ಬಿಗ್​ ಬಾಸ್​ ಫಿನಾಲೆಗೆ ನೇರವಾಗಿ ಆಯ್ಕೆಯಾದ ದಿವ್ಯಾ ಉರುಡುಗ; ಮಂಜು-ಅರವಿಂದ್ ಅವರನ್ನು ಬೀಟ್​ ಮಾಡಿದ್ದು ಹೇಗೆ?

ಈ ವಾರ ಬಿಗ್​ ಬಾಸ್​ ಮನೆಯಲ್ಲಿ​ ಕ್ಯಾಪ್ಟನ್ಸಿ ಟಾಸ್ಕ್​ಗೆ ಅರ್ಹತೆ ಪಡೆದುಕೊಳ್ಳಲು ಬಿಗ್​ ಬಾಸ್​ ‘ನೀನಾ ನಾನಾ’ ಹೆಸರಿನ ಟಾಸ್ಕ್​ ನೀಡಲಾಗಿತ್ತು. ಇದರಡಿಯಲ್ಲಿ ನೀಡಿದ ಪ್ರತಿ ಟಾಸ್ಕ್​ಗಳೂ ವೈಯಕ್ತಿಕ ಟಾಸ್ಕ್​ಗಳೇ.

ಬಿಗ್​ ಬಾಸ್​ ಫಿನಾಲೆಗೆ ನೇರವಾಗಿ ಆಯ್ಕೆಯಾದ ದಿವ್ಯಾ ಉರುಡುಗ; ಮಂಜು-ಅರವಿಂದ್ ಅವರನ್ನು ಬೀಟ್​ ಮಾಡಿದ್ದು ಹೇಗೆ?
ದಿವ್ಯಾ ಉರುಡುಗ - ಅರವಿಂದ್​ ಕೆಪಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 23, 2021 | 3:09 PM

ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ ಉರುಡುಗ ಸ್ಟ್ರಾಂಗ್​ ಕಂಟೆಸ್ಟೆಂಟ್​ ಆಗಿ ಗುರುತಿಸಿಕೊಂಡಿದ್ದಾರೆ. ಸೀಸನ್​ 8ರ ಮೊದಲ ಮಹಿಳಾ ಕ್ಯಾಪ್ಟನ್​ ಆಗುವ ಮೂಲಕ ಹೊಸ ದಾಖಲೆಯನ್ನು ಅವರು ಬರೆದಿದ್ದರು. ಈಗ ಸೀಸನ್​8ರಲ್ಲಿ ಫಿನಾಲೆಗೆ ಏರಿದ ಮೊದಲ ಸ್ಪರ್ಧಿ ಇವರೇ ಅನ್ನೋದು ವಿಶೇಷ. ಈ ಮೂಲಕ ದಿವ್ಯಾ ಫಿನಾಲೆಗೆ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. 

ಈ ವಾರ ಬಿಗ್​ ಬಾಸ್​ ಮನೆಯಲ್ಲಿ​ ಕ್ಯಾಪ್ಟನ್ಸಿ ಟಾಸ್ಕ್​ಗೆ ಅರ್ಹತೆ ಪಡೆದುಕೊಳ್ಳಲು ಬಿಗ್​ ಬಾಸ್​ ‘ನೀನಾ ನಾನಾ’ ಹೆಸರಿನ ಟಾಸ್ಕ್​ ನೀಡಲಾಗಿತ್ತು. ಇದರಡಿಯಲ್ಲಿ ನೀಡಿದ ಪ್ರತಿ ಟಾಸ್ಕ್​ಗಳೂ ವೈಯಕ್ತಿಕ ಟಾಸ್ಕ್​ಗಳೇ. ಕಳೆದ ವಾರ ದಿವ್ಯಾ ಕೈಗೆ ಪೆಟ್ಟಾಗಿತ್ತು. ಹೀಗಾಗಿ, ಈ ವಾರ ಅವರಿಗೆ ಆಡೋದು ಬಹಳ ಕಷ್ಟವಾಗಿತ್ತು. ಆದರೆ, ಇದೆಲ್ಲವನ್ನೂ ಮೀರಿ ದಿವ್ಯಾ ಈ ವಾರ ಕ್ಯಾಪ್ಟನ್ಸಿ ಟಾಸ್ಕ್​ಗೆ ಆಯ್ಕೆ ಆಗಿದ್ದಾರೆ. ಅಷ್ಟೇ ಅಲ್ಲ, ಎಲ್ಲಾ ಸ್ಟ್ರಾಂಗ್​ ಕಂಟೆಸ್ಟಂಟ್​ಗಳ ಎದುರು ಅವರು ಗೆದ್ದು ಕ್ಯಾಪ್ಟನ್​ ಆಗಿದ್ದಾರೆ ಎನ್ನಲಾಗಿದೆ.

ಈ ವಾರ ಹೊರತು ಪಡಿಸಿದರೆ ಬಿಗ್​ ಬಾಸ್​ ಮನೆಯಲ್ಲಿ ಉಳಿದಿರೋದು ಕೇವಲ ಎರಡು ವಾರ ಮಾತ್ರ. ಕ್ಯಾಪ್ಟನ್​ ಆದವರನ್ನು ನಾಮಿನೇಟ್​ ಮಾಡುವಂತಿಲ್ಲ. ಹೀಗಾಗಿ, ದಿವ್ಯಾ ಉರುಡುಗ ಮುಂದಿನ ವಾರದ ನಾಮಿನೇಷನ್​ನಿಂದ ಬವಾವ್​ ಆಗಲಿದ್ದಾರೆ. ನಂತರ ಉಳಿಯೋದು ಒಂದು ವಾರ ಮಾತ್ರ. ಹೀಗಾಗಿ, ಈ ವಾರ ಕ್ಯಾಪ್ಟನ್​ ಆಗುವ ಮೂಲಕ ದಿವ್ಯಾ ಉರುಡುಗ ಫಿನಾಲೆಗೆ ನೇರವಾಗಿ ಆಯ್ಕೆ ಆದಂತಾಗಿದೆ. ಈ ವಾರ ಅವರು ನಾಮಿನೇಷನ್​ ಲಿಸ್ಟ್​ನಲ್ಲಿದ್ದಾರೆ. ಸ್ಟ್ರಾಂಗ್​ ಕಂಟೆಸ್ಟಂಟ್​ ಎನಿಸಿಕೊಂಡಿರುವುದರಿಂದ ಅವರು ಸೇವ್​ ಆಗೋದು ಬಹುತೇಕ ಖಚಿತವಾಗಿದೆ.

ಇನ್ನು, ಈ ವಾರ ದಿವ್ಯಾ ಪ್ರಯಾಣ ಅಷ್ಟು ಸುಲಭವಾಗಿರಲಿಲ್ಲ. ಈ ವಾರ ಅವರ ಕೈಗೆ ಪೆಟ್ಟಾಗಿತ್ತು. ಅಷ್ಟೇ ಅಲ್ಲ, ಆಪ್ತ ಎನಿಸಿಕೊಂಡಿದ್ದ ಅರವಿಂದ್​ ಕೆ.ಪಿ ಅವರು ದಿವ್ಯಾ ಉರುಡುಗ ವಿರುದ್ಧ ತಿರುಗಿ ಬಿದ್ದಿದ್ದರು. ಇಬ್ಬರ ನಡುವೆ ಮನಸ್ತಾಪ ಕೂಡ ಉಂಟಾಗಿತ್ತು. ಇದು ದಿವ್ಯಾ ಅವರನ್ನು ಮಾನಸಿಕವಾಗಿ ಕುಗ್ಗಿಸಿತ್ತು. ಆದರೆ, ಅವರು ಛಲ ಬಿಡದೆ ಈ ವಾರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ಈ ವಾರದ ಕ್ಯಾಪ್ಟನ್​ ಆಗಿದ್ದಾರೆ. ಸದ್ಯ, ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಶುಭಾಶಯಗಳ ಮಳೆ ಹರಿದು ಬರುತ್ತಿದೆ.

ಇದನ್ನೂ ಓದಿ: ಆಗಸ್ಟ್​ 8ರಿಂದ ಹಿಂದಿ ಬಿಗ್​ ಬಾಸ್​ ಸೀಸನ್​ 15; ಆದರೆ, ಟಿವಿಯಲ್ಲಿ ಇದನ್ನು ನೋಡೋಕಾಗಲ್ಲ

ಬಿಗ್​ ಬಾಸ್​ ಸ್ಪರ್ಧಿ ವನಿತಾಗೆ 4ನೇ ಮದುವೆ? ಫೋಟೋ ಕಂಡು ಹುಬ್ಬೇರಿಸಿದ ಫ್ಯಾನ್ಸ್​

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್