ಬಾಯ್​ಫ್ರೆಂಡ್​ ಬಗ್ಗೆ ಹೊಸ ದೂರು ತಂದ ಆಮಿರ್ ಖಾನ್​ ಮಗಳು ಇರಾ ಖಾನ್​

ಇರಾ ಖಾನ್​ ಅವರು ನೂಪುರ್​ ಶಿಖಾರೆ ಜತೆ ರಿಲೇಶನ್​ಶಿಪ್​ನಲ್ಲಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಹಾಗೂ ಅವರ ಮಕ್ಕಳು ತಮ್ಮ ಪ್ರೀತಿ-ಪ್ರೇಮದ ವಿಚಾರವನ್ನು ಎಲ್ಲಿಯೂ ಹೇಳಿಕೊಳ್ಳುವುದಿಲ್ಲ

ಬಾಯ್​ಫ್ರೆಂಡ್​ ಬಗ್ಗೆ ಹೊಸ ದೂರು ತಂದ ಆಮಿರ್ ಖಾನ್​ ಮಗಳು ಇರಾ ಖಾನ್​
ಬಾಯ್​ಫ್ರೆಂಡ್​ ಬಗ್ಗೆ ಹೊಸ ದೂರು ತಂದ ಆಮಿರ್ ಖಾನ್​ ಮಗಳು ಇರಾ ಖಾನ್​

ಸೆಲೆಬ್ರಿಟಿಗಳ ಮಕ್ಕಳ ಬಗ್ಗೆ ಅಭಿಮಾನಿಗಳಿಗೆ ಎಲ್ಲಿಲ್ಲದ ಆಸಕ್ತಿ. ಸೆಲೆಬ್ರಿಟಿ ಮಕ್ಕಳು ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟಿವ್​ ಆಗಿದ್ದರೆ ಅವರನ್ನು ಅಭಿಮಾನಿಗಳು ಫಾಲೋ ಮಾಡುತ್ತಾರೆ. ಖ್ಯಾತ ನಟ ಆಮಿರ್​ ಖಾನ್​ ಮಗಳು ಇರಾ ಖಾನ್​ ಕೂಡ ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟಿವ್​ ಆಗಿದ್ದಾರೆ. ಈಗ ಅವರು ಫೋಟೋ ಒಂದನ್ನು ಹಂಚಿಕೊಂಡಿದ್ದು ಅಭಿಮಾನಿಗಳು ಖುಷಿಯಾಗಿದ್ದಾರೆ.

ಇರಾ ಖಾನ್​ ಅವರು ನೂಪುರ್​ ಶಿಖಾರೆ ಜತೆ ರಿಲೇಶನ್​ಶಿಪ್​ನಲ್ಲಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಹಾಗೂ ಅವರ ಮಕ್ಕಳು ತಮ್ಮ ಪ್ರೀತಿ-ಪ್ರೇಮದ ವಿಚಾರವನ್ನು ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ಆದರೆ, ಇರಾ ಆ ರೀತಿ ಅಲ್ಲ. ಏನೇ ಇದ್ದರೂ ಅದನ್ನು ಅವರು ಓಪನ್​ ಆಗಿ ಹೇಳಿಕೊಳ್ಳುತ್ತಾರೆ.  ಬಾಯ್​ಫ್ರೆಂಡ್​ ಜತೆ ಸಮಯ ಕಳೆಯುವುದನ್ನು ಹೇಳಿಕೊಳ್ಳುತ್ತಾರೆ.

 

View this post on Instagram

 

A post shared by Ira Khan (@khan.ira)

ಈಗ ಇರಾ ಅವರು ಬಾಯ್​ಫ್ರೆಂಡ್​ ಜತೆ ಕುಳಿತಿರುವ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ‘ಆತ ತುಂಬಾನೇ ನಾಟಕವಾಡುತ್ತಾನೆ’ ಎಂದು ಪ್ರೀತಿಯಿಂದ ದೂರಿದ್ದಾರೆ. ಇದಕ್ಕೆ ನೂಪುರ್ ಕಮೆಂಟ್​ ಮಾಡಿದ್ದಾರೆ. ‘ನಾನು ನಾಟಕವಾಡ್ತೀನಾ? ನಾನಾ? ಇಲ್ಲ, ಇಲ್ಲ. ಅದು ಆಗಿದ್ದರೂ ಆಗಬಹುದು. ಆದರೆ, ನಾನು ನಿನ್ನನ್ನು ಪ್ರೀತಿಸುತ್ತೀನಲ್ಲ’ ಎಂದು ನೂಪುರ್​ ಬರೆದುಕೊಂಡಿದ್ದಾರೆ.

1986ರಲ್ಲಿ ನಟಿ ರೀನಾ ದತ್ತ ಜೊತೆ ಆಮಿರ್​ ಖಾನ್​ ಮೊದಲ ಮದುವೆ ಆಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳು (ಪುತ್ರ ಜುನೈದ್​, ಪುತ್ರಿ ಇರಾ) ಜನಿಸಿದರು. 2002ರಲ್ಲಿ ಆಮಿರ್​ ಮತ್ತು ರೀನಾ ಡಿವೋರ್ಸ್​ ಪಡೆದುಕೊಂಡರು. ಇಬ್ಬರ ಮಕ್ಕಳ ಜವಾಬ್ದಾರಿಯನ್ನು ರೀನಾ ಹೊತ್ತುಕೊಂಡರು. ಮೊದಲ ಪತ್ನಿಯ ಮಕ್ಕಳ ಜೊತೆ ಆಮಿರ್​ ಖಾನ್​ ಇಂದಿಗೂ ಚೆನ್ನಾಗಿಯೇ ಇದ್ದಾರೆ. ರೀನಾ ದತ್ತಾ ಜತೆ ವಿಚ್ಛೇದನ ಪಡೆದ ನಂತರದಲ್ಲಿ ಆಮಿರ್​ ಖಾನ್​ ಕಿರಣ್​ ರಾವ್​ ಅವರನ್ನು ಮದುವೆ ಆಗಿದ್ದರು. ಇತ್ತೀಚೆಗೆ ಇಬ್ಬರೂ ಬೇರೆ ಆಗುತ್ತಿರುವ ಬಗ್ಗೆ ಘೋಷಣೆ ಮಾಡಿದ್ದರು.

‘ಈ 15 ವರ್ಷಗಳ ಜೀವನವನ್ನು ನಾವು ಖುಷಿ ಮತ್ತು ಸಂತೋಷದಿಂದ ಕಳೆದಿದ್ದೇವೆ. ನಂಬಿಕೆ, ಪ್ರೀತಿ ಮತ್ತು ಗೌರವದಿಂದ ನಮ್ಮ ಸಂಬಂಧ ಬೆಳೆದಿತ್ತು. ಈಗ ನಾವು ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸುತ್ತಿದ್ದೇವೆ. ಇನ್ಮುಂದೆ ನಾವು ಪತಿ-ಪತ್ನಿ ಅಲ್ಲ. ಆದರೆ ಅಜಾದ್​ನ ಪಾಲಕರಾಗಿ, ಆ ಮೂಲಕ ಕುಟುಂಬದವರಾಗಿ ಇರುತ್ತೇವೆ. ಬೇರೆಯಾಗುವ ಬಗ್ಗೆ ಕೆಲವು ಸಮಯದ ಹಿಂದೆಯೇ ಯೋಚಿಸಿದ್ದೆವು. ಮಗನನ್ನು ಜೊತೆಯಾಗಿ ಬೆಳೆಸುತ್ತೇವೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿತ್ತು.

‘ನಮಗೆ ಬೆಂಬಲವಾಗಿ ನಿಂತಿರುವ ಕುಟುಂಬದವರು ಮತ್ತು ಸ್ನೇಹಿತರಿಗೆ ಧನ್ಯವಾದಗಳು. ನಮಗೆ ಶುಭ ಹಾರೈಸಬೇಕು ಎಂದು ಎಲ್ಲ ಹಿತೈಷಿಗಳಲ್ಲಿ ಕೇಳಿಕೊಳ್ಳುತ್ತೇವೆ. ಈ ವಿಚ್ಛೇದನವನ್ನು ಅಂತ್ಯವೆಂದು ನೋಡದೇ ಒಂದು ಹೊಸ ಆರಂಭದ ರೀತಿ ನೋಡಿ ಎಂದು ವಿನಂತಿಸಿಕೊಳ್ಳುತ್ತೇವೆ. ಪ್ರೀತಿಯಿಂದ- ಆಮಿರ್​ ಖಾನ್​ ಮತ್ತು ಕಿರಣ್​ ರಾವ್​’ ಎಂದು ಹೇಳಿಕೆಯಲ್ಲಿ ಬರೆಯಲಾಗಿತ್ತು.

ಇದನ್ನೂ ಓದಿ: ‘ನಾವು ಖುಷಿಯಾಗಿದ್ದೇವೆ, ನೀವು ಬೇಸರಗೊಳ್ಳಬೇಡಿ’; ವಿಡಿಯೋ ಮೂಲಕ ಫ್ಯಾನ್ಸ್​ಗೆ ಮನವಿ ಮಾಡಿದ ಆಮಿರ್​-ಕಿರಣ್​