ಬಿಗ್ ಬಾಸ್ ಮನೆಯಲ್ಲಿ ಶೀಘ್ರವೇ ನಡೆಯಲಿದೆ ಡಬಲ್ ಎಲಿಮಿನೇಷನ್?
ಎರಡನೇ ಇನ್ನಿಂಗ್ಸ್ ಆರಂಭವಾಗುವಾಗ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಒಂದು ತಿಂಗಳು ನಡೆಯಲಿದೆ ಎಂದಿದ್ದರು. ಅವರು ಹೇಳಿದಂತೆ ಆಗಿದ್ದರೆ ಇನ್ನೊಂದು ವಾರದಲ್ಲಿ ಬಿಗ್ ಬಾಸ್ ಪೂರ್ಣಗೊಳ್ಳಬೇಕು.

‘ಬಿಗ್ ಬಾಸ್ ಸೀಸನ್ 8’ ಅಂತಿಮ ಘಟ್ಟ ತಲುಪಿದೆ. ಬಿಗ್ ಬಾಸ್ ಮನೆಯಲ್ಲಿ 10 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಇವರಲ್ಲಿ ಓರ್ವ ಸ್ಪರ್ಧಿ ಭಾನುವಾರ (ಜುಲೈ 18) ಹೊರ ಹೋಗುವುದು ಖಚಿತವಾಗಿದೆ. ಆ ನಂತರ ಮನೆಯಲ್ಲಿ ಉಳಿಯೋದು 9 ಸ್ಪರ್ಧಿಗಳು. ಈ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ಡಬಲ್ ಎಲಿಮಿನೇಷನ್ ನಡೆಯುವ ಸಾಧ್ಯತೆ ದಟ್ಟವಾಗಿದೆ.
ಎರಡನೇ ಇನ್ನಿಂಗ್ಸ್ ಆರಂಭವಾಗುವಾಗ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಒಂದು ತಿಂಗಳು ನಡೆಯಲಿದೆ ಎಂದಿದ್ದರು. ಅವರು ಹೇಳಿದಂತೆ ಆಗಿದ್ದರೆ ಇನ್ನೊಂದು ವಾರದಲ್ಲಿ ಬಿಗ್ ಬಾಸ್ ಪೂರ್ಣಗೊಳ್ಳಬೇಕು. ಮೂಲಗಳ ಪ್ರಕಾರ ಇನ್ನೂ ಸ್ವಲ್ಪ ವಾರ ಬಿಗ್ ಬಾಸ್ ಮುಂದುವರಿಯಲಿದೆ ಎನ್ನಾಗುತ್ತಿದೆ.
ಪ್ರತಿ ಸೀಸನ್ನಲ್ಲೂ ಕೆಲ ಸಾಮಾನ್ಯ ವಿಚಾರಗಳು ಬಿಗ್ ಬಾಸ್ ಮನೆಯಲ್ಲಿ ಕಂಡುಬರುತ್ತವೆ. ಅದರಲ್ಲಿ ವೈಲ್ಡ್ ಕಾರ್ಡ್, ಡಬಲ್ ಎಲಿಮಿನೇಷನ್ ಕೂಡ ಒಂದು. ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಮೂರು ಜನರ ವೈಲ್ಡ್ ಕಾರ್ಡ್ ಎಂಟ್ರಿ ಆಗಿದೆ. ಆದರೆ, ಈ ವರೆಗೆ ಡಬಲ್ ಎಲಿಮಿನೇಷನ್ ಆಗಿಲ್ಲ. ಅಲ್ಲದೆ, ದಿನಗಳು ಕಡಿಮೆ ಇದ್ದು, ಸ್ಪರ್ಧಿಗಳ ಸಂಖ್ಯೆ ಹೆಚ್ಚಿದೆ. ಈ ಕಾರಣಕ್ಕೆ ಶೀಘ್ರವೇ ಡಬಲ್ ಎಲಿಮಿನೇಷನ್ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಈ ವಾರ ಪ್ರಶಾಂತ್ ಸಂಬರಗಿ, ಪ್ರಿಯಾಂಕಾ ತಿಮ್ಮೇಶ್, ವೈಷ್ಣವಿ ಗೌಡ, ಶುಭಾ ಪೂಂಜಾ ನಾಮಿನೇಷನ್ ಲಿಸ್ಟ್ನಲ್ಲಿದ್ದಾರೆ. ಶನಿವಾರದ ಎಪಿಸೋಡ್ನಲ್ಲಿ ಅತಿ ಹೆಚ್ಚು ವೋಟ್ ಪಡೆದು ವೈಷ್ಣವಿ ಸೇವ್ ಆಗಿದ್ದಾರೆ. ಪ್ರಿಯಾಂಕಾ ತಿಮ್ಮೇಶ್, ಶುಭಾ ಪೂಂಜಾ ಹಾಗೂ ಪ್ರಾಶಾಂತ್ ಸಂಬರಗಿ ನಡುವೆ ಒಬ್ಬರು ಎಲಿಮಿನೇಟ್ ಆಗಲಿದ್ದಾರೆ. ಹೀಗಾಗಿ, ಈ ವಾರ ಡಬಲ್ ಎಲಿಮಿನೇಷನ್ ನಡೆಯುವುದಿಲ್ಲ.
ಈ ಎಲ್ಲಾ ಕಾರಣಗಳನ್ನು ಗಮನಿಸಿದರೆ ಮುಂದಿನವಾರ ಅಥವಾ ಅದಕ್ಕೂ ಮುಂದಿನ ವಾರ ಡಬಲ್ ಎಲಿಮಿನೇಷನ್ ನಡೆಯುವ ಸಾಧ್ಯತೆ ಇದೆ ಎನ್ನುವ ಮಾತು ಕೇಳಿ ಬಂದಿದೆ. ಸುದೀಪ್ ಜತೆ ಒಟ್ಟಿಗೆ ವೇದಿಕೆ ಹಂಚಿಕೊಳ್ಳುವ ಆ ಇಬ್ಬರು ಸ್ಪರ್ಧಿಗಳು ಯಾರು ಎನ್ನುವುದು ಸದ್ಯದ ಕುತೂಹಲ.
ಇದನ್ನೂ ಓದಿ: ಬಿಗ್ ಬಾಸ್ ವೂಟ್ ನಿರೂಪಣೆಗೆ ಬರಲಿದ್ದಾರೆ ಹೊಸ ನಿರೂಪಕರು
ಬಿಗ್ ಬಾಸ್ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್ ಪ್ರತಿಭಟನೆ; ಸುದೀಪ್ ತೆಗೆದುಕೊಂಡ್ರು ಅಚ್ಚರಿಯ ನಿಲುವು