ಬಿಗ್ ಬಾಸ್ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್ ಪ್ರತಿಭಟನೆ; ಸುದೀಪ್ ತೆಗೆದುಕೊಂಡ್ರು ಅಚ್ಚರಿಯ ನಿಲುವು

‘ಬಿಗ್​ ಬಾಸ್​ ಮನೆಯಲ್ಲಿ ನೀವೇ ಕಳಪೆ ಆಗ್ತೀನಿ ಅಂದ್ರಿ. ಮನೆಯವರೆಲ್ಲರೂ ಕಳಪೆ ಕೊಟ್ಟಾಗ, ನೀವೆ ಇದನ್ನು ವಿರೋಧಿಸಿದ್ರಿ ಏಕೆ’ ಎಂದು ಪ್ರಶ್ನಿಸಿದರು ಸುದೀಪ್​.

ಬಿಗ್ ಬಾಸ್ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್ ಪ್ರತಿಭಟನೆ; ಸುದೀಪ್ ತೆಗೆದುಕೊಂಡ್ರು ಅಚ್ಚರಿಯ ನಿಲುವು
ಬಿಗ್ ಬಾಸ್ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್ ಪ್ರತಿಭಟನೆ; ಸುದೀಪ್ ತೆಗೆದುಕೊಂಡ್ರು ಅಚ್ಚರಿಯ ನಿಲುವು
TV9kannada Web Team

| Edited By: Vinay Bhat

Jul 18, 2021 | 6:44 AM

ಬಿಗ್​ ಬಾಸ್​ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್​ ಅವರಿಗೆ ಕಳಪೆ ಎಂದು ಕೊಟ್ಟ ವಿಚಾರ ಸಾಕಷ್ಟು ವಿಚಾರಗಳಿಗೆ ನಾಂದಿ ಹಾಡಿತ್ತು. ಚಕ್ರವರ್ತಿ ಚಂದ್ರಚೂಡ್ ಅವರು ಬಿಗ್​ ಬಾಸ್​ ಮನೆಯಲ್ಲಿ ಈ ಬಗ್ಗೆ ದೊಡ್ಡ ಪ್ರತಿಭಟನೆಯನ್ನೇ ಮಾಡಿದ್ದಾರೆ. ಈ ಬಗ್ಗೆ ವಾರದ ಪಂಚಾಯ್ತಿಯಲ್ಲಿ ಚರ್ಚೆ ಆಗಿದೆ. ಸುದೀಪ್​ ಈ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ.

‘ಬಿಗ್​ ಬಾಸ್​ ಮನೆಯಲ್ಲಿ ನೀವೇ ಕಳಪೆ ಆಗ್ತೀನಿ ಅಂದ್ರಿ. ಮನೆಯವರೆಲ್ಲರೂ ಕಳಪೆ ಕೊಟ್ಟಾಗ, ನೀವೆ ಇದನ್ನು ವಿರೋಧಿಸಿದ್ರಿ ಏಕೆ’ ಎಂದು ಪ್ರಶ್ನಿಸಿದರು ಸುದೀಪ್​. ‘ಕಳಪೆ ಪಟ್ಟ ಕೊಡುವಾಗ ನೀಡುವ ಕಾರಣ ಸರಿಯಾಗಿರಬೇಕು. ಆದರೆ, ಅವರು ನೀಡಿದ ಕಾರಣ ನನಗೆ ಕನ್ವಿನ್ಸ್​ ಆಗಿಲ್ಲ. ಹೀಗಾಗಿ, ನಾನು ಜೈಲಿನಲ್ಲಿ ಪ್ರತಿಭಟನೆ ನಡೆಸಿದ್ದೇನೆ. ಬಿಗ್​ ಬಾಸ್​ ಮನೆಯಲ್ಲಿ ರಾಜಕೀಯ ನಡೆಯುತ್ತಿದೆ. ಇಲ್ಲಿ ಎಲ್ಲವೂ ಸುಳ್ಳು’ ಎಂದರು ಚಕ್ರವರ್ತಿ.

ಇದಕ್ಕೆ ಉತ್ತರಿಸಿದ ಸುದೀಪ್​, ‘ಬಿಗ್​ ಬಾಸ್ ಮನೆಯಲ್ಲಿ ಕಳಪೆ ಕೊಡೋದು ಅವರ ಒಪಿನೀಯನ್​. ಅದು ಅವರವರಿಗೆ ಬಿಟ್ಟಿದ್ದು. ಒಂದು ವಾರ ಟಾಸ್ಕ್​ ಕೊಡಲ್ಲ. ಯಾರು ಯಾರ ಜತೆಯೂ ಮಾತನಾಡುವ ಹಾಗಿಲ್ಲ ಎಂದು ನಿಯಮ ತಂದರೆ ಹೇಗಿರುತ್ತದೆ?’ ಎಂದು ಸುದೀಪ್​ ಪ್ರಶ್ನೆ ಮಾಡಿದರು.

‘ಬಿಗ್​ ಬಾಸ್​ ಮನೆಯಲ್ಲಿ ಅತ್ಯುತ್ತಮ ಎನ್ನುವ ಬಿರುದು ನೀಡುತ್ತಾರೆ. ಆದರೆ, ಅದಕ್ಕೆ ನೀಡಿದ ಕಾರಣ ಸರಿ ಇರಲ್ಲ. ಇದರ ಬಗ್ಗೆ ಯಾರೊಬ್ಬರೂ ಮಾತನಾಡಿಯೇ ಇಲ್ಲ. ಕಳಪೆ ಎಂದಾಗ ಮಾತ್ರ ನೀವು ಈ ರೀತಿ ಮಾಡ್ತೀರಿ. ಜೈಲಿಗೆ ಹೋದ ಕೆಲವರು ತರ್ಲೆ ಮಾಡಿದಾರೆ, ಸಾಕಷ್ಟು ಜನ ಎಂಟರ್​​ಟೇನ್​ ನೀಡಿದ್ದಾರೆ. ಜೈಲು​ ಬಿಗ್​ ಬಾಸ್​ನ ಒಂದು ಭಾಗ’ ಅಷ್ಟೇ ಎಂದರು ಸುದೀಪ್​.

‘ಕಳಪೆ ಅನ್ನೋದನ್ನು ಮಾತ್ರ ಯಾಕೆ ಅಷ್ಟು ಚರ್ಚೆ ಮಾಡ್ತೀರಾ? ಮನೆಯವರ ಅಭಿಪ್ರಾಯ ತಿಳಿಸೋಕೆ ಇರೋದು ಅದು. ನೀವು ಏನೇ ಮಾಡಿದರು ಅದನ್ನು ಜನರು ನೋಡುತ್ತಿರುತ್ತಾರೆ’ ಎಂದು ಸುದೀಪ್​ ಮಾತು ಮುಗಿಸಿದರು.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಹಾರಿತು ಕಪ್ಪು ಬಾವುಟ; ಏಕಾಂಗಿಯಾದ ಚಕ್ರವರ್ತಿ ಚಂದ್ರಚೂಡ್​?

ಬಿಗ್​ ಬಾಸ್​ ವೂಟ್ ನಿರೂಪಣೆಗೆ ಬರಲಿದ್ದಾರೆ ಹೊಸ ನಿರೂಪಕರು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada