ಈ ವಾರ ಡಬಲ್​ ಎಲಿಮಿನೇಷನ್? ಸೂಚನೆ ಕೊಟ್ಟ ಬಿಗ್​ ಬಾಸ್​; ಔಟ್​ ಆಗೋರು ಯಾರು?

TV9 Digital Desk

| Edited By: Rajesh Duggumane

Updated on:Jul 25, 2021 | 3:43 PM

Bigg Boss Kannada Season 8 Elimination: ಎರಡನೇ ಇನ್ನಿಂಗ್ಸ್​ ಆರಂಭವಾಗುವಾಗ ಕಿಚ್ಚ ಸುದೀಪ್​ ಅವರು ಬಿಗ್​ ಬಾಸ್​ ಒಂದು ತಿಂಗಳು ನಡೆಯಲಿದೆ ಎಂದಿದ್ದರು. ಅವರು ಹೇಳಿದಂತೆ ಆಗಿದ್ದರೆ ಈ ವಾರ ಫಿನಾಲೆ ಆಗಬೇಕಿತ್ತು. ಆದರೆ, ಆ ರೀತಿ ಆಗಿಲ್ಲ.

ಈ ವಾರ ಡಬಲ್​ ಎಲಿಮಿನೇಷನ್? ಸೂಚನೆ ಕೊಟ್ಟ ಬಿಗ್​ ಬಾಸ್​; ಔಟ್​ ಆಗೋರು ಯಾರು?
ಬಿಗ್ ಬಾಸ್ ಕನ್ನಡ ಸೀಸನ್​ 8

ಪ್ರತಿ ಸೀಸನ್​ನಲ್ಲೂ ಕೆಲ ಸಾಮಾನ್ಯ ವಿಚಾರಗಳು ಬಿಗ್ ಬಾಸ್ ಮನೆಯಲ್ಲಿ ಕಂಡುಬರುತ್ತವೆ. ಅದರಲ್ಲಿ ವೈಲ್ಡ್​ ಕಾರ್ಡ್ ಎಂಟ್ರಿ​, ಡಬಲ್​ ಎಲಿಮಿನೇಷನ್​ ಕೂಡ ಒಂದು. ಈಗಾಗಲೇ ಬಿಗ್​ ಬಾಸ್​ ಮನೆಯಲ್ಲಿ ಮೂರು ಜನರು ವೈಲ್ಡ್ ಕಾರ್ಡ್​ ಮೂಲಕ ಎಂಟ್ರಿ ಪಡೆದಿದ್ದಾರೆ. ಆದರೆ, ಈ ವರೆಗೆ ಡಬಲ್​ ಎಲಿಮಿನೇಷನ್​ ಆಗಿಲ್ಲ. ಅಲ್ಲದೆ, ದಿನಗಳು ಕಡಿಮೆ ಇದ್ದು, ಸ್ಪರ್ಧಿಗಳ ಸಂಖ್ಯೆ ಹೆಚ್ಚಿದೆ. ಈ ಕಾರಣಕ್ಕೆ ಈ ವಾರವೇ ಡಬಲ್​ ಎಲಿಮಿನೇಷನ್​ ನಡೆಯಲಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಬಿಗ್​ ಬಾಸ್​ ಸೂಚನೆ ನೀಡಿದ್ದಾರೆ.

ಎರಡನೇ ಇನ್ನಿಂಗ್ಸ್​ ಆರಂಭವಾಗುವಾಗ ಕಿಚ್ಚ ಸುದೀಪ್​ ಅವರು ಬಿಗ್​ ಬಾಸ್​ ಒಂದು ತಿಂಗಳು ನಡೆಯಲಿದೆ ಎಂದಿದ್ದರು. ಅವರು ಹೇಳಿದಂತೆ ಆಗಿದ್ದರೆ ಈ ವಾರ ಫಿನಾಲೆ ಆಗಬೇಕಿತ್ತು. ಆದರೆ, ಆ ರೀತಿ ಆಗಿಲ್ಲ. ಆಗಸ್ಟ್​ 8ರಂದು ಬಿಗ್​ ಬಾಸ್​ ಫಿನಾಲೆ ನಡೆಯಲಿದೆ ಎನ್ನಲಾಗಿದೆ. ಅದಕ್ಕೂ ಮೊದಲು ಒಂದು ಡಬಲ್​ ಎಲಿಮಿನೇಷನ್​ ಬಿಗ್​ ಬಾಸ್​ ಮನೆಯಲ್ಲಿ ನಡೆಯುತ್ತಿದೆ ಎನ್ನಲಾಗಿತ್ತು.

ಈ ವಾರ ಪ್ರಶಾಂತ್ ಸಂಬರಗಿ​, ಶುಭಾ ಪೂಂಜಾ, ಶಮಂತ್​ ಬ್ರೋ ಗೌಡ, ಚಕ್ರವರ್ತಿ ಚಂದ್ರಚೂಡ್, ದಿವ್ಯಾ ಉರುಡುಗ​ ನಾಮಿನೇಷನ್​ ಲಿಸ್ಟ್​ನಲ್ಲಿದ್ದಾರೆ.  ಈ ಐವರಲ್ಲಿ ಇಬ್ಬರು ಈ ವಾರ ಹೊರ ಹೋಗಬಹುದು ಎನ್ನಲಾಗಿತ್ತು.

ದಿವ್ಯಾ ಉರುಡುಗ ಬಿಗ್​ ಬಾಸ್​ ಮನೆಯಲ್ಲಿ ಅತ್ಯದ್ಭುತ ಪರ್ಫಾರ್ಮೆನ್ಸ್​ ನೀಡಿ ಕ್ಯಾಪ್ಟನ್​ ಆಗಿದ್ದಾರೆ.  ಕಳೆದ ವಾರ ಪ್ರಿಯಾಂಕಾ ಎಲಿಮಿನೇಟ್​ ಆದಾಗ ಚಕ್ರವರ್ತಿ ಚಂದ್ರಚೂಡ್​ ನಡೆದುಕೊಂಡಿದ್ದ ರೀತಿ ಅನೇಕರಿಗೆ ಇಷ್ಟವಾಗಿರಲಿಲ್ಲ. ಅವರು ಪ್ರಿಯಾಂಕಾಗೆ ಅಶ್ಲೀಲ ಸನ್ನೆ ತೋರಿದ್ದರು. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕಾರಣಕ್ಕೆ ಇವರು ಕಡಿಮೆ ವೋಟ್​ ಪಡೆದು ಈ ವಾರ ಬಿಗ್​ ಬಾಸ್​ ಮನೆಯಿಂದ ಮೊದಲು ಎಲಿಮಿನೇಟ್​ ಆಗಲಿದ್ದಾರೆ ಎನ್ನಲಾಗಿದೆ. ಶಮಂತ್​ ಈ ವಾರ ಮನೆಯಿಂದ ಹೊರ ನಡೆದಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಮೂಲಗಳ ಪ್ರಕಾರ ಈ ವಾರ ಎಲಿಮಿನೇಷನ್​ ನಡೆದೇ ಇಲ್ಲ ಎಂದು ಕೂಡ ಹೇಳಲಾಗುತ್ತಿದೆ. ಇದಕ್ಕೆ ಇಂದು ಉತ್ತರ ಸಿಗಬೇಕಿದೆ.

ಇದನ್ನೂ ಓದಿ: ಬಿಗ್​ ಬಾಸ್​ ಫಿನಾಲೆಗೂ ಮೊದಲೇ ಶುಭಾ ಪೂಂಜಾಗೆ ಬಿಗ್​ ಬಾಸ್​ ಕಡೆಯಿಂದ ಶಾಕ್​

ಬಿಗ್​ ಬಾಸ್​ ಫಿನಾಲೆಗೆ ನೇರವಾಗಿ ಆಯ್ಕೆಯಾದ ದಿವ್ಯಾ ಉರುಡುಗ; ಮಂಜು-ಅರವಿಂದ್ ಅವರನ್ನು ಬೀಟ್​ ಮಾಡಿದ್ದು ಹೇಗೆ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada