ಬಿಗ್​ ಬಾಸ್​ ಮನೆಯಲ್ಲಿ ಇದೇ ಮೊದಲ ಬಾರಿಗೆ ತಾಳ್ಮೆ ಕಳೆದುಕೊಂಡ ವೈಷ್ಣವಿ; ಪ್ರಶಾಂತ್​ ವಿರುದ್ಧ ತಿರುಗಿಬಿದ್ದ ನಟಿ

ಬಿಗ್​ ಬಾಸ್​ ಮನೆಯಲ್ಲಿ ವೈಷ್ಣವಿ ಗೌಡ ಯಾರ ತಂಟೆಗೂ ಅಷ್ಟಾಗಿ ಹೋಗುವುದಿಲ್ಲ. ತಾವಾಯಿತು ತಮ್ಮ ಕೆಲಸವಾಯಿತು ಎಂದು ಸುಮ್ಮನುಳಿಯುತ್ತಾರೆ. ಜಗಳವಾಡುವ ಪರಿಸ್ಥಿತಿ ಬಂದರೂ ಅದನ್ನು ತಿಳಿ ಗೊಳಿಸುವ ಕಲೆ ವೈಷ್ಣವಿಗೆ ಕರಗತವಾಗಿದೆ.

ಬಿಗ್​ ಬಾಸ್​ ಮನೆಯಲ್ಲಿ ಇದೇ ಮೊದಲ ಬಾರಿಗೆ ತಾಳ್ಮೆ ಕಳೆದುಕೊಂಡ ವೈಷ್ಣವಿ; ಪ್ರಶಾಂತ್​ ವಿರುದ್ಧ ತಿರುಗಿಬಿದ್ದ ನಟಿ
ಬಿಗ್​ ಬಾಸ್​ ಮನೆಯಲ್ಲಿ ಇದೇ ಮೊದಲ ಬಾರಿಗೆ ನಿಯಂತ್ರಣ ಕಳೆದುಕೊಂಡ ವೈಷ್ಣವಿ; ಪ್ರಶಾಂತ್​ ವಿರುದ್ಧ ತಿರುಗಿಬಿದ್ದ ನಟಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jul 20, 2021 | 6:28 PM

ನಟಿ ವೈಷ್ಣವಿ ಗೌಡ ಕನ್ನಡ ಬಿಗ್​ ಬಾಸ್​ ಎಂಟನೇ ಸೀಸನ್​ನಲ್ಲಿ ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ. ಅವರ ಮೌನ, ಅವರ ನಗು, ಅವರ ವಿಚಾರಧಾರೆಗಳು ಎಲ್ಲರಿಗೂ ಇಷ್ಟವಾಗಿದೆ. ಆದರೆ, ಇದೇ ಮೊದಲ ಬಾರಿಗೆ ಅವರು ಕೋಪದ ವಿಚಾರದಲ್ಲಿ ತಾಳ್ಮೆ ಕಳೆದುಕೊಂಡಿದ್ದಾರೆ. ಈ ವಿಡಿಯೋ ನೋಡಿದ ವೀಕ್ಷಕರು ಸಾಕಷ್ಟು ಅಚ್ಚರಿ ಹೊರ ಹಾಕಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ವೈಷ್ಣವಿ ಗೌಡ ಯಾರ ತಂಟೆಗೂ ಅಷ್ಟಾಗಿ ಹೋಗುವುದಿಲ್ಲ. ತಾವಾಯಿತು ತಮ್ಮ ಕೆಲಸವಾಯಿತು ಎಂದು ಸುಮ್ಮನುಳಿಯುತ್ತಾರೆ. ಜಗಳವಾಡುವ ಪರಿಸ್ಥಿತಿ ಬಂದರೂ ಅದನ್ನು ತಿಳಿ ಗೊಳಿಸುವ ಕಲೆ ವೈಷ್ಣವಿಗೆ ಕರಗತವಾಗಿದೆ. ಹೀಗಾಗಿ ಬಿಗ್​ ಬಾಸ್​ ಮನೆಯಲ್ಲಿ ಯಾರ ಜತೆಗೂ ಅವರು ಜಗಳ ಮಾಡಿಕೊಂಡಿಲ್ಲ.

ಇನ್ನು ಬಿಗ್​ ಬಾಸ್​ ಮನೆಯಲ್ಲಿ ಮಾತಿನ ಮೂಲಕ ಏಟು ಕೊಡೋದರಲ್ಲಿ ವೈಷ್ಣವಿ ಅವರದ್ದು ಎತ್ತಿದ ಕೈ. ಇದನ್ನು ಸುದೀಪ್​ ಕೂಡ ಸಾಕಷ್ಟು ಬಾರಿ ಹೇಳಿದ್ದಾರೆ. ಮನೆ ಮಂದಿಯೂ ಇದನ್ನೂ ಒಪ್ಪಿಕೊಂಡಿದ್ದಾರೆ. ಆದರೆ, ಈ ವಾರ ಅದು ಸುಳ್ಳಾಗಿದೆ. ವೈಷ್ಣವಿ ನಡೆದುಕೊಂಡ ರೀತಿಗೆ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್​ಗೆ ಆಯ್ಕೆ ಆಗೋಕೆ ನಾನಾ-ನೀನಾ ಎನ್ನುವ ಟಾಸ್ಕ್​ ನೀಡಲಾಗಿದೆ. ಈ ಟಾಸ್ಕ್​ ಅಡಿಯಲ್ಲಿ ಸಾಕಷ್ಟು ಸ್ಪರ್ಧೆಗಳನ್ನು ನೀಡಲಾಗುತ್ತಿದೆ. ಸ್ಪರ್ಧಿಗಳು ಬೆನ್ನಿಗೆ ಗೋಣಿಚೀಲ ಕಟ್ಟಿಕೊಂಡು ವೃತ್ತಗಳ ಒಳಗೆ ಓಡಬೇಕು. ಮುಂದಿನ ಸದಸ್ಯರ ಚೀಲವನ್ನು ಖಾಲಿ ಮಾಡಬೇಕು. ಈ ವೇಳೆ ವೈಷ್ಣವಿ ಹಿಂದೆ ಇದ್ದ ಪ್ರಶಾಂತ್​ ಚೀಲವನ್ನು ಗಟ್ಟಿಯಾಗಿ ಎಳೆದಿದ್ದಾರೆ. ಇದು ವೈಷ್ಣವಿ ಅವರ ಕೋಪಕ್ಕೆ ಕಾರಣವಾಗಿದೆ. ಅವರು ಸಿಟ್ಟಿನಿಂದ ಪ್ರಶಾಂತ್​ ಮೇಲೆ ಕೈ ಎತ್ತೋಕೆ ಹೋದಂತೆ ಕಂಡು ಬಂದಿದೆ. ಕಲರ್ಸ್​ ಕನ್ನಡ ವಾಹಿನಿ ಈ ಪ್ರೋಮೋವನ್ನು ಹಂಚಿಕೊಂಡಿದೆ. ಪೂರ್ತಿ ಪ್ರಮಾಣದ ಎಪಿಸೋಡ್​ ಇಂದು (ಜುಲೈ 20) ಪ್ರಸಾರವಾಗಲಿದೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಾಕಿದ್ದಾರೆ ಕೀಟ; ಸುದೀಪ್​ ಎದುರು ಹೇಳಿಕೊಂಡ ಸಂಬರಗಿ

ಪ್ರಿಯಾಂಕಾಗೆ ಅಶ್ಲೀಲ ಸನ್ನೆ ತೋರಿಸಿದ ಚಕ್ರವರ್ತಿ; ಬಿಗ್​ ಬಾಸ್​ ನೀಡ್ತೀರೋ ಶಿಕ್ಷೆ ಏನು?

Published On - 6:26 pm, Tue, 20 July 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ