಳದೇ ತುಪ್ಪ ಹಚ್ಚಿ ಹೇಳಲಾ? ನಿಮ್ಮ ವೇದಿಕೆಯಿಂದ ನಾಲ್ಕು ಜನ ಕಲಿಯಲಿ ಅನ್ನೋದು ನನ್ನ ಅರ್ಥ’  ಎಂದು ಸುದೀಪ್ ತಿರುಗೇಟು ನೀಡಿದರು.

ಇದನ್ನೂ ಓದಿ:

‘ನಿಮಗೂ ಮಧ್ಯಬೆಟ್ಟು ತೋರಿಸೋಕೆ ಕಾಯುತ್ತಿದ್ದೇವೆ’; ಚಕ್ರವರ್ತಿ ಚಂದ್ರಚೂಡ್​ ಹೊರಹಾಕಲು ಆರಂಭವಾಗಿದೆ ಅಭಿಯಾನ

ಅಶ್ಲೀಲ ಸನ್ನೆ ಮಾಡಿ ಸಮತೋಲನದ ನೆಪ ಹೇಳಿದ ಚಕ್ರವರ್ತಿಗೆ ಸುದೀಪ್ ಸಖತ್​ ಕ್ಲಾಸ್​

Click on your DTH Provider to Add TV9 Kannada