ಬಿಗ್ ಬಾಸ್ ಮನೆಯಲ್ಲಿ ಅವಘಡ; ದಿವ್ಯಾ ಉರುಡುಗ ಹೊಡೆದ ಫೋರ್ಸ್​ಗೆ ಗಾಜು ನುಚ್ಚುನೂರು, ಕೈಯಲ್ಲಿ ರಕ್ತ

ಬಿಗ್​ ಬಾಸ್​ ಎರಡನೇ ಇನ್ನಿಂಗ್ಸ್​ನಲ್ಲಿ 19ನೇ ದಿನ ಪೂರ್ಣಗೊಂಡಿದೆ. ಸಾಮಾನ್ಯವಾಗಿ ಪ್ರತಿ ಸೋಮವಾರ ಎಲಿಮಿನೇಷನ್​ಗೆ ನಾಮಿನೇಷನ್​ ನಡೆಯುತ್ತದೆ. ಮನೆಯ ಎಲ್ಲಾ ಸದಸ್ಯರು ಇಬ್ಬರು ಸದಸ್ಯರನ್ನು ನಾಮಿನೇಟ್​ ಮಾಡಬೇಕು.

ಬಿಗ್ ಬಾಸ್ ಮನೆಯಲ್ಲಿ ಅವಘಡ; ದಿವ್ಯಾ ಉರುಡುಗ ಹೊಡೆದ ಫೋರ್ಸ್​ಗೆ ಗಾಜು ನುಚ್ಚುನೂರು, ಕೈಯಲ್ಲಿ ರಕ್ತ
Follow us
TV9 Web
| Updated By: Skanda

Updated on: Jul 13, 2021 | 7:56 AM

‘ಕನ್ನಡ ಬಿಗ್​ ಬಾಸ್​ ಸೀಸನ್​ 8’ ಫಿನಾಲೆಗೆ ಕೆಲವೇ ವಾರಗಳು ಬಾಕಿ ಇವೆ. ಮನೆಯಲ್ಲಿ ಸದ್ಯ 10 ಸ್ಪರ್ಧಿಗಳು ಮಾತ್ರ ಉಳಿದುಕೊಂಡಿದ್ದಾರೆ. ಎಲ್ಲಾ ಸ್ಪರ್ಧಿಗಳ ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ. ಹೀಗಿರುವಾಗಲೇ ಬಿಗ್​ ಬಾಸ್​ ಮನೆಯಲ್ಲಿ ಅವಘಡ ಒಂದು ನಡೆದಿದೆ.

ಬಿಗ್​ ಬಾಸ್​ ಎರಡನೇ ಇನ್ನಿಂಗ್ಸ್​ನಲ್ಲಿ 19 ದಿನ ಪೂರ್ಣಗೊಂಡಿದೆ. ಸಾಮಾನ್ಯವಾಗಿ ಪ್ರತಿ ಸೋಮವಾರ ಎಲಿಮಿನೇಷನ್​ಗೆ ನಾಮಿನೇಷನ್​ ನಡೆಯುತ್ತದೆ. ಮನೆಯ ಎಲ್ಲಾ ಸದಸ್ಯರು ಇಬ್ಬರು ಸದಸ್ಯರನ್ನು ನಾಮಿನೇಟ್​ ಮಾಡಬೇಕು ಮತ್ತು ಇದಕ್ಕೆ ಕಾರಣವನ್ನೂ ನೀಡಬೇಕು. ಈ ಬಾರಿ ಸ್ಪರ್ಧಿಗಳಿಗೆ ಬಿಗ್​ ಬಾಸ್​ ಈ ಅವಕಾಶವನ್ನೇ ನೀಡಿಲ್ಲ. ಮನೆಯ ಕ್ಯಾಪ್ಟನ್​ ಆದ ಅರವಿಂದ್​ ಕೆ.ಪಿ ಹಾಗೂ ರಘು ಗೌಡ ಸೇವ್​ ಮಾಡಿದ ಶಮಂತ್​ ಹೊರತುಪಡಿಸಿ ಮನೆಯ ಎಲ್ಲಾ 8 ಸದಸ್ಯರು ನಾಮಿನೇಟ್​ ಆಗಿದ್ದಾರೆ.

ಈ ನಾಮಿನೇಟ್​ನಿಂದ ತಪ್ಪಿಸಿಕೊಳ್ಳೋಕೆ ಬಿಗ್​ ಬಾಸ್​ ಅವಕಾಶವನ್ನೂ ನೀಡಿದ್ದಾರೆ. ಎರಡು ತಂಡಗಳನ್ನಾಗಿ ಮಾಡಲಾಗಿದೆ. ‘ವಿಜಯ ಪಥ’ ತಂಡಕ್ಕೆ ಅರವಿಂದ್ ಕ್ಯಾಪ್ಟನ್​ ಆಗಿದ್ದು, ‘ನಿಂಗ್​ ಐತೆ’ ತಂಡಕ್ಕೆ ಮಂಜು ಕ್ಯಾಪ್ಟನ್​. ಅರವಿಂದ್ ಟೀಮ್​ನಲ್ಲಿ, ಶುಭಾ, ವೈಷ್ಣವಿ, ಪ್ರಶಾಂತ್​ ಸಂಬರಗಿ, ಪ್ರಿಯಾಂಕಾ ತಿಮ್ಮೇಶ್​ ಇದ್ದಾರೆ. ಮಂಜು ಟೀಮ್​ನಲ್ಲಿ ದಿವ್ಯಾ ಸುರೇಶ್, ದಿವ್ಯಾ ಉರುಡುಗ, ಚಕ್ರವರ್ತಿ ಚಂದ್ರಚೂಡ್​, ಶಮಂತ್​ ಇದ್ದಾರೆ.

ನಕ್ಷತ್ರ ಅಂಟಿಸುವ ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​ ಪ್ರಕಾರ ಪ್ರತಿ ತಂಡದ ತಲಾ ಓರ್ವ ಸದಸ್ಯ ಜಾಕೆಟ್​ ಹಾಕಬೇಕು. ಅವರಿಗೆ ಎದುರಾಳಿ ತಂಡದವರು ನಕ್ಷತ್ರ ಅಂಟಿಸಬೇಕು. ಈ ಟಾಸ್ಕ್​ ವೇಳೆ ನಿಂಗ್​ ಐತೇ ತಂಡದದಿಂದ ದಿವ್ಯಾ ಜಾಕೇಟ್​ ಹಾಕಿದ್ದರು. ಆಗ ಎದುರಾಳಿ ತಂಡದವರು ದಿವ್ಯಾ ಮೇಲೆ ನಕ್ಷತ್ರ ಅಂಟಿಸೋಕೆ ಮುಂದಾದರು. ಈ ವೇಳೆ ದಿವ್ಯಾ ಕೈ ಗ್ಲಾಸ್​ಗೆ ತಾಗಿದೆ. ಗಾಜು ಒಡೆದು ದಿವ್ಯಾ ಕೈಗೆ ಗಾಯವಾಗಿದೆ. ಹೀಗಾಗಿ ಗಳಗಳನೆ ಅತ್ತಿದ್ದಾರೆ. ನಂತರ ಅವರನ್ನು ಕನ್​ಫೆಷನ್​ ರೂಮ್​ಗೆ ಕರೆದುಕೊಂಡು ಹೋಗಿ ಬ್ಯಾಂಡೇಜ್​ ಹಾಕಲಾಯಿತು.

ಇದನ್ನೂ ಓದಿ: ಅರವಿಂದ್ ಗೆಲ್ಲಿಸೋಕೆ ಚಕ್ರವರ್ತಿಗೆ ಅನ್ಯಾಯ ಮಾಡಿದ್ರಾ ದಿವ್ಯಾ ಉರುಡುಗ? ಬಿಗ್​ ಬಾಸ್​ ಮನೆಯಲ್ಲಿ ಹೀಗೊಂದು ಪ್ರಶ್ನೆ

‘72 ದಿನಗಳ ಕಾಲ ನೋಡಿದ ಕೆಪಿ ಹೀಗೆ ಇರಲಿಲ್ಲ’; ಚಕ್ರವರ್ತಿ ಪ್ರಭಾವಕ್ಕೊಳಗಾದ ಅರವಿಂದ್​ಗೆ ಸುದೀಪ್​ ಎಚ್ಚರಿಕೆ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ