ಅರವಿಂದ್-ದಿವ್ಯಾ ಉರುಡುಗ ಸಂಬಂಧದಲ್ಲಿ ಬಿರುಕು; ಇದು ಯಾರೂ ನಿರೀಕ್ಷಿಸದ ಸಂಗತಿ
100 ದಿನಗಳನ್ನು ಪೂರೈಸಿರುವ ಬಿಗ್ ಬಾಸ್ ಈಗ ಫಿನಾಲೆಯತ್ತ ಮುನ್ನುಗ್ಗುತ್ತಿದೆ. ಆದ್ದರಿಂದ ಸ್ಪರ್ಧಿಗಳ ನಡುವೆ ಪೈಪೋಟಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದಿವ್ಯಾ ಉರುಡುಗ ಮತ್ತು ಅರವಿಂದ್ ಕೆಪಿ ನಡುವೆ ಮನಸ್ತಾಪ ಮೂಡಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 8’ (Bigg Boss Kannada 8) ಆರಂಭ ಆದಾಗಿನಿಂದಲೂ ದಿವ್ಯಾ ಉರುಡುಗ (Divya Uruduga) ಮತ್ತು ಅರವಿಂದ್ ಕೆಪಿ (, Aravind KP) ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಇಬ್ಬರ ನಡುವೆ ಒಂದು ಆತ್ಮೀಯತೆ ಬೆಳೆದಿತ್ತು. ಸದಾ ಕಾಲ ಇಬ್ಬರೂ ಜೊತೆಯಾಗಿ ಇರುತ್ತಿದ್ದರು. ಅದನ್ನು ಕಂಡು ವೀಕ್ಷಕರು ಕೂಡ ಇಷ್ಟಪಟ್ಟಿದ್ದರು. ಬೆಸ್ಟ್ ಕಪಲ್ ಎಂದೆಲ್ಲ ಕಮೆಂಟ್ಗಳನ್ನು ಮಾಡಲಾಗುತ್ತಿತ್ತು. ಅಷ್ಟೇ ಅಲ್ಲ, ದಿವ್ಯಾ ಉರುಡುಗ ಮತ್ತು ಅರವಿಂದ್ ನಿಜಜೀವನದಲ್ಲಿ ಮದುವೆಯಾದರೆ ಚೆನ್ನಾಗಿರುತ್ತದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದರು. ಆದರೆ ಈಗ ಎಲ್ಲವೂ ತಲೆಕೆಳಗಾದಂತೆ ಕಾಣುತ್ತಿದೆ.
ಬಿಗ್ ಬಾಸ್ ಎರಡನೇ ಇನ್ನಿಂಗ್ಸ್ನಲ್ಲಿ ವಿವಿಧ ಬಗೆಯ ಟಾಸ್ಕ್ಗಳನ್ನು ನೀಡಲಾಗುತ್ತಿದೆ. ಇತ್ತೀಚೆಗೆ ‘ನೀನಾ ನಾನಾ’ ಎಂಬ ಟಾಸ್ಕ್ ನೀಡಲಾಗಿತ್ತು. ಅದರ ಜೊತೆ ಕೊಡಲಾದ ಇನ್ನೊಂದು ಟಾಸ್ಕ್ನಲ್ಲಿ ಮೊದಲು ಯಾರು ಗ್ಲೌಸ್ ಹಾಕಿಕೊಳ್ಳುತ್ತಾರೋ ಅವರಿಗೆ ಸ್ಪರ್ಧಿಸುವ ಅವಕಾಶ ಸಿಗುತ್ತದೆ. ಇತರೆ ಸ್ಪರ್ಧಿಗಳು ಗ್ಲೌಸ್ ಹತ್ತಿರ ನಿಂತುಕೊಂಡಾಗ ಅದನ್ನು ಫೌಲ್ ಎಂದು ದಿವ್ಯಾ ಉರುಡುಗ ಹೇಳುತ್ತಿದ್ದರು. ಆದರೆ ನಂತರದಲ್ಲಿ ಸ್ವತಃ ದಿವ್ಯಾ ಗ್ಲೌಸ್ ಬಳಿ ಹೋಗಿ ನಿಂತುಕೊಳ್ಳಲು ಆರಂಭಿಸಿದರು. ಅದನ್ನು ಅರವಿಂದ್ ವಿರೋಧಿಸಿದರು.
ಈ ಘಟನೆ ನಡೆದ ಬಳಿಕ ಅರವಿಂದ್ ಮತ್ತು ದಿವ್ಯಾ ಉರುಡುಗ ನಡುವೆ ವೈಮನಸ್ಸು ಉಂಟಾಗಿದೆ. ಅದೇ ರಾತ್ರಿ ಅರವಿಂದ್ ಬಳಿಗೆ ತೆರಳಿದ ದಿವ್ಯಾ ಅವರು ಮಾತನಾಡಿಸಲು ಪ್ರಯತ್ನಿಸಿದರು. ಆದರೆ ಮಾತನಾಡುವ ಮನಸ್ಸಿಲ್ಲ ಎಂದು ಅರವಿಂದ್ ಅಂತರ ಕಾಯ್ದುಕೊಂಡರು. ಈ ಕಿಚ್ಚು ನಿಧಾನವಾಗಿ ಇಬ್ಬರ ಮನಸ್ಸಿನಲ್ಲೂ ವ್ಯಾಪಿಸಿದೆ. ಇಷ್ಟು ದಿನಗಳ ಕಾಲ ಖುಷಿಖುಷಿಯಾಗಿ ಮಾತನಾಡಿಕೊಳ್ಳುತ್ತಿದ್ದ ಈ ಜೋಡಿ ಈಗ ಹೀಗೆ ಕಿತ್ತಾಡಿಕೊಳ್ಳುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ.
ವೈಯಕ್ತಿಕವಾಗಿ ದಿವ್ಯಾ ಉರುಡುಗ ಮತ್ತು ಅರವಿಂದ್ ಕೆಪಿ ನಡುವೆ ಯಾವುದೇ ಮನಸ್ತಾಪ ಇಲ್ಲ. ಆದರೆ ಈ ಎಲ್ಲ ಜಟಾಪಟಿ ನಡೆದಿರುವುದು ಟಾಸ್ಕ್ ವಿಚಾರಕ್ಕೆ. ಹಾಗಾಗಿ ಇಂದಲ್ಲ ನಾಳೆ ಅವರು ಒಂದಾಗುತ್ತಾರೆ. ಮತ್ತೆ ಹಳೇ ಆತ್ಮೀಯತೆಯೊಂದಿಗೆ ಬೆರೆಯುತ್ತಾರೆ ಎಂದು ನಿರೀಕ್ಷಿಸಲಾಗುತ್ತಿದೆ. ಈಗ ಬಿಗ್ ಬಾಸ್ 100 ದಿನಗಳನ್ನು ಪೂರೈಸಿ ಫಿನಾಲೆಯತ್ತ ಮುನ್ನುಗ್ಗುತ್ತಿದೆ. ಆದ್ದರಿಂದ ಸ್ಪರ್ಧಿಗಳ ನಡುವೆ ಪೈಪೋಟಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
View this post on Instagram
ಚಕ್ರವರ್ತಿ ಚಂದ್ರಚೂಡ್, ಅರವಿಂದ್ ಕೆಪಿ, ದಿವ್ಯಾ ಉರುಡುಗ, ದಿವ್ಯಾ ಸುರೇಶ್, ಮಂಜು ಪಾವಗಡ, ಶುಭಾ ಪೂಂಜಾ, ವೈಷ್ಣವಿ ಗೌಡ, ಶಮಂತ್ ಬ್ರೋ ಗೌಡ ಮತ್ತು ಪ್ರಶಾಂತ್ ಸಂಬರಗಿ ನಡುವೆ ಸದ್ಯ ಹಣಾಹಣಿ ಮುಂದುವರಿದಿದೆ.
ಇದನ್ನೂ ಓದಿ:
BBK8 Finale: 100 ದಿನ ಪೂರೈಸಿದ ಕನ್ನಡ ಬಿಗ್ ಬಾಸ್ ಸೀಸನ್ 8; ಫಿನಾಲೆ ನಡೆಯೋದು ಯಾವಾಗ?
ಬಿಗ್ ಬಾಸ್ ಮನೆಯಲ್ಲಿ ಮಂಜು ಇದ್ದರೂ ದಿವ್ಯಾಗೆ ಕಾಡುತ್ತಿದೆ ಏಕಾಂಗಿತನ