‘ನೀವು ನಡೆದುಕೊಂಡ ರೀತಿ ನಿಮ್ಮ ವ್ಯಕ್ತಿತ್ವಕ್ಕೆ ಸೂಕ್ತವಲ್ಲ’; ಪಂಚಾಯ್ತಿಯಲ್ಲಿ ವೈಷ್ಣವಿಗೆ ಬುದ್ಧಿ ಹೇಳಿದ ಕಿಚ್ಚ ಸುದೀಪ್​

ಈ ವಾರ ವೈಷ್ಣವಿ ತಾಳ್ಮೆ ಕಳೆದುಕೊಂಡಿದ್ದರು. ಪ್ರಶಾಂತ್​ಗೆ ಕೈ ಎತ್ತಿ ಹೊಡೆಯೋಕೂ ಮುಂದಾಗಿದ್ದರು. ಈ ವಿಚಾರದಲ್ಲಿ ಕಿಚ್ಚ ಸುದೀಪ್​ ವೈಷ್ಣವಿಗೆ ಪಾಠ ಹೇಳಿದ್ದಾರೆ.

‘ನೀವು ನಡೆದುಕೊಂಡ ರೀತಿ ನಿಮ್ಮ ವ್ಯಕ್ತಿತ್ವಕ್ಕೆ ಸೂಕ್ತವಲ್ಲ’; ಪಂಚಾಯ್ತಿಯಲ್ಲಿ ವೈಷ್ಣವಿಗೆ ಬುದ್ಧಿ ಹೇಳಿದ ಕಿಚ್ಚ ಸುದೀಪ್​
ವೈಷ್ಣವಿ-ಸುದೀಪ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jul 25, 2021 | 2:15 PM

ಬಿಗ್​ ಬಾಸ್​ ಮನೆಯಲ್ಲಿ ವೈಷ್ಣವಿ ಗೌಡ ಯಾರ ತಂಟೆಗೂ ಅಷ್ಟಾಗಿ ಹೋಗುವುದಿಲ್ಲ. ಜಗಳವಾಡುವ ಪರಿಸ್ಥಿತಿ ಬಂದರೂ ಅದನ್ನು ತಿಳಿ ಗೊಳಿಸುವ ಕಲೆ ವೈಷ್ಣವಿಗೆ ಕರಗತವಾಗಿದೆ. ಹೀಗಾಗಿ ಬಿಗ್​ ಬಾಸ್​ ಮನೆಯಲ್ಲಿ ಯಾರ ಜತೆಗೂ ಅವರು ಜಗಳ ಮಾಡಿಕೊಂಡಿಲ್ಲ. ಆದರೆ ಈ ವಾರ ಅವರು ತಾಳ್ಮೆ ಕಳೆದುಕೊಂಡಿದ್ದರು. ಪ್ರಶಾಂತ್​ಗೆ ಕೈ ಎತ್ತಿ ಹೊಡೆಯೋಕೂ ಮುಂದಾಗಿದ್ದರು. ಈ ವಿಚಾರದಲ್ಲಿ ಕಿಚ್ಚ ಸುದೀಪ್​ ವೈಷ್ಣವಿಗೆ ಪಾಠ ಹೇಳಿದ್ದಾರೆ.

ಈ ವಾರ ಸ್ಪರ್ಧಿಗಳು ಬೆನ್ನಿಗೆ ಗೋಣಿಚೀಲ ಕಟ್ಟಿಕೊಂಡು ವೃತ್ತಗಳ ಒಳಗೆ ಓಡುವ ಟಾಸ್ಕ್​ ನೀಡಲಾಗಿತ್ತು. ಮುಂದಿನ ಸದಸ್ಯರ ಚೀಲದಲ್ಲಿರುವ ವಸ್ತುವನ್ನು ಖಾಲಿ ಮಾಡಬೇಕು. ಈ ವೇಳೆ ವೈಷ್ಣವಿ ಹಿಂದೆ ಇದ್ದ ಪ್ರಶಾಂತ್​ ಚೀಲವನ್ನು ಗಟ್ಟಿಯಾಗಿ ಎಳೆದಿದ್ದರು. ಇದು ವೈಷ್ಣವಿ ಅವರ ಕೋಪಕ್ಕೆ ಕಾರಣವಾಗಿತ್ತು. ಹೀಗಾಗಿ, ಅವರು ಸಿಟ್ಟಿನಿಂದ ಪ್ರಶಾಂತ್​ ಮೇಲೆ ಕೈ ಎತ್ತಿದ್ದಾರೆ. ವೈಷ್ಣವಿ ಅವರ ನಡೆ ವೀಕ್ಷಕರಲ್ಲಿ ಅಚ್ಚರಿ ಮೂಡಿಸಿತ್ತು. ಈ ವಿಚಾರದಲ್ಲಿ ಸುದೀಪ್​ ಕೂಡ ಮಾತನಾಡಿದ್ದಾರೆ.

‘ವೈಷ್ಣವಿ ಅವರೇ ಅದೊಂದು ಟಾಸ್ಕ್​. ಆದರೆ, ನೀವೇಕೆ ಅಷ್ಟು ಗಂಭೀರವಾದಿರಿ ಎಂಬುದು ನನಗೆ ಗೊತ್ತಾಗಲಿಲ್ಲ. ಅದು ಅಗ್ರೆಸ್ಸಿವ್​ ಆಗಿ ಆಡುವ ಟಾಸ್ಕ್​. ಅದನ್ನು ಹಾಗೆಯೇ ಆಡಬೇಕು. ಈಗ ಕಬ್ಬಡ್ಡಿಯನ್ನು ಆರಾಮಾಗಿ ಆಡಬೇಕು ಅಂದರೆ ಆಗಲ್ಲ. ನಿಮಗೆ ಕೊಟ್ಟ ಆ ಟಾಸ್ಕ್​ಅನ್ನು ಬೇರೆ ರೀತಿ ಆಡಬೇಕು ಎಂದರೆ ಅದು ಸಾಧ್ಯವಿತ್ತೇ? ಹಾಗೆ ಬೇರೆ ಮಾರ್ಗ ಇತ್ತು ಎಂದಾದರೆ ನಮಗೆ ಹೇಳಿ ನೋಡೋಣ. ನಾವು ಅದನ್ನು ಸ್ವೀಕರಿಸುತ್ತೇವೆ’ ಎಂದರು ಸುದೀಪ್​.

ಇದಕ್ಕೆ ವೈಷ್ಣವಿ ಬೇಸರ ಮಾಡಿಕೊಂಡು ಕ್ಷಮೆ ಕೇಳಿದರು. ಅದಕ್ಕೆ ಸುದೀಪ್​, ‘ನೀವು ಕ್ಷಮೆ ಕೇಳೋದು ಬೇಡ. ಆಟವಾಡುವಾಗ ಸಿಟ್ಟಿನಲ್ಲಿ ಆ ರೀತಿ ಆಗುತ್ತದೆ ನಿಜ. ನಂತರ ನೀವು ಹೇಗೆ ನಡೆದುಕೊಳ್ಳುತ್ತೀರಿ ಎನ್ನುವುದರ ಮೇಲೆ ನಿಮ್ಮ ವೈಕ್ತಿತ್ವ ನಿರ್ಧಾರವಾಗುತ್ತದೆ. ನೀವು ಬಿಗ್​ ಬಾಸ್ ಮನೆಯಲ್ಲಿ ಈ ವಾರ ನಡೆದುಕೊಂಡಿದ್ದು ನಿಮ್ಮ ವ್ಯಕ್ತಿತ್ವಕ್ಕೆ ಸೂಕ್ತವಲ್ಲ’ ಎಂದು ಕಿವಿ ಮಾತು ಹೇಳಿದರು.

ಇದನ್ನೂ ಓದಿ: ‘ನೀವು ನನ್ನನ್ನು ಸ್ತ್ರೀ ನಿಂದಕ ಎಂಬಂತೆ ಮಾಡಿದ್ದೀರಿ’; ಸುದೀಪ್​ ಮೇಲೆಯೇ ಗೂಬೆ ಕೂರಿಸಿದ ಚಕ್ರವರ್ತಿ, ಕಿಚ್ಚ ಕೊಟ್ಟ ಉತ್ತರ ಏನು?

ವೈಷ್ಣವಿ ಕಣ್ಣಲ್ಲಿ ನೀರು ಹಾಕಿಸಿದ ಪ್ರಶಾಂತ್​; ಫಿನಾಲೆಗೂ ಮೊದಲೇ ಫ್ರೆಂಡ್​ಶಿಪ್​ನಲ್ಲಿ ಬ್ರೇಕಪ್?

Published On - 2:14 pm, Sun, 25 July 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ