ಆಗಸ್ಟ್​ 8ರಿಂದ ಹಿಂದಿ ಬಿಗ್​ ಬಾಸ್​ ಸೀಸನ್​ 15; ಆದರೆ, ಟಿವಿಯಲ್ಲಿ ಇದನ್ನು ನೋಡೋಕಾಗಲ್ಲ

ವೂಟ್​ ಆ್ಯಪ್​ಗೆ ಈ ಬಾರಿ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ. ಬಿಗ್​ ಬಾಸ್​ ಒಟಿಟಿಯನ್ನು ವೂಟ್​ ಪರಿಚಯಿಸಿದೆ. ಮೊದಲು ಆರು ವಾರದ ಎಪಿಸೋಡ್​ಗಳು ವೂಟ್​ನಲ್ಲಿ ಮಾತ್ರ ಪ್ರಸಾರವಾಗಲಿದ್ದು ನಂತರ ಟಿವಿಗೆ ಶಿಫ್ಟ್​ ಆಗಲಿದೆ.

ಆಗಸ್ಟ್​ 8ರಿಂದ ಹಿಂದಿ ಬಿಗ್​ ಬಾಸ್​ ಸೀಸನ್​ 15; ಆದರೆ, ಟಿವಿಯಲ್ಲಿ ಇದನ್ನು ನೋಡೋಕಾಗಲ್ಲ
ಸಲ್ಮಾನ್​ ಖಾನ್
TV9kannada Web Team

| Edited By: Rajesh Duggumane

Jul 21, 2021 | 7:55 PM

ಹಿಂದಿ ಬಿಗ್​ ಬಾಸ್​ ಸೀಸನ್​ 15 ಯಾವಾಗ ಆರಂಭಗೊಳ್ಳಲಿದೆ ಎನ್ನುವ ಪ್ರಶ್ನೆ ಹರಿದಾಡಿತ್ತು. ಇದಕ್ಕೆ ಈಗ ಉತ್ತರ ಸಿಕ್ಕಿದೆ. ಆಗಸ್ಟ್​ 8ರಿಂದ ಈ ಶೋ ಆರಂಭಗೊಳ್ಳುತ್ತಿದೆ. ಬಿಗ್​ ಬಾಸ್​ ಮನೆ ಸೇರುವ ಸ್ಪರ್ಧಿಗಳು ಯಾರ್ಯಾರು ಎನ್ನುವ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಆಗುತ್ತಿವೆ.

ವೂಟ್​ ಆ್ಯಪ್​ಗೆ ಈ ಬಾರಿ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ. ಬಿಗ್​ ಬಾಸ್​ ಒಟಿಟಿಯನ್ನು ವೂಟ್​ ಪರಿಚಯಿಸಿದೆ. ಮೊದಲು ಆರು ವಾರದ ಎಪಿಸೋಡ್​ಗಳು ವೂಟ್​ನಲ್ಲಿ ಮಾತ್ರ ಪ್ರಸಾರವಾಗಲಿದ್ದು ನಂತರ ಟಿವಿಗೆ ಶಿಫ್ಟ್​ ಆಗಲಿದೆ. ಒಟಿಟಿ ಹಾಗೂ ಟಿವಿಯಲ್ಲಿ ಪ್ರಸಾರವಾಗುವ ಶೋಅನ್ನು ಸಲ್ಮಾನ್​ ಖಾನ್​ ಅವರೇ ನಡೆಸಿಕೊಡಲಿದ್ದಾರೆ.

ಸಾಮಾನ್ಯವಾಗಿ ಬಿಗ್​ ಬಾಸ್ ಪ್ರತೀ ಸೀಸನ್​ 100ರಿಂದ 120 ದಿನಗಳ ಕಾಲ ನಡೆಯುತ್ತದೆ. ಅಂದರೆ ನಾಲ್ಕು ತಿಂಗಳಿಗೆ ಬಿಗ್​ ಬಾಸ್​ ಪೂರ್ಣಗೊಳ್ಳುತ್ತದೆ. ಆದರೆ, ಈಗ ಇದನ್ನು ಎರಡು ತಿಂಗಳು ಹೆಚ್ಚುವರಿಯಾಗಿ ನಡೆಸೋಕೆ ವಾಹಿನಿ ನಿರ್ಧರಿಸಿದೆ ಎನ್ನಲಾಗುತ್ತಿದೆ. ಇದು ತುಂಬಾನೇ ದೀರ್ಘ ಎನಿಸಿರುವುದರಿಂದ ಮೊದಲ ಆರು ವಾರ ಈ ಶೋ ಅನ್ನು ಒಟಿಟಿಯಲ್ಲಿ ಪ್ರಸಾರ ಮಾಡುವ ನಿರ್ಧಾರಕ್ಕೆ ಬರಲಾಗಿದೆ.

View this post on Instagram

A post shared by Voot (@voot)

ಬಿಗ್​ ಬಾಸ್​ ಮನೆ ಪ್ರವೇಶಿಸುವವರು ಯಾರು ಎನ್ನುವ ಬಗ್ಗೆ ಚರ್ಚೆ ಜೋರಾಗಿದೆ. ನಟಿ ರಿಯಾ ಚಕ್ರವರ್ತಿ ಕೂಡ ಬಿಗ್​ ಬಾಸ್​ ಮನೆ ಪ್ರವೇಶಿಸಲಿದ್ದಾರಂತೆ. ಸುಶಾಂತ್​ ಸಿಂಗ್ ಸಾವಿನ ನಂತರದಲ್ಲಿ ರಿಯಾ ಚಕ್ರವರ್ತಿ ಹೆಸರು ಮುನ್ನೆಲೆಗೆ ಬಂದಿತ್ತು. ರಿಯಾ ಹಾಗೂ ಸುಶಾಂತ್​ ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಇವರ ನಡುವಿನ ಪ್ರೀತಿ ಮುರಿದು ಬಿದ್ದಿತ್ತು. ಸುಶಾಂತ್​ ಸಾವಿನ ಪ್ರಕರಣದ ತನಿಖೆ ವೇಳೆ ರಿಯಾ ವಿಚಾರಣೆ ಮಾಡಲಾಗಿತ್ತು. ನಂತರ ಅವರನ್ನು ಅರೆಸ್ಟ್​ ಕೂಡ ಮಾಡಲಾಗಿತ್ತು. ಈಗ ಅವರು, ಜೈಲಿನಿಂದ ಜಾಮೀನು ಪಡೆದು ಹೊರ ಬಂದಿದ್ದಾರೆ. ಬಿಗ್​ ಬಾಸ್ ತಂಡದವರು ರಿಯಾ ಅವರನ್ನು ಅಪ್ರೋಚ್​ ಮಾಡಿದ್ದಾರೆ ಎನ್ನಲಾಗಿದೆ. ರಿಯಾ ಮಾತ್ರವಲ್ಲದೆ, ಸಾಕಷ್ಟು ಜನರ ಹೆಸರು ಕೇಳಿ ಬರುತ್ತಿದೆ. ಇವರಲ್ಲಿ ಯಾರ್ಯಾರು ಬಿಗ್​ ಬಾಸ್​ ಮನೆ ಒಳಗೆ ಹೋಗುತ್ತಾರೆ ಎನ್ನುವ ಕುತೂಹಲ ಸದ್ಯದ್ದು.

ಇದನ್ನೂ ಓದಿ: ದಬಾಂಗ್​ ಸರಣಿ ವಿಚಾರದಲ್ಲಿ ದೊಡ್ಡ ರಿಸ್ಕ್​ ತೆಗೆದುಕೊಳ್ಳುತ್ತಿದ್ದಾರೆ ಸಲ್ಮಾನ್​ ಖಾನ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada