AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈಷ್ಣವಿ ಕಣ್ಣಲ್ಲಿ ನೀರು ಹಾಕಿಸಿದ ಪ್ರಶಾಂತ್​; ಫಿನಾಲೆಗೂ ಮೊದಲೇ ಫ್ರೆಂಡ್​ಶಿಪ್​ನಲ್ಲಿ ಬ್ರೇಕಪ್?

ಬಿಗ್​ ಬಾಸ್​ ಮನೆಯಲ್ಲಿ ಪ್ರತೀ ಶುಕ್ರವಾರ ಕಳಪೆ ಮತ್ತು ಅತ್ಯುತ್ತಮ ಎನ್ನುವ ಬಿರುದನ್ನು ಒಂದು ಸ್ಪರ್ಧಿಗೆ ನೀಡಲಾಗುತ್ತದೆ. ಈ ವಾರವೂ ಈ ಆಯ್ಕೆ ನಡೆದಿದೆ. ಪ್ರಶಾಂತ್​ ಸಂಬರಗಿ ಅತಿ ಹೆಚ್ಚು ವೋಟ್​ ಬಿದ್ದಿದ್ದರಿಂದ​ ಕಳಪೆ ಪಟ್ಟ ಅವರಿಗೆ ಸಿಕ್ಕಿದೆ.

ವೈಷ್ಣವಿ ಕಣ್ಣಲ್ಲಿ ನೀರು ಹಾಕಿಸಿದ ಪ್ರಶಾಂತ್​; ಫಿನಾಲೆಗೂ ಮೊದಲೇ ಫ್ರೆಂಡ್​ಶಿಪ್​ನಲ್ಲಿ ಬ್ರೇಕಪ್?
ವೈಷ್ಣವಿ ಕಣ್ಣಲ್ಲಿ ನೀರು ಹಾಕಿಸಿದ ಪ್ರಶಾಂತ್​; ಫಿನಾಲೆಗೂ ಮೊದಲೇ ಫ್ರೆಂಡ್​ಶಿಪ್​ನಲ್ಲಿ ಬ್ರೇಕಪ್?
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Jul 24, 2021 | 5:40 PM

Share

‘ಬಿಗ್​ ಬಾಸ್​ ಮನೆಯಲ್ಲಿ ನಾನು ಅತಿ ಹೆಚ್ಚು ನಂಬೋದು ವೈಷ್ಣವಿಯನ್ನು. ಅವರನ್ನು ನಾನು ಬೇರೆ ಸ್ಥಾನದಲ್ಲಿಟ್ಟುದ್ದೇನೆ’ ಎಂದು ಪ್ರಶಾಂತ್​ ಸಂಬರಗಿ ಕಳೆದ ವಾರದಲ್ಲಿ ಹೇಳಿದ್ದರು. ಈ ಮೂಲಕ ವೈಷ್ಣವಿ ಬಗ್ಗೆ ವಿಶೇಷ ಗೌರವ ಇದೆ ಎಂದು ಹೇಳಿದ್ದರು. ಆದರೆ, ಈ ವಾರ ಅವರ ವಿರುದ್ಧವೇ ಪ್ರಶಾಂತ್​ ಹರಿಹಾಯ್ದಿದ್ದಾರೆ. ಇದು ವೈಷ್ಣವಿಗೆ ಸಾಕಷ್ಟು ಬೇಸರ ತರಿಸಿದೆ.

ಬಿಗ್​ ಬಾಸ್​ ಮನೆಯಲ್ಲಿ ಪ್ರತೀ ಶುಕ್ರವಾರ ಕಳಪೆ ಮತ್ತು ಅತ್ಯುತ್ತಮ ಎನ್ನುವ ಬಿರುದನ್ನು ಒಂದು ಸ್ಪರ್ಧಿಗೆ ನೀಡಲಾಗುತ್ತದೆ. ಈ ವಾರವೂ ಈ ಆಯ್ಕೆ ನಡೆದಿದೆ. ಪ್ರಶಾಂತ್​ ಸಂಬರಗಿ ಅತಿ ಹೆಚ್ಚು ವೋಟ್​ ಬಿದ್ದಿದ್ದರಿಂದ​ ಕಳಪೆ ಪಟ್ಟ ಅವರಿಗೆ ಸಿಕ್ಕಿದೆ. ಈ ಮೂಲಕ ಅವರು ನಾಲ್ಕು ಬಾರಿ ಬಿಗ್​ ಬಾಸ್​ನಲ್ಲಿ ಜೈಲಿಗೆ ತೆರಳಿದಂತಾಗಿದೆ.

ಪ್ರಶಾಂತ್​ ಸಂಬರಗಿ ಈ ಬಾರಿ ನೀಡಿದ ನೀನಾ ನಾನಾ ಟಾಸ್ಕ್​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಸೀಮಿತ ಮಂದಿ ಆಡುವ ಆಟದಲ್ಲಿಯೂ ನಾನು ಆಡುತ್ತೇನೆ ಎಂದು ಮುಂದೆ ಬಂದಿದ್ದ ಪ್ರಶಾಂತ್​ ಅಂಕ ಗಳಿಸದೇ ಸೋತಿದ್ದರು. ಇದು ಮನೆ ಮಂದಿಗೆ ಇಷ್ಟವಾಗಿಲ್ಲ. ಈ ಕಾರಣವನ್ನು ಇಟ್ಟುಕೊಂಡು ಮನೆಯವರು ಪ್ರಶಾಂತ್​ಗೆ ಕಳಪೆ ಪಟ್ಟ ನೀಡಿದರು.

ವೈಷ್ಣವಿ ಕೂಡ ಚಕ್ರವರ್ತಿ ಹೆಸರನ್ನು ತೆಗೆದುಕೊಂಡರು. ಕೆಲ ಗೇಮ್​ಗಳಲ್ಲಿ ಚಕ್ರವರ್ತಿ ಇನ್ನೂ ಚೆನ್ನಾಗಿ ಆಡಬಹುದಿತ್ತು. ಅವರ ಶ್ರಮ ಕಡಿಮೆ ಆಯಿತು ಎಂದು ನನಗನ್ನಿಸಿತು ಎಂದರು. ಇದು ಚಕ್ರವರ್ತಿಗೆ ಬೇಸರ ತರಿಸಿದೆ. ‘ಗೇಮ್​ ಆಡುವಾಗ ವೈಷ್ಣವಿ ಅವರಿಂದ ನನಗೆ ತೊಂದರೆ ಆಗಿದೆ. ಆದಾಗ್ಯೂ ನಾನು ಆ ವಿಚಾರ ತೆಗೆದಿಲ್ಲ. ಈಗ ಅವರದೇ ತಪ್ಪಿದ್ದರು ಅದನ್ನು ನನ್ನ ಮೇಲೆ ಹಾಕುತ್ತಾರೆ. ನನಗೆ ಕಳಪೆಪಟ್ಟ ನೀಡುತ್ತಾರೆ. ಇದೆಷ್ಟು ಸರಿ?’ ಎಂದು ಚಕ್ರವರ್ತಿ ಪ್ರಶ್ನೆ ಮಾಡಿದರು. ಈ ವೇಳೆ ಕೆಲ ಖಾರದ ಮಾತುಗಳನ್ನು ಕೂಡ ಆಡಿದರು.

ಈ ವಿಚಾರ ವೈಷ್ಣವಿಗೆ ಬೇಸರ ತರಿಸಿದೆ. ಅಲ್ಲದೆ, ಅವರು ಕೋಪದಿಂದ ಕಣ್ಣೀರು ಹಾಕಿದ್ದಾರೆ. ಅವರು ತುಂಬಾನೇ ಅಪ್ಸೆಟ್​ ಆಗಿದ್ದರು ಎನ್ನುವ ವಿಚಾರ ಎದ್ದು ಕಾಣುತ್ತಿತ್ತು. ಈಗ ಇಬ್ಬರ ನಡುವಿನ ಗೆಳೆತನ ಮುರಿದು ಬೀಳಲಿದೆಯೇ ಅನ್ನೋದು ಸದ್ಯದ ಕುತೂಹಲ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಿಂದ ಶಮಂತ್​ ಬ್ರೋ ಗೌಡ ಎಲಿಮಿನೇಟ್? ಅನುಮಾನ ಹುಟ್ಟುಹಾಕಿದ ಆ ಒಂದು ಫೋಟೋ

‘ಮುಂದಿನ ವರ್ಷ ಮದುವೆ, ನನ್ನದು ಅರೇಂಜ್​ ಮ್ಯಾರೇಜ್’​; ವಿವಾಹದ ಬಗ್ಗೆ ಮತ್ತೊಮ್ಮೆ ಮೌನ ಮುರಿದ ವೈಷ್ಣವಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ