ಕರಣ್​ ಜೋಹರ್ ಹೆಗಲಿಗೆ ಹಿಂದಿ ಬಿಗ್​ ಬಾಸ್​ ನಿರೂಪಣೆ; ಹಾಗಾದರೆ, ಸಲ್ಮಾನ್​ ಖಾನ್​ ಕಥೆ ಏನು?

ಸಾಮಾನ್ಯವಾಗಿ ಬಿಗ್​ ಬಾಸ್ ಪ್ರತೀ ಸೀಸನ್​ 100ರಿಂದ 120 ದಿನಗಳ ಕಾಲ ನಡೆಯುತ್ತದೆ. ಅಂದರೆ ನಾಲ್ಕು ತಿಂಗಳಿಗೆ ಬಿಗ್​ ಬಾಸ್​ ಪೂರ್ಣಗೊಳ್ಳುತ್ತದೆ. ಆದರೆ, ಈಗ ಇದನ್ನು ಎರಡು ತಿಂಗಳು ಹೆಚ್ಚುವರಿಯಾಗಿ ನಡೆಸೋಕೆ ವಾಹಿನಿ ನಿರ್ಧರಿಸಿದೆ.

ಕರಣ್​ ಜೋಹರ್ ಹೆಗಲಿಗೆ ಹಿಂದಿ ಬಿಗ್​ ಬಾಸ್​ ನಿರೂಪಣೆ; ಹಾಗಾದರೆ, ಸಲ್ಮಾನ್​ ಖಾನ್​ ಕಥೆ ಏನು?
ಕರಣ್ ಜೋಹರ್

‘ಹಿಂದಿ ಬಿಗ್​ ಬಾಸ್​ ಸೀಸನ್​ 15’ ಆಗಸ್ಟ್​ 8ರಿಂದ ಆರಂಭಗೊಳ್ಳುತ್ತಿದೆ. ವೂಟ್​ ಆ್ಯಪ್​ಗೆ ಈ ಬಾರಿ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ. ಹೀಗಾಗಿ, ಬಿಗ್​ ಬಾಸ್​ ಒಟಿಟಿಯನ್ನು ವೂಟ್​ ಪರಿಚಯಿಸಿದೆ. ಮೊದಲು ಆರು ವಾರದ ಎಪಿಸೋಡ್​ಗಳು ವೂಟ್​ನಲ್ಲಿ ಮಾತ್ರ ಪ್ರಸಾರವಾಗಲಿದ್ದು ನಂತರ ಟಿವಿಗೆ ಶಿಫ್ಟ್​ ಆಗಲಿದೆ. ಒಟಿಟಿ ಶೋಅನ್ನು ನಡೆಸಿಕೊಡೋಕೆ ಖ್ಯಾತ ಬಾಲಿವುಡ್​ ನಿರ್ಮಾಪಕ ಕರಣ್​ ಜೋಹರ್ ಆಗಮಿಸಿದ್ದಾರೆ. ಟಿವಿಯಲ್ಲಿ ಪ್ರಸಾರವಾಗುವ ಶೋ ಅನ್ನು ಸಲ್ಮಾನ್ ಖಾನ್​ ನಡೆಸಿಕೊಡಲಿದ್ದಾರೆ. 

ಸಾಮಾನ್ಯವಾಗಿ ಬಿಗ್​ ಬಾಸ್ ಪ್ರತೀ ಸೀಸನ್​ 100ರಿಂದ 120 ದಿನಗಳ ಕಾಲ ನಡೆಯುತ್ತದೆ. ಅಂದರೆ ನಾಲ್ಕು ತಿಂಗಳಿಗೆ ಬಿಗ್​ ಬಾಸ್​ ಪೂರ್ಣಗೊಳ್ಳುತ್ತದೆ. ಆದರೆ, ಈಗ ಇದನ್ನು ಎರಡು ತಿಂಗಳು ಹೆಚ್ಚುವರಿಯಾಗಿ ನಡೆಸೋಕೆ ವಾಹಿನಿ ನಿರ್ಧರಿಸಿದೆ. ಇದು ತುಂಬಾನೇ ದೀರ್ಘ ಎನಿಸಿರುವುದರಿಂದ ಮೊದಲ ಆರು ವಾರ ಈ ಶೋ ಅನ್ನು ಒಟಿಟಿಯಲ್ಲಿ ಪ್ರಸಾರ ಮಾಡುವ ನಿರ್ಧಾರಕ್ಕೆ ಬರಲಾಗಿದೆ. ಈಗ ಈ ಶೋ ಅನ್ನು ಕರಣ್​ ನಡೆಸಿಕೊಡಲಿದ್ದಾರೆ.

ಕರಣ್​ ಅವರನ್ನು ಈ ಶೋಗೆ ಆಯ್ಕೆ ಮಾಡಿಕೊಳ್ಳೋಕೂ ಒಂದು ಕಾರಣವಿದೆ. ಕರಣ್​ ಜೋಹರ್​ ಈಗಾಗಲೇ ಸಾಕಷ್ಟು ಶೋಗಳನ್ನು ಅದ್ಭುತವಾಗಿ ನಡೆಸಿಕೊಟ್ಟಿದ್ದಾರೆ. ಕಾಫಿ ವಿತ್​ ಕರಣ್​ಗೆ ದೊಡ್ಡ ಮಟ್ಟದ ವೀಕ್ಷಕರ ವಲಯ ಇದೆ. ಹೀಗಾಗಿ, ಬಿಗ್​ ಬಾಸ್​ ಒಟಿಟಿಯನ್ನು ಅವರು ನಡೆಸಿಕೊಟ್ಟರೆ ವೀಕ್ಷಕರನ್ನು ಸೆಳೆದುಕೊಳ್ಳಬಹುದು ಎಂಬುದು ವಾಹಿನಿಯ ಲೆಕ್ಕಾಚಾರ.

‘ಬಿಗ್​ ಬಾಸ್​ಗೆ ನಾನುನ ನನ್ನ ತಾಯಿ ದೊಡ್ಡ ಅಭಿಮಾನಿಗಳಾಗಿದ್ದೇವೆ ​​​. ಆದ್ದರಿಂದ, ಒಂದೇ ಒಂದು ದಿನವೂ ಬಿಗ್​ ಬಾಸ್​ ಸಂಚಿಕೆ ಮಿಸ್​ ಮಾಡಿಕೊಂಡಿಲ್ಲ. ವೀಕ್ಷಕನಾಗಿ ಇದು ಸಾಕಷ್ಟು ಮನರಂಜನೆ ನೀಡಿದೆ. ನಾನು ದಶಕಗಳಿಂದ ಈ ಶೋ ಎಂಜಾಯ್​ ಮಾಡುತ್ತಿದ್ದೇನೆ. ಈಗ ಬಿಗ್​ ಬಾಸ್​ ಒಟಿಟಿ ಶೋ ನಡೆಸಿಕೊಡುತ್ತಿರುವುದಕ್ಕೆ ಖುಷಿ ಆಗಿದೆ. ನನ್ನ ತಾಯಿಯ ಕನಸು ಈಗ ಈಡೇರುತ್ತಿದೆ’ ಎಂದಿದ್ದಾರೆ ಕರಣ್​.

ಇದನ್ನೂ ಓದಿ: ಈ ವಾರ ಡಬಲ್​ ಎಲಿಮಿನೇಷನ್? ಸೂಚನೆ ಕೊಟ್ಟ ಬಿಗ್​ ಬಾಸ್​; ಔಟ್​ ಆಗೋರು ಯಾರು?

ರಣವೀರ್​ ಸಿಂಗ್-ಆಲಿಯಾ ಭಟ್​ ಹೊಸ ಪ್ರೇಮ್​ ಕಹಾನಿ; ಇದರ ಸೂತ್ರಧಾರ ಕರಣ್​ ಜೋಹರ್​

Click on your DTH Provider to Add TV9 Kannada