ಬಿಗ್​ ಬಾಸ್​ ಮನೆಯಲ್ಲಿ ಮಂಜು ಇದ್ದರೂ ದಿವ್ಯಾಗೆ ಕಾಡುತ್ತಿದೆ ಏಕಾಂಗಿತನ

ದಿವ್ಯಾ ಅತ್ತ ವಿಚಾರ ಮಂಜು ಗಮನಕ್ಕೆ ಬಂದಿದೆ. ನಿನ್ನೆ ಅಳುತ್ತಿದ್ದೆ ಏಕೆ ಎಂದು ಪ್ರಶ್ನೆ ಮಾಡಿದ್ದಾರೆ ಮಂಜು. ‘ನೀವೆಲ್ಲ ನಿಮ್ಮ ಫ್ರೆಂಡ್ಸ್​ ಜತೆ ಸಮಯ ಕಳೆಯೋದು ನೋಡಿದ್ರೆ ನನಗೆ ಬೇಜಾರು ಆಗುತ್ತೆ. ನನಗೂ ನನ್​ ಫ್ರೆಂಡ್ ಇದ್ದರೆ ನಾನು ಅವಳ ಜತೆ ಸುದ್ದಿ ಹೇಳಿಕೊಂಡಿರಬಹುದಿತ್ತು ಅನ್ನಿಸಿತು ಅಷ್ಟೇ’ ಎಂದಿದ್ದಾರೆ ದಿವ್ಯಾ.

ಬಿಗ್​ ಬಾಸ್​ ಮನೆಯಲ್ಲಿ ಮಂಜು ಇದ್ದರೂ ದಿವ್ಯಾಗೆ ಕಾಡುತ್ತಿದೆ ಏಕಾಂಗಿತನ
ದಿವ್ಯಾ ಸುರೇಶ್
TV9kannada Web Team

| Edited By: Skanda

Jul 21, 2021 | 7:10 AM

ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್ ನಡುವೆ ಮೊದಲಿದ್ದ ಆಪ್ತತೆ ಈಗ ಇಲ್ಲ. ಇಬ್ಬರೂ ಅಷ್ಟಾಗಿ ಕ್ಲೋಸ್​ ಆಗಿ ನಡೆದುಕೊಳ್ಳುತ್ತಿಲ್ಲ. ಈ ವಿಚಾರದ ಬಗ್ಗೆ ದಿವ್ಯಾ ಸುರೇಶ್​ ಸಾಕಷ್ಟು ಬೇಸರಗೊಂಡಿದ್ದಾರೆ. ಅಷ್ಟೇ ಅಲ್ಲ, ಮಂಜು ಎದುರು ಈ ಬಗ್ಗೆ ಹೇಳಿಕೊಂಡಿದ್ದಾರೆ.

ಮಂಜು ಪಾವಗಡ ಅವರು ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಸಾಕಷ್ಟು ಬದಲಾಗಿದ್ದಾರೆ. ಅವರು ಕೇವಲ ದಿವ್ಯಾ ಸುರೇಶ್​ಗೆ ಮಾತ್ರ ಸೀಮಿತವಾಗಿಲ್ಲ. ಬಿಗ್​ ಬಾಸ್​ ಮನೆಯಲ್ಲಿ ಶುಭಾ ಪೂಂಜಾ, ಅರವಿಂದ್, ಚಕ್ರವರ್ತಿ ಸೇರಿ ಎಲ್ಲರ ಜತೆಗೂ ಮಾತುಕತೆ ನಡೆಸುತ್ತಾರೆ. ಉಳಿದವರ ಜತೆ ಬೆರೆತಷ್ಟು ದಿವ್ಯಾ ಜತೆ ಮಂಜು ಬೆರೆಯುತ್ತಿಲ್ಲ. ಇದು ದಿವ್ಯಾ ಗಮನಕ್ಕೆ ಬಂದಿದೆ.

ದಿವ್ಯಾ ಬಿಗ್​ ಬಾಸ್​ ಮನೆಯಲ್ಲಿ ಪ್ರಿಯಾಂಕ ತಿಮ್ಮೇಶ್​ ಜತೆ ತುಂಬಾನೇ ಕ್ಲೋಸ್​ ಆಗಿದ್ದರು. ಆದರೆ, ಕಳೆದವಾರ ಅವರು ಎಲಿಮಿನೇಟ್​ ಆಗಿದ್ದಾರೆ. ಇನ್ನು, ದಿವ್ಯಾ ಅವರು ಶಮಂತ್​ ಬ್ರೋ ಗೌಡ ಜತೆ ಕನೆಕ್ಟ್​ ಆಗೋಕೆ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ಶುಭಾ ಜತೆ ಮಂಜು ಸಮಯ ಕಳೆಯುತ್ತಿರುವುದಕ್ಕೆ ದಿವ್ಯಾ ಏಕಾಂಗಿಯಾಗಿದ್ದಾರೆ.

ದಿವ್ಯಾ ಉರುಡುಗ-ಅರವಿಂದ್ ಒಂದು ಕಡೆ ಇರುತ್ತಾರೆ. ಪ್ರಶಾಂತ್​ ಸಂಬರಗಿ, ಚಕ್ರವರ್ತಿ ಚಂದ್ರಚೂಡ್​, ಹಾಗೂ ಶಮಂತ್​ ಗುಂಪು ಮಾಡಿಕೊಂಡಿದ್ದಾರೆ. ಶುಭಾ-ಮಂಜು ಒಂದೆಡೆ ಇರುತ್ತಾರೆ. ವೈಷ್ಣವಿ ಎಲ್ಲರ ಜತೆಯೂ ಬೆರೆತರೂ ಬೆರೆಯದಂತೆ ಇರುತ್ತಾರೆ.  ಈ ಕಾರಣಕ್ಕೆ ದಿವ್ಯಾಗೆ ಜತೆ ಸಿಗುತ್ತಿಲ್ಲ. ಹೀಗಾಗಿ, ಒಬ್ಬರೇ ಕೂತು ಅವರು ಅತ್ತಿದ್ದಾರೆ.

ದಿವ್ಯಾ ಅತ್ತ ವಿಚಾರ ಮಂಜು ಗಮನಕ್ಕೆ ಬಂದಿದೆ. ನಿನ್ನೆ ಅಳುತ್ತಿದ್ದೆ ಏಕೆ ಎಂದು ಪ್ರಶ್ನೆ ಮಾಡಿದ್ದಾರೆ ಮಂಜು. ‘ನೀವೆಲ್ಲ ನಿಮ್ಮ ಫ್ರೆಂಡ್ಸ್​ ಜತೆ ಸಮಯ ಕಳೆಯೋದು ನೋಡಿದ್ರೆ ನನಗೆ ಬೇಜಾರು ಆಗುತ್ತೆ. ನನಗೂ ನನ್​ ಫ್ರೆಂಡ್ ಇದ್ದರೆ ನಾನು ಅವಳ ಜತೆ ಸುದ್ದಿ ಹೇಳಿಕೊಂಡಿರಬಹುದಿತ್ತು ಅನ್ನಿಸಿತು ಅಷ್ಟೇ’ ಎಂದಿದ್ದಾರೆ ದಿವ್ಯಾ.

(Divya Suresh Feels Lonely In Bigg Boss Kannada House)

ಇದನ್ನೂ ಓದಿ: ‘ಮುಂದಿನ ವರ್ಷ ಮದುವೆ, ನನ್ನದು ಅರೇಂಜ್​ ಮ್ಯಾರೇಜ್’​; ವಿವಾಹದ ಬಗ್ಗೆ ಮತ್ತೊಮ್ಮೆ ಮೌನ ಮುರಿದ ವೈಷ್ಣವಿ

ಬಿಗ್ ಬಾಸ್ ಮನೆಯಲ್ಲಿ ಅವಘಡ; ದಿವ್ಯಾ ಉರುಡುಗ ಹೊಡೆದ ಫೋರ್ಸ್​ಗೆ ಗಾಜು ನುಚ್ಚುನೂರು, ಕೈಯಲ್ಲಿ ರಕ್ತ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada