ರಣವೀರ್​ ಸಿಂಗ್-ಆಲಿಯಾ ಭಟ್​ ಹೊಸ ಪ್ರೇಮ್​ ಕಹಾನಿ; ಇದರ ಸೂತ್ರಧಾರ ಕರಣ್​ ಜೋಹರ್​

Ranveer Singh: ಆಲಿಯಾ ಭಟ್​ ಮತ್ತು ರಣವೀರ್​ ಸಿಂಗ್​ ಜೋಡಿ ಬಗ್ಗೆ ಅಭಿಮಾನಿಗಳಿಗೆ ಹೆಚ್ಚು ನಿರೀಕ್ಷೆ ಇದೆ. ‘ಗಲ್ಲಿ ಬಾಯ್​’ ಚಿತ್ರದ ಮೂಲಕ ಸೂಪರ್​ ಹಿಟ್​ ಎನಿಸಿಕೊಂಡ ಜೋಡಿ ಇದು.

ರಣವೀರ್​ ಸಿಂಗ್-ಆಲಿಯಾ ಭಟ್​ ಹೊಸ ಪ್ರೇಮ್​ ಕಹಾನಿ; ಇದರ ಸೂತ್ರಧಾರ ಕರಣ್​ ಜೋಹರ್​
ರಣವೀರ್​ ಸಿಂಗ್​- ಆಲಿಯಾ ಭಟ್​
TV9kannada Web Team

| Edited By: Madan Kumar

Jul 06, 2021 | 11:01 AM

ನಟಿ ಆಲಿಯಾ ಭಟ್​ ಅವರು ರಣಬೀರ್​ ಕಪೂರ್​ ಜೊತೆ ಡೇಟಿಂಗ್​ ಮಾಡುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಅದರ ನಡುವೆಯೇ ಆಲಿಯಾ ಮತ್ತು ರಣವೀರ್​ ಸಿಂಗ್​ ಜೋಡಿಯ ಒಂದು ಪ್ರೇಮ್​ ಕಹಾನಿಯನ್ನು ಜಗತ್ತಿಗೆ ತೋರಿಸಲು ಕರಣ್​ ಜೋಹರ್​ ಪ್ಲ್ಯಾನ್​ ಮಾಡಿದ್ದಾರೆ. ಅಂದಹಾಗೆ, ಇದು ಇವರಿಬ್ಬರ ರಿಯಲ್​ ಲವ್​ಸ್ಟೋರಿ ಅಲ್ಲ. ಹೊಸದೊಂದು ಸಿನಿಮಾದಲ್ಲಿ ರಣವೀರ್​ ಸಿಂಗ್​ ಹಾಗೂ ಆಲಿಯಾ ಒಂದಾಗುತ್ತಿದ್ದು, ಅದಕ್ಕೆ ಕರಣ್​ ಜೋಹರ್​ ನಿರ್ದೇಶನ ಮಾಡಲಿದ್ದಾರೆ. ಆ ಸಿನಿಮಾ ಹೆಸರು, ‘ರಾಖಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’.

ಇಂದು (ಜು.6) ರಣವೀರ್​ ಸಿಂಗ್​ ಜನ್ಮದಿನ. ಆ ಪ್ರಯುಕ್ತ ‘ರಾಖಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾ ಅನೌನ್ಸ್​ ಆಗುವ ನಿರೀಕ್ಷೆ ಇದೆ. ಕರಣ್​ ಜೋಹರ್​ ಹಲವು ವರ್ಷಗಳ ಬಳಿಕ ನಿರ್ದೇಶನ ಮಾಡುತ್ತಿರುವುದರಿಂದ ಸಿನಿಪ್ರಿಯರಲ್ಲಿ ಕುತೂಹಲ ಮೂಡಿದೆ. 2016ರಲ್ಲಿ ಐಶ್ವರ್ಯಾ ರೈ ಮತ್ತು ರಣಬೀರ್​ ಕಪೂರ್​ ಜೋಡಿಯ ‘ಯೇ ದಿಲ್​ ಹೈ ಮುಷ್ಕಿಲ್​’ ಚಿತ್ರದ ಬಳಿಕ ಬೇರೆ ಯಾವುದೇ ಸಿನಿಮಾಗೂ ಕರಣ್​ ನಿರ್ದೇಶನ ಮಾಡಿರಲಿಲ್ಲ.

ಇನ್ನು, ಆಲಿಯಾ ಭಟ್​ ಮತ್ತು ರಣವೀರ್​ ಸಿಂಗ್​ ಜೋಡಿ ಎಂದ ತಕ್ಷಣ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚುತ್ತದೆ. ಯಾಕೆಂದರೆ, ಈ ಪ್ರತಿಭಾವಂತ ಕಲಾವಿದರಿಬ್ಬರು ಜೊತೆಯಾಗಿ ನಟಿಸಿದ್ದ ‘ಗಲ್ಲಿ ಬಾಯ್​’ ಚಿತ್ರ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು. ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಕಲೆಕ್ಷನ್​ ಮಾಡಿದ್ದೂ ಅಲ್ಲದೆ, ಹಲವು ಪ್ರಶಸ್ತಿಗಳನ್ನು ಬಾಚಿ ಕೊಂಡಿತ್ತು. ಹಾಗಾಗಿ ಇವರಿಬ್ಬರು ಮತ್ತೆ ಜೊತೆಯಾಗಿ ನಟಿಸಲಿರುವ ‘ರಾಖಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಚಿತ್ರದ ಬಗ್ಗೆ ಹೈಪ್​ ಸೃಷ್ಟಿ ಆಗುತ್ತಿದೆ.

ಇದೇ ಸಿನಿಮಾದಲ್ಲಿ ಶಬನಾ ಆಜ್ಮಿ, ಧರ್ಮೇಂದ್ರ, ಜಯಾ ಬಚ್ಚನ್​ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ನಿರ್ದೇಶಕರೇ ಅಧಿಕೃತ ಮಾಹಿತಿ ನೀಡಬೇಕಿದೆ. ಇಂದು ರಣವೀರ್​ ಸಿಂಗ್​ ಜನ್ಮದಿನಕ್ಕೆ ಸೆಲೆಬ್ರಿಟಿಗಳು, ಸ್ನೇಹಿತರು, ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಅದರ ಜೊತೆ ಹೊಸ ಸಿನಿಮಾ ಅನೌನ್ಸ್​ ಆದರೆ ಫ್ಯಾನ್ಸ್​ಗೆ ಹೆಚ್ಚು ಖುಷಿ ಆಗಲಿದೆ.

ಇದನ್ನೂ ಓದಿ:

ರಣವೀರ್​ ಸಿಂಗ್​ ನಟಿಸಿದ ಈ ಟಾಪ್​ 10 ಚಿತ್ರಗಳಲ್ಲಿ ನಿಮಗೆ ಯಾವುದು ಇಷ್ಟ?

ಬೆಳ್ಳಿ ಪರದೆಯಲ್ಲಿ ಉತ್ತುಂಗದಲ್ಲಿರುವಾಗಲೇ ಕಿರುತೆರೆಗೆ ಕಾಲಿಟ್ಟ ನಟ ರಣವೀರ್​ ಸಿಂಗ್​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada