ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಾಕಿದ್ದಾರೆ ಕೀಟ; ಸುದೀಪ್​ ಎದುರು ಹೇಳಿಕೊಂಡ ಸಂಬರಗಿ

ಪ್ರಶಾಂತ್​ ಸಂಬರಗಿ ಬಿಗ್​ ಬಾಸ್​ ಮನೆ ಸೇರಿದಾಗಿನಿಂದಲೂ ಅನ್ಯಾಯದ ವಿರುದ್ಧ ಹೋರಾಟ ಎಂದು ಕೂಗಾಡಿಕೊಂಡಿದ್ದರು. ಪ್ರತಿ ವಾರ ಬಿಗ್​ ಬಾಸ್​ ಮನೆಯಲ್ಲಿ ಈ ವಿಚಾರ ಚರ್ಚೆ ಆಗುತ್ತಿತ್ತು. ‘

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಾಕಿದ್ದಾರೆ ಕೀಟ; ಸುದೀಪ್​ ಎದುರು ಹೇಳಿಕೊಂಡ ಸಂಬರಗಿ
ಬಿಗ್​ ಬಾಸ್​ ಕನ್ನಡ - ಕಿಚ್ಚ ಸುದೀಪ್​
TV9kannada Web Team

| Edited By: Rajesh Duggumane

Jul 18, 2021 | 4:22 PM

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಂಬರಗಿ ಅನೇಕ ವಿಚಾರಗಳಿಗೆ ಸುದ್ದಿಯಾಗುತ್ತಾರೆ. ಮನೆಯಲ್ಲಿ ಅವರು ಮಾತನಾಡುವ ವಿಚಾರ ವೀಕೆಂಡ್​ನಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತದೆ.  ಈ ವಾರ ನೊಣದ ವಿಚಾರ ಚರ್ಚೆಯಾಗಿದೆ. ಬಿಗ್​ ಬಾಸ್​ ಮನೆಯಲ್ಲಿ ಒಂದು ನೊಣ ಇದೆ. ಅದಕ್ಕೆ ಪ್ರಶಾಂತ್​ ಪ್ರೀತಿಯಿಂದ ಹೆಸರನ್ನು ಕೂಡ ಇಟ್ಟಿದ್ದಾರೆ.

ಪ್ರಶಾಂತ್​ ಸಂಬರಗಿ ಬಿಗ್​ ಬಾಸ್​ ಮನೆ ಸೇರಿದಾಗಿನಿಂದಲೂ ಅನ್ಯಾಯದ ವಿರುದ್ಧ ಹೋರಾಟ ಎಂದು ಕೂಗಾಡಿಕೊಂಡಿದ್ದರು. ಪ್ರತಿ ವಾರ ಬಿಗ್​ ಬಾಸ್​ ಮನೆಯಲ್ಲಿ ಈ ವಿಚಾರ ಚರ್ಚೆ ಆಗುತ್ತಿತ್ತು. ‘ನಿಮ್ಮಲ್ಲಿ ಮಗುವಿನಂತಹ ಮನಸ್ಸು ಇದೆ. ಅದನ್ನು ಕಳೆದುಕೊಳ್ಳಬೇಡಿ’ ಎಂದಿದ್ದರು ಸುದೀಪ್​. ಇದಾದ ನಂತರದಲ್ಲಿ ಚಕ್ರವರ್ತಿ ಸಾಕಷ್ಟು ಬದಲಾಗಿದ್ದಾರೆ.

‘ನೀವು ಮಾಡುವ ಹೋರಾಟ ಗೊತ್ತಿದೆ. ಆದರೆ, ನೊಣ ಸಾಕುವ ಹವ್ಯಾಸ ಗೊತ್ತಿರಲಿಲ್ಲ. ಇದನ್ನು ಯಾವಾಗಿಂದ ಆರಂಭವಾಗಿದೆ’ ಎಂದು ಪ್ರಶ್ನೆ ಮಾಡಿದರು ಸುದೀಪ್​. ‘ಬಿಗ್​ ಬಾಸ್​ ಮನೆಯಲ್ಲಿ ಇರೋದು ಒಂದೇ ನೊಣ ಇದೆ. ಆ ನೊಣ ಬಂದು ಕೈ ಮೇಲೆ ಕೂರುತ್ತದೆ. ಹೊಡೆದರೂ ಹೋಗಲ್ಲ. ಇದಕ್ಕೆ ಭಯವೇ ಇಲ್ಲವಲ್ಲ ಎಂದುಕೊಂಡೆ. ಎಲ್ಲಿದ್ರೂ ಬಂದು ಕೈ ಮೇಲೆ ಬಂದು ಕೂರುತ್ತದೆ. ನಾವು ನಾಯಿಮರಿಯಂತೆ ಅದಕ್ಕೆ ಹೆಸರಿಟ್ಟಿದ್ದೇವೆ. ಆ ನೊಣವನ್ನು ಪ್ರೀತಿಂದ ಚಿನ್ನುಮರಿ ಎಂದು ಹೆಸರು ಇಟ್ಟಿದ್ದೇವೆ’ ಎಂದು ವಿವರಣೆ ನೀಡಿದರು ಚಕ್ರವರ್ತಿ.

‘ಶನಿವಾರದ ಎಪಿಸೋಡ್​ ನಡೆಸಿಕೊಡ್ತಾ ಇರ್ತೀವಿ. ಹೋಗಿ ನೊಣವನ್ನು ಕರೆದುಕೊಂಡು ಬನ್ನಿ’ ಎಂದರು ಸುದೀಪ್. ಇದಕ್ಕೆ ಮನೆ ಮಂದಿ ಎಲ್ಲರೂ ನಕ್ಕರು.

ಈ ಮೊದಲು ಸೊಳ್ಳೆ ವಿಚಾರಕ್ಕೆ ಪ್ರಶಾಂತ್​ ಚರ್ಚೆಯಾಗಿದ್ದರು. ‘ಕಟ್ಟಡದ ಎತ್ತರಕ್ಕೆ ಹೋದಂತಲ್ಲ ಸೊಳ್ಳೆ ಇರಲ್ಲ. ಗಾಳಿಗೆ ಅವು ಮೇಲೆ ಬರೋಲ್ಲ. ಆದರೆ, ಲಿಫ್ಟ್​ನಲ್ಲಿ ಏರಿಕೊಂಡು ಮೇಲೆ ಬರ್ತವೆ. ನನಗೆ ಇದು ಅನುಭವ ಆಗಿದೆ’ ಎಂದು ಪ್ರಶಾಂತ್​ ಹೇಳಿದ್ದರು. ಈ ವಿಚಾರದಲ್ಲಿ ಸುದೀಪ್​ ಸಾಕಷ್ಟು ನಗೆ ಚಟಾಕಿ ಹಾರಿಸಿದ್ದರು.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್ ಪ್ರತಿಭಟನೆ; ಸುದೀಪ್ ತೆಗೆದುಕೊಂಡ್ರು ಅಚ್ಚರಿಯ ನಿಲುವು

ಬಿಗ್​ ಬಾಸ್​ ಮನೆಯಲ್ಲಿ ಹಾರಿತು ಕಪ್ಪು ಬಾವುಟ; ಏಕಾಂಗಿಯಾದ ಚಕ್ರವರ್ತಿ ಚಂದ್ರಚೂಡ್​?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada